ಹಾಸನ:ಚನ್ನರಾಯಪಟ್ಟಣದ ಹಿರೇಸಾವೆ ಸಮೀಪ ಮೇಟಿಕೆರೆ ಗೇಟ್‌ ಬಳಿ ವಿಶ್ವಕರ್ಮ ಸಮಾಜ ಅರೇಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಕಾರು ಅಪಘಾತವಾಗಿದೆ. ಕಾರಿನಲ್ಲಿದ್ದ ಸ್ವಾಮೀಜಿಯವರು ಅಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ಸಂಭವಿಸಿದೆ. ಸ್ವಾಮೀಜಿ ಶಿಷ್ಯರೊಂದಿಗೆ ಮಠದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮೇಟಿಕೆರೆ ಗೇಟ್‌ ಬಳಿ ರಸ್ತೆ ದಾಟುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಟ್ರಕ್​ಗೆ ಡಿಕ್ಕಿ ಹೊಡೆದು ಸೇತುವೆ ಮೇಲಿಂದ 50 ಅಡಿ ಆಳಕ್ಕೆ ಬಿದ್ದ ಬಸ್: 16 ಮಂದಿ ದುರ್ಮರಣ!
ಘಟನೆಯಲ್ಲಿ ಬೈಕ್‌ ಸವಾರ ಎಚ್‌.ಎನ್‌. ಯೋಗೇಶ್‌ ಗಾಯಗೊಂಡಿದ್ದಾರೆ. ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿಯ ನಿವಾಸಿ ಯೋಗೇಶ್​ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಬೆಂಗಳೂರಿನ ಪ್ರವಾಸವನ್ನು ಮೊಟಕುಗೊಳಿಸಿದ ಸ್ವಾಮೀಜಿ, ಮಠಕ್ಕೆ ವಾಪಸಾಗಿದ್ದಾರೆ. ಅಪಘಾತ ವಿಷಯ ತಿಳಿದ ವಿಶ್ವಕರ್ಮ ಸಂಘದ ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ಗಣೇಶ್‌ ಮತ್ತು ಮುಖಂಡರು ಸ್ಥಳಕ್ಕೆ ಆಗಮಿಸಿ ಸ್ವಾಮೀಜಿ ಅವರನ್ನು ಬೇರೆ ಕಾರಿನಲ್ಲಿ ಅರೇಮಾದನಹಳ್ಳಿ ಮಠಕ್ಕೆ ಕಳುಹಿಸಿಕೊಟ್ಟರು.
ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

ಸುಪ್ರೀಂಕೋರ್ಟ್​ನಲ್ಲೂ ರಾಗಿಣಿಗೆ ಸಿಗಲಿಲ್ಲ ಬೇಲ್​: ಹೊಸವರ್ಷ ಆಚರಣೆಯೂ ಜೈಲಲ್ಲೇ!

ಲಸಿಕೆ ಮೂಲಕ ಸೈನಿಕರಿಗೆ ಅತಿಮಾನುಷ ಶಕ್ತಿ ತುಂಬಲಿದೆ ಚೀನಾ- ವಿಶ್ವಕ್ಕೇ ಕಂಟಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
