ಶಿವಮೊಗ್ಗ: ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಕ್ಕೆ ಪಾರ್ಟಿ ಕೊಡಿಸುವಂತೆ ಸದಾ ಪೀಡಿಸುತ್ತಿದ್ದ ನೆರೆಮನೆಯ ಯುವಕನನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಹೊಸಮನೆ ಮೂರನೇ ಕ್ರಾಸ್‌ನ ಕಿರಣ್ ಅಲಿಯಾಸ್ ಪುಚ್ಚಿ (23) ಕೊಲೆಯಾದ ಯುವಕ. ಹೊಸಮನೆಯ ಪ್ರಜ್ವಲ್ ಮತ್ತು ಗಾಡಿಕೊಪ್ಪದ ಕಾರ್ತಿಕ್ ಕೊಲೆ ಮಾಡಿದ್ದು ವಿನೋಬನಗರ ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಕಿರಣ್ ಮತ್ತು ಪ್ರಜ್ವಲ್ ಅಕ್ಕಪಕ್ಕದ ಮನೆಯವರು. ಹೊಸಮನೆ 3ನೇ ಕ್ರಾಸ್‌ನ ನಿವಾಸಿಗಳಾಗಿದ್ದು ಪ್ರಜ್ವಲ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಅದಕ್ಕಾಗಿ ಪಾರ್ಟಿ ಕೊಡಿಸುವಂತೆ ಕಿರಣ್ ಕೇಳುತ್ತಿದ್ದ. ಹಾಗಾಗಿ ಮಂಗಳವಾರ ರಾತ್ರಿ ಕಿರಣ್, ಪ್ರಜ್ವಲ್ ಮತ್ತು ಕಾರ್ತಿಕ್ ಮೂವರು ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿದ್ದರು.
ಈ ವೇಳೆ ಕಿರಣ್ ಎರಡು ಸಾವಿರ ರೂ. ಕೊಡುವಂತೆ ಪ್ರಜ್ವಲ್‌ಗೆ ಕೇಳಿದ್ದ. ಹಣ ಕೊಡಲು ನಿರಾಕರಿಸಿದ್ದಕ್ಕೆ ಪ್ರಜ್ವಲ್ ಮತ್ತು ಕಾರ್ತಿಕ್ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಸಿಟ್ಟಿಗೆಟ್ಟ ಪ್ರಜ್ವಲ್ ಮತ್ತು ಕಾರ್ತಿಕ್, ಕಿರಣ್‌ಗೆ ಕಂಠಪೂರ್ತಿ ಮದ್ಯ ಕುಡಿಸಿ ಅದೇ ಬಾಟಲಿಯಿಂದ ತಲೆಗೆ ಹೊಡೆದಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಕಿರಣ್ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು.
ತೀವ್ರ ರಕ್ತಸ್ರಾವದಿಂದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದು, ಬುಧವಾರ ಬೆಳಗ್ಗೆ ದಾರಿಹೋಕರು ಕೊಲೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಪ್ರಜ್ವಲ್ ಮತ್ತು ಕಾರ್ತಿಕ್‌ನನ್ನು ಬಂಧಿಸಿದ್ದಾರೆ.
ಮೈದುಂಬಿದ ಕೆರೆ ನೋಡಿ ಈಜಲು ಹೋದ 3 ಬಾಲಕರ ದುರ್ಮರಣ: ಸಾವಿನಲ್ಲೂ ಒಂದಾದ ಅವಳಿ ಮಕ್ಕಳು!

ಉತ್ತರ ಪ್ರದೇಶದ ಸರ್ಕಾರಿ ವಕೀಲರಿಗೆ ಬಿಗ್​ ಶಾಕ್​! ಸಾವಿರಾರು ಮಂದಿ ಸೇವೆಯಿಂದ ವಜಾ…

ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು! ಅವರು ಕೊಟ್ಟ ಕಾರಣ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
