ರಾಯಚೂರು:ಸಚಿವ ಶ್ರೀರಾಮುಲು ಅವರ ಆಪ್ತರೆಂದೇ ಗುರುತಿಸಿಕೊಂಡಿರುವ ನಾಗರಾಜ್ ನೆಕ್ಕಂಟಿ ಎನ್ನುವವರ ಮಗಳ ಮದುವೆ ಇಂದು ಇಲ್ಲಿ ಅದ್ದೂರಿಯಾಗಿ ನಡೆದಿದೆ. ಸಾವಿರಾರು ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್​ ನಿಯಮಗಳನ್ನು ಪಾಲಿಸದೇ ಮದುವೆಯ ಮಾಡಲಾಗಿದೆ. ಸಭೆ ಸಮಾರಂಭಗಳಿಗೆ ಜನರ ಮಿತಿಯಿದ್ದರೂ ಸಹಸ್ರಾರು ಮಂದಿ ಭಾಗಿಯಾಗಿದ್ದಾರೆ. ಯಾರೊಬ್ಬರು ಮಾಸ್ಕ್ ಹಾಕದೇ ಗುಂಪು ಗುಂಪಾಗಿ ಸೇರಿಕೊಂಡು ಮದುವೆ ಕಾರ್ಯ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸಿಂಧನೂರು ನಗರದ ಹೊರವಲಯದಲ್ಲಿ ಇರುವ ಹೊಸಳ್ಳಿ ಜೆ.ಇ ಗ್ರಾಮ ವ್ಯಾಪ್ತಿಯಲ್ಲಿನ ಕಮ್ಮವಾರಿ ಸಂಘದ ಯಲಮಂಚಿಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಈ ಮದುವೆ ನಡೆದಿದೆ. ಇದಕ್ಕೆ ಸುಮಾರು 80 ಲಕ್ಷ ರೂ. ಮೌಲ್ಯದ ಸೆಟ್ ಹಾಕಿಸಲಾಗಿದೆ. ಇಡೀ ಕಲ್ಯಾಣ ಮಂಟಪಕ್ಕೆ ಅದ್ದೂರಿ ಅಲಂಕಾರ ಮಾಡಲಾಗಿತ್ತು. ಶ್ರೀರಾಮುಲು ಕೂಡ ಹಾಜರಿದ್ದು ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ.
ಆದರೆ ಇದೇ ವೇಳೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಮದುವೆಯ ಮೆರವಣಿಗೆ ನಡೆದಿದೆ. ಮದುವೆ ಮೆರವಣಿಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು.
ಹೊಸಳ್ಳಿ ಇ.ಜೆ. ಗ್ರಾ.ಪಂಚಾಯಿತಿಯು ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ಕೊವಿಡ್ ನಿಯಮ ಪಾಲಿಸುವಂತೆ ಈ ಮೊದಲೇ ಸೂಚಿಸಲಾಗಿತ್ತು. ಆದರೆ ಇದನ್ನು ಉಲ್ಲಂಘಿಸಿ ಅದ್ದೂರಿ ಮದುವೆ ಮಾಡಲಾಗಿದ್ದು, ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸಹ ಕೋವಿಡ್ ನಿಯಮಗಳನ್ನ ಸಂಪೂರ್ಣ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಜೀನ್ಸ್​ ಬ್ಯಾನ್​ ಮಾಡಿದ್ದಕ್ಕೆ ಲುಂಗಿ ಧರಿಸಿ ಬಂದ್ರಾ ಈ ಯುವತಿಯರು?

ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!

ಬಾರ್​ನಿಂದ ನಗರಸಭೆ ಕಾಂಗ್ರೆಸ್​ ಸದಸ್ಯ ಕಿಡ್ನಾಪ್​: ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 8 =
Remember me
