ಬೆಂಗಳೂರು:ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರ ನಡುವೆ ಇದೀಗ ಬಟ್ಟೆ ಪಾಲಿಟಿಕ್ಸ್​ ಶುರುವಾಗಿದೆ. ಏಟು- ತಿರುಗೇಟುಗಳು ಜೋರಾಗಿ ನಡೆಯುತ್ತಿದೆ.ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಂದು ತಿಂಗಳೊಳಗೆ ಕಾಂಗ್ರೆಸ್ ಬಿಡಲಿದ್ದು, ಅದಕ್ಕಾಗಿಯೇ 90 ಜೊತೆ ಬಟ್ಟೆ ಖರೀದಿಸಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದು ಇದೀಗ ಸಿದ್ದರಾಮಯ್ಯ ಅವರ ಕೋಪವನ್ನು ನೆತ್ತಿಗೇರಿಸಿದೆ.
ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಕಟಿಲು, ಸಿದ್ದರಾಮಯ್ಯ ಈ ಹಿಂದೆ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಕಾಂಗ್ರೆಸ್​ನಲ್ಲಿ ತಮ್ಮ ಅಸ್ವಿತ್ವ ಕಳೆದುಕೊಳ್ಳುತ್ತಿದ್ದು, ಅದಕ್ಕಾಗಿ ತಿಂಗಳಲ್ಲಿ ಪಕ್ಷ ಬಿಡಲಿದ್ದಾರೆ. ಅದಕ್ಕಾಗಿ ಅವರು 90 ಜೊತೆ ಬಟ್ಟೆ ಹೊಲಿಸಿಕೊಂಡಿರುವುದಾಗಿ ಹೇಳಿದ್ದರು.
ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ@BJP4Karnatakaನಾಯಕರಿಗೆ ದಾನ ಮಾಡೋಣ ಎಂದು90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ.
ಬೇಕಿದ್ದರೆ@nalinkateelಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ.
ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡಾ.pic.twitter.com/CnErHQ3dhU
— Siddaramaiah (@siddaramaiah)March 21, 2021

ಅದಕ್ಕೀಗ ಟ್ವೀಟ್​ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚಿ ರಾಜ್ಯದ ಮರ್ಯಾದೆ ಕಳೆಯುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ದಾನ ಮಾಡಲು 9೦ ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಬೇಕಿದ್ರೆ ನಳೀನ್ ಕುಮಾರ್ ಕಟೀಲ್ ಗೆ ಒಂದೆರಡು ಜೊತೆ ದಾನ ಮಾಡ್ತೀನಿ. ಇನ್ನೂ 19 ಸಿಡಿ ಇವೆಯಂತೆ, ಎಲ್ಲವೂ ಹಿಡಿತದಲ್ಲಿರಲಿ..ನಾಲಿಗೆ ಸಹ ಎಂದು ಹೇಳಿದ್ದಾರೆ.
ಸಿಡಿ ಗ್ಯಾಂಗ್​ನ ಕೈ ಹಿಡಿತಿದೆಯೇ ರಾಜಸ್ಥಾನ? ದುಡ್ಡು ಖಾಲಿಯಾಗ್ತಿದ್ದಂತೆಯೇ ಎಸ್ಕೇಪ್​ ಆದ್ರು ಆರೋಪಿಗಳು

‘ಮೇ 1ರಂದು ನಾಲ್ಕು ಕೊಲೆ- ಸಿ.ಟಿ ರವಿ ಕೊಲೆಯಾದ್ರೆ ನಾನ್​ ಉಳೀತೇನೆ, ನನ್ನ ಕೊಲೆಯಾದ್ರೆ ಅವ್ರು ಉಳೀತಾರೆ’

ಪತ್ನಿ ಅನೈತಿಕ ಸಂಬಂಧ ಗೊತ್ತಾದರೂ ಸುಮ್ಮನಿದ್ದರೆ ಈಗ ಅತಿಯಾಗಿಬಿಟ್ಟಿದೆ- ಸಾಕ್ಷಿ ಇಲ್ಲದೆ ಡಿವೋರ್ಸ್​ ಪಡೆಯುವುದು ಹೇಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 18 =
Remember me
