ಬೆಂಗಳೂರು:ಕೇಂದ್ರ ಸರ್ಕಾರದ ವೈಫಲ್ಯದಿಂದ ಅಗತ್ಯ ವಸ್ತುಗಳ ಬೆಲೆಗಳು ಯದ್ವಾತದ್ವಾ ಏರಿಕೆಯಾಗಿವೆ. ಇದು ಸಾಲದೆಂಬಂತೆ ಜಿಎಸ್ ಟಿ ದರ ಹೆಚ್ಚಳ ಬರೆ ಹಾಕಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ‌ಯಲ್ಲಿ ಕಟುವಾಗಿ ಟೀಕಿಸಿದರು.
ಜಿಎಸ್ ಟಿ ವ್ಯಾಪ್ತಿಗೆ ಹೊಸದಾಗಿ ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಗೆ ಶೇಕಡ ಐದರಷ್ಟು ಬ್ಯಾಂಕ್ ಚೆಕ್ ಗೆ ಶೇ.18ರಷ್ಟು ಜಿಎಸ್ ಟಿ‌ ವಿಧಿಸಿದ್ದಾರೆ. ಬಡವರು, ರೈತರು ಮಧ್ಯಮವರ್ಗದವರು, ವಿದ್ಯಾರ್ಥಿಗಳಿಗೆ ಭಾರ ಹೊರಿಸಿದ್ದಾರೆ ಎಂದು ಆರೋಪಿಸಿದರು.
ಶ್ರೀಮಂತರಿಗೆ ತೆರಿಗೆಯನ್ನು ಶೇ 30 ರಿಂದ 22ಕ್ಕೆ ಇಳಿಸಲಾಗಿದೆ. ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ರೈತರು, ದುಡಿಯುವ ಜನರ ಆದಾಯ ಕಡಿಮೆಯಾಗಿದೆ. ಬಡವರು, ಮಧ್ಯಮವರ್ಗದವರ ರಕ್ತಹೀರುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು,‌ ರಾಜ್ಯ ಸರ್ಕಾರಗಳು ಸಾಥ್ ನೀಡುತ್ತಿವೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಸಾಧನೆಯ ಸಮಾವೇಶ ಮಾಡಲು ಹೊರಟಿವೆ. ದುಬಾರಿಯಾಗಿದ್ದನ್ನು ಹೇಳುವುದಿಲ್ಲ. ರಾಜ್ಯದ ರೈತರು ರಸಗೊಬ್ಬರಕ್ಕಾಗಿ ಬೀದಿಗೆ ಇಳಿದಿದ್ದರೆ, ಬಸವರಾಜ ಬೊಮ್ಮಾಯಿ‌ ನೇತೃತ್ವದ ಸರ್ಕಾರ ವರ್ಷದ ಸಾಧನೆ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಹೂವಿನ ಹಾರ ನೋಡಿ ಸಿದ್ದು ಗರಂ ಗರಂ: ಬೇಡ್ರಪ್ಪೋ ಬೇಡ… ನನ್​ ಬಳಿ ತರ್ಬೇಡಿ ಎಂದ ಮಾಜಿ ಸಿಎಂ

ಕೆಲ ಸರಕು, ಸೇವೆ ದುಬಾರಿ: ನಾಳೆಯಿಂದ ಪರಿಷ್ಕೃತ ಜಿಎಸ್​ಟಿ ದರ ಜಾರಿ, ಜನರ ಜೇಬಿಗೆ ಕತ್ತರಿ..

ಮುರ್ಮು v/s ಸಿನ್ಹಾ: ರಾಷ್ಟ್ರಪತಿ ಅಭ್ಯರ್ಥಿಗಳಿಗೆ ಮತ ಹಾಕಿದ ಪ್ರಧಾನಿ ಮೋದಿ, ಮಾಜಿ ಪಿಎಂ ಮನಮೋಹನ ಸಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − ten =
Remember me
