ಬಳ್ಳಾರಿ:ಉ‍ಪಮುಖ್ಯಮಂತ್ರಿಯಾಗಬೇಕೆಂದು ಬಹಳ ಕನಸು ಕಂಡಿದ್ದ ಸಚಿವ ಶ್ರೀರಾಮುಲು ಅವರಿಗೆ ಅಲ್ಲಿಯೂ ನಿರಾಸೆಯಾಗಿತ್ತು, ನಂತರ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಬೇಕು ಎಂಬ ಕನಸೂ ಭಗ್ನಗೊಂಡಿದೆ.ಕರೊನಾ ಹಾಗೂ ಪ್ರವಾಹ ನಿರ್ವಹಣೆಯ ಹೆಸರಿನಲ್ಲಿ ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯನ್ನು ಆನಂದ್ ಸಿಂಗ್‌ ಅವರಿಗೆ ನೀಡಲಾಗಿದೆ. ಶ್ರೀರಾಮುಲುಗೆ ಚಿತ್ರದುರ್ಗದ ಜಿಲ್ಲೆಯನ್ನು ಹಂಚಿಕೆ ಮಾಡಲಾಗಿದೆ. ಶ್ರೀರಾಮುಲು ನಾಲ್ಕು ಬಾರಿ ಸಚಿವರಾಗಿದ್ದರೂ ತಾವು ಬಯಸಿದ ಬಳ್ಳಾರಿ ಉಸ್ತುವಾರಿ ಸಿಕ್ಕಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.ಇದರ ಜತೆಗೆ ಇನ್ನೊಂದು ಆಘಾತವಾಗಿದ್ದು, ಇಷ್ಟವಿಲ್ಲದ ಸಾರಿಗೆ ಖಾತೆ ಸಿಕ್ಕಿದ್ದು. ನಿನ್ನೆ ಆಪ್ತರ ಮುಂದೆ ಸಾರಿಗೆ ಖಾತೆ ಬೇಡ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಖಾತೆ ಕೇಳುತ್ತೇನೆ ಎಂದಿದ್ದರು ಶ್ರೀರಾಮುಲು.ಇದರ ಬೆನ್ನಲ್ಲೇ ಶ್ರೀರಾಮುಲು ಅವರ ನಡೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ. ಇದಕ್ಕೆ ಕಾರಣ, ಅವರು ಎಲ್ಲಿಯೋ ಕಾಣೆಯಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಸಾಮಾನ್ಯವಾಗಿ ಈ ದಿನ ಅವರ ಬಳ್ಳಾರಿಯಲ್ಲಿ ಇಲ್ಲವೇ ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರು ಎರಡೂ ಕಡೆ ಈಗ ಕಾಣಿಸದೇ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಯಾರನ್ನೂ ಸಂಪರ್ಕಿಸದೇ ರಾಮುಲು ಅಜ್ಞಾತ ಸ್ಥಳದಲ್ಲಿದ್ದು, ಭಾರಿ ಕುತೂಹಲ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿಯೂ ಇಲ್ಲ, ಬಳ್ಳಾರಿಗೂ ಇಲ್ಲ ಹಾಗದ್ರೇ ರಾಮುಲು ಎಲ್ಲಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಕಾಲವೇ ಉತ್ತರಿಸಬೇಕಿದೆ.
ಪ್ರಿಯಕರನ ಜತೆ ಏಕಾಂತದಲ್ಲಿರುವಾಗ ನುಗ್ಗಿದ ಗಂಡ! ರಕ್ಷಣೆ ಕೋರಿ ಹೈಕೋರ್ಟ್‌ ಮೊರೆ ಹೋದ ಮಹಿಳೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − one =
Remember me
