ಬೆಂಗಳೂರು:’ಅಪ್ಪು ಹೋಗಿ ನಾಲ್ಕು ತಿಂಗಳಾಯ್ತು. ಈ ನಾಲ್ಕು ತಿಂಗಳಲ್ಲಿ ನಗ್ತೀವೀ, ಊಟ ಮಾಡ್ತೀವಿ, ಶೂಟಿಂಗ್​ನಲ್ಲಿ ಭಾಗಿ ಆಗ್ತಿದ್ದೀವಿ, ಬದುಕಬೇಕು ಬದುಕುತ್ತಾ ಇದ್ದೀವಿ. ಆದ್ರೆ ಒಳಗಡೆ ತುಂಬಾ ನೋವಿದೆ, ಅದು ನೋವು ಕಡಿಮೆ ಆಗ್ತಿಲ್ಲ’ ಎನ್ನುತ್ತ ಭಾವುಕರಾದವರು ನಟ ಶಿವರಾಜ್‌ ಕುಮಾರ್‌ .
ಜೇಮ್ಸ್‌ ಚಿತ್ರಕ್ಕೆ ಪುನೀತ್‌ ಅವರ ಪಾತ್ರಕ್ಕೆ ಡಬ್‌ ಮಾಡಿದವರು ಶಿವರಾಜ್‌ಕುಮಾರ್‌. ಈ ಬಗ್ಗೆ ಮಾತನಾಡಿದ ಅವರು, ‘ಅಪ್ಪು ವಾಯ್ಸ್​ಗೆ ನಾನೇ ಡಬ್ಬಿಂಗ್​ ಮಾಡಬೇಕು ಎಂದು ಚೇತನ್‌ ಅವರು ಹೇಳಿದಾಗ ತುಂಬಾ ಹಿಂಜರಿಕೆ ಆಯ್ತು. ಏಕೆಂದ್ರೆ ಅವನದ್ದು ಟಿಪಿಕಲ್‌ ವಾಯ್ಸ್‌. ಅವನ ಅಭಿಮಾನಿಗಳ ಸಂಖ್ಯೆ ತುಂಬಾ ಹೆಚ್ಚಿದೆ. ಸ್ವಲ್ಪ ವಾಯ್ಸ್‌ ಚೇಂಜ್‌ ಆದ್ರೂ ಅಭಿಮಾನಿಗಳಿಗೆ ಇಷ್ಟವಾಗದೇ ಹೋಗ್ಬೋದು. ಅದಕ್ಕೆ ನಾನು ಅವನದ್ದೇ ವಾಯ್ಸ್​ ಬಳಕೆ ಮಾಡೋಕೆ ಆಗತ್ತ ನೋಡಿ ಎಂದು ಹೇಳಿದೆ, ಮಿಮಿಕ್ರಿ ಮಾಡುವವರ ಬಳಿ ಮಾಡಿಸೋಕೆ ಟ್ರೈ ಮಾಡಿ ಎಂದಿದ್ದೆ. ಚೇತನ್​ ಅವರು ಟ್ರೈ ಮಾಡಿದ್ರು, ಆದರೆ ಅವರಿಗೆ ಅದು ಇಷ್ಟ ಆಗಲಿಲ್ಲ. ಕೊನೆಗೆ ನನ್ನ ಬಳಿಯೇ ಬಂದಾಗ ತುಂಬಾ ಭಯ ಆಯ್ತು. ಕೊನೆಗೆ ಅಪ್ಪು ವಾಯ್ಸ್​ಗೆ ಎರಡು ದಿನ ಡಬ್ ಮಾಡಿದೆ’ ಎಂದರು.
ನಾನು ಎಲ್ಲೇ ಹೋದರೂ ಪುನೀತ್‌ ಅವರ ಅಣ್ಣ ಅಲ್ವಾ ಎಂದು ಕೇಳ್ತಿದ್ರು. ಒಮ್ಮೆ ಚೆನ್ನೈಗೆ ಹೋದಾಗಲೂ ಹೀಗೆಯೇ ಕೇಳಿದ್ರು. ಕೃಷ್ಣಗಿರಿಯಲ್ಲಿ ಶೂಟ್​ ಮಾಡುವಾಗಲೂ ಅದೇ ರೀತಿ ಪ್ರಶ್ನೆ ಬಂತು. ಅಪ್ಪುವಂಥವನ ಅಣ್ಣನಾಗಿ ಇರೋಕೆ ನಾನು ಅದೃಷ್ಟ ಮಾಡಿದ್ದೆ. ಅಪ್ಪು ಯಾವಾಗಲೂ ಬದುಕಿರುತ್ತಾನೆ ಎಂದು ಭಾವುಕರಾದರ ಶಿವಣ್ಣ.
‘ಜೇಮ್ಸ್, ಇದು​ ಒಳ್ಳೆಯ ಮನಸ್ಸಿನ ವ್ಯಕ್ತಿಯ ಚಿತ್ರ. ಯಾವಾಗ ಕಾಲ್​ ಮಾಡಿದ್ರೂ ಶಿವಣ್ಣ ಅಂತಿದ್ದ. ಯಾವಾಗಲೂ ಹಗ್​ ಮಾಡುವಾಗ ಹೃದಯ ಭಾಗ ಟಚ್​ ಆಗುವ ರೀತಿಯಲ್ಲಿ ಹಗ್​ ಮಾಡುತ್ತಿದ್ದ. ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಪುನೀತ್ ಇಂಡಸ್ಟ್ರಿಯವರ ಹಾಗೂ ಅಭಿಮಾನಿಗಳ ಹೃಯದಲ್ಲಿ ಸದಾ ಇರ್ತಾನೆ. ಅಪ್ಪು ಅನೇಕರಿಗೆ ಸ್ಫೂರ್ತಿ ಆಗಿದ್ದ’ ಎಂದರು.
ಬಂಧನ ಭೀತಿಯಲ್ಲಿ ನಟಿ ಸೋನಾಕ್ಷಿ ಸಿಂಗ್‌! ವಂಚನೆ ಕೇಸ್‌ನಲ್ಲಿ ಕೋರ್ಟ್‌ನಿಂದ ಜಾಮೀನು ರಹಿತ ವಾರೆಂಟ್‌

‘ವಾರದಲ್ಲೇ ನೀನು ಫಿನಿಷ್‌, ನಿನ್ನ ತಾಯಿ ಪತಿವ್ರತೆ ಆಗಿದ್ರೆ ತಪ್ಪಿಸು ನೋಡುವ…’ ವಿದ್ಯಾರ್ಥಿಗೆ ವಿದೇಶಗಳಿಂದ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + one =
Remember me
