ಶಿವಮೊಗ್ಗ:ಇಲಿಗಳಿಗೆ ತಿನ್ನುವ ಪದಾರ್ಥದ ಆಸೆ ತೋರಿಸಿ ಬೋನಿಗೆ ಬೀಳಿಸುವ ವಿಧಾನ ಎಲ್ಲರಿಗೂ ಗೊತ್ತೇ ಇದೆ. ಇದೂ ಕೂಡ ಅಂಥದ್ದೇ ಒಂದು ಘಟನೆ. ಹಣ ಸುಲಭವಾಗಿ ಸಂಪಾದನೆ ಮಾಡಬಹುದು ಎಂದು ಆಸೆ ತೋರಿಸಿ ನೂರು ರೂ ಲಾಭ ಮಾಡಿಕೊಟ್ಟು ಬಲೆಗೆ ಬೀಳಿಸಿಕೊಂಡು ನಂತರ ಲಕ್ಷ ಲಕ್ಷ ಹಣ ಪೀಕಿಸಿಕೊಂಡ ಕತೆ ಇದು.ಕರೊನಾ ಕಾರಣದಿಂದ ಹಲವರು ಮನೆಯಲ್ಲೇ ಕುಳಿತು ಉದ್ಯೋಗ ಮಾಡುತ್ತಿದ್ದು ವರ್ಕ್ ಫ್ರಂ ಹೋಮ್‌ಗೆ ಒಗ್ಗಿ ಹೋಗಿದ್ದಾರೆ. ಇನ್ನು ಕೆಲವರು ಮನೆಯಲ್ಲೇ ಕುಳಿತು ಕೆಲಸ ಮಾಡಿ ಗಳಿಸುವ ಮಾರ್ಗ ಕಂಡುಕೊಳ್ಳಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇಲ್ಲೊಬ್ಬ ವರ್ಕ್ ಫ್ರಂ ಹೋಮ್ ಆಸೆಗೆ ಬಿದ್ದು ಸುಮಾರು 5 ಲಕ್ಷ ರೂ. ಕಳೆದುಕೊಂಡಿದ್ದಾನೆ. ಭದ್ರಾವತಿ ತಾಲೂಕಿನ ಬದನೆಹಾಳ ಗ್ರಾಮದ ಯುವಕ ವಂಚನೆಗೆ ಒಳಗಾಗಿದವ. ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಮುಂದಾದ ಯುವಕನೊಬ್ಬ ಬೋನಸ್ ಮತ್ತು ಕಮೀಷನ್ ಆಸೆಗೆ ಬರೋಬ್ಬರಿ 4.92 ಲಕ್ಷ ರೂ. ಕಳೆದುಕೊಂಡಿದ್ದಾನೆ.ಏನಿದು ಘಟನೆ ?32 ವರ್ಷದ ಯುವಕ ಮನೆಯಲ್ಲೇ ಕುಳಿತು ಕೆಲಸ ಮಾಡಲು ನಿರ್ಧರಿಸಿ ಅಂತಹ ಅವಕಾಶಗಳನ್ನು ಕಂಡುಕೊಳ್ಳಲು ಗೂಗಲ್ ಮೊರೆ ಹೋಗಿದ್ದ. ಹೀಗೆ ಹುಟುಕಾಟ ನಡೆಸುವಾಗ ಶಾಪಿ ಟ್ರಸ್ಟೆಡ್ ಆ್ಯಂಡ್ ಜಿನ್ಯೂನ್ ಎಂಬ ಆ್ಯಪ್ ಸಿಕ್ಕಿತ್ತು. ಅದರಲ್ಲಿ ಮನೆಯಲ್ಲೇ ಕುಳಿತು ವಿವಿಧ ಉತ್ಪನ್ನಗಳಿಗೆ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಬಗ್ಗೆ ಮಾಹಿತಿ ಇತ್ತು. ಅದಕ್ಕೆ ಸಂಬಂಧಿಸಿದಂತೆ ಲಿಂಕ್‌ಗೆ ಕ್ಲಿಕ್ ಮಾಡಿದ್ದು ಆ್ಯಪ್‌ನಲ್ಲಿ ಐಡಿ ತೆರೆದುಕೊಂಡು ಯುವಕನ ಬ್ಯಾಂಕ್ ಖಾತೆಗೆ 100 ರೂ. ಜಮಾ ಕೂಡ ಆಗಿತ್ತು.