ಬಾಗಲಕೋಟೆ:ಬಾಗಲಕೋಟೆ ಭೇಟಿ ವೇಳೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾರಿ ಗರಂ ಆಗಿರುವ ಘಟನೆಯೊಂದು ನಡೆದಿದೆ.
ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್‌ಕೆ ಸಿದ್ದರಾಮಯ್ಯನವರು ಆಗಮನಿಸಿದ್ದರು. ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಪೇಟ ತೊಡಿಸಲು ಬಂದಿದ್ದಾನೆ.
ಸಿದ್ದರಾಮಯ್ಯನವರು ಎಷ್ಟು ಬೇಡ ಬೇಡ ಎಂದರೂ ಸುತ್ತಿದ ರುಮಾಲು ತಂದು ತಲೆಗೆ ಇಟ್ಟಿದ್ದಾನೆ ಅಭಿಮಾನಿ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸಿದಿದ್ದಾರೆ. ಆಗ ಅಲ್ಲಿದ್ದವರು ಆ ಅಭಿಮಾನಿಯಲ್ಲಿ ಬಯ್ಯುವುದನ್ನು ವಿಡಿಯೋದಲ್ಲಿ ಕೇಳಬಹುದು. ಬೇಡ ಎಂದರೂ ಗೊತ್ತಾಗುವುದಿಲ್ಲವಾ ಎಂದು ಅಲ್ಲದ್ದವರು ಗದರಿಸಿದ್ದಾರೆ.
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಕಾತರಕಿ ಗ್ರಾಮದಲ್ಲಿ ‌ಹೂಮಳೆ ಸುರಿಸಿ ಅಭಿಮಾನಿಗಳು ಬರಮಾಡಿಕೊಂಡರು. ಜೆಸಿಬಿ ಮೇಲೆ ನಿಂತು ಹೂವಿನ ಸುರಿಮಳೆಗೈಯಲಾಯಿತು.
ಇಲ್ಲಿದೆ ನೋಡಿ ವಿಡಿಯೋ:
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್ಕೆ ಬಂದ ಸಿದ್ದರಾಮಯ್ಯನವರಿಗೆ ಅಭಿಮಾನಿ ಪೇಟ ತೊಡಿಸಿದಾಗ ಸಿಟ್ಟಿನಿಂದ ಕಿತ್ತೆಸೆದರುpic.twitter.com/TUnr6QphxM
— Vijayavani (@VVani4U)January 25, 2022

ಸಿದ್ದರಾಮಯ್ಯ ಕರೆ ಮಾಡಿ ಈ ವಿಷ್ಯ ಹೇಳಿದ್ರು… ಕುತೂಹಲ ಕೆರಳಿಸಿದ ಸಚಿವ ಎಂಟಿಬಿ ನಾಗರಾಜ್‌

VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

Sign in to your account
Please enter an answer in digits:2 + twelve =
Remember me