ಶೇ.100ರಷ್ಟು ಹೂಡಿಕೆ ಮಾಡಿದರೆ ಬೋನಸ್ ಮತ್ತು ಕಮೀಷನ್ ಕೊಡುವುದಾಗಿ ತಿಳಿಸಿದ್ದು ಸುಲಭವಾಗಿ ಹಣ ಗಳಿಕೆ ಆಸೆಗೆ ಬಿದ್ದ ಯುವಕ ಮೊದಲ ಬಾರಿಗೆ 300 ರೂ., ಆನಂತರ 600 ರೂ. ಹೂಡಿಕೆ ಮಾಡಿದ್ದ. ಕ್ರಮವಾಗಿ 334 ಮತ್ತು 721 ರೂ. ಬೋನಸ್ ಮತ್ತು ಕಮೀಷನ್ ರೂಪದಲ್ಲಿ ಯುವಕನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿತ್ತು.ಆನಂತರ ಯುವಕ ಮೇ 3ರಿಂದ 10ರವರೆಗೆ ಫೋನ್ ಪೇ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಆ್ಯಪ್‌ನವರು ನೀಡಿದ ಬ್ಯಾಂಕ್ ಅಕೌಂಟ್‌ಗಳಿಗೆ ಹಾಗೂ ಮೊಬೈಲ್ ನಂಬರ್‌ಗೆ ಹಂತ ಹಂತವಾಗಿ 4,92,402 ರೂ. ವರ್ಗಾವಣೆ ಮಾಡಿದ್ದ. ಸಣ್ಣ ಮೊತ್ತದ ಹೂಡಿಕೆಗೆ ತಕ್ಷಣ ಬೋನಸ್, ಕಮಿಷನ್ ಬಂದಿತ್ತು. ಆದರೆ ದೊಡ್ಡ ಮೊತ್ತದ ಹೂಡಿಕೆ ಮಾಡಿದ ಹಣಕ್ಕೆ ಬೋನಸ್ ಮತ್ತು ಕಮೀಷನ್ ಬಾರದಿದ್ದಾಗ ಪ್ರಶ್ನಿಸಿದ್ದ. ಶೇ.100ರಷ್ಟು ಹೂಡಿಕೆ ಮಾಡಲು ಇನ್ನೂ 90 ಸಾವಿರ ರೂ. ಮಾಡಿದರೆ ಬೋನಸ್ ಮತ್ತು ಕಮೀಷನ್ ಹಣ ಸಿಗಲಿದೆ ಎಂದು ಮರು ಸಂದೇಶ ಬಂದಿತ್ತು. ಇದರಿಂದ ಅನುಮಾನಗೊಂಡ ಯುವಕ ಮನೆಯಲ್ಲೇ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಕಂಪನಿ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.ಅಲ್ಪ ಹಣ ಕೊಟ್ಟು ಲಾಭದ ಆಸೆ ತೋರಿಸಿದ ವಂಚಕರು ದೊಡ್ಡ ಮೊತ್ತದ ಹಣ ಪಡೆದು ಮೋಸ ಮಾಡುತ್ತಿರುವುದು ಗೊತ್ತಾಗಿ ಈಗ ಯುವಕ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.
ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!
ಶಾಸಕ ದೇವೇಗೌಡರ ಮೂರು ವರ್ಷದ ಮೊಮ್ಮಗಳ ನಿಧನ: ಆಸ್ಪತ್ರೆ ಸೇರಿಸಿದರೂ ಫಲಿಸದ ಚಿಕಿತ್ಸೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + twenty =
Remember me
