ವಿಜಯಪುರ:ಕಳೆದ ಮೂರು ದಿನಗಳಿಂದ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ.
ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ ಆಗಿರುವ ಘಟನೆ ನಡೆದಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಾಜಿ ಸಚಿವರು ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಇದ್ದಕ್ಕಿದ್ದಂತೆಯೇ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಹೂವಿನ ಹಾರ.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಹೂವಿನ ಹಾರ ತಂದಿದ್ದರು. ಮಹಿಳೆಯರು ಕೂಡ ತಮ್ಮ ಕೈಯಲ್ಲಿ ಹೂವಿನ ಹಾರ ಹಿಡಿದುಕೊಂಡಿದ್ದರು. ಹಾರವನ್ನು ಸಿದ್ದರಾಮಯ್ಯನವರ ಬಳಿಗೆ ತರುತ್ತಿದ್ದಂತೆಯೇ ಅವರು, ಏಯ್​, ದೂರ ಹೋಗಿ, ಅವುಗಳಲ್ಲಿ ಹುಳುಗಳು ಇರುತ್ತವೆ, ನನ್ನ ಬಳಿ ತರಬೇಡಿ ಎಂದಿದ್ದಾರೆ. ಆದರೂ ಕಾರ್ಯಕರ್ತರು ಹೂವಿನ ಹಾರ ಹಿಡಿದು ಬಂದಾಗ ಸಿದ್ದರಾಮಯ್ಯ ಸ್ವಲ್ಪ ಗರಂ ಆಗಿಯೇ ಅದನ್ನು ನಿರಾಕರಿಸಿದರು. ನಂತರ ಬಂದ ಮಹಿಳೆಗೂ ಹೂವಿನ ಹಾರ ಬೇಡ ಅಮ್ಮ ಎಂದು ಕೈ ಮುಗಿದರು.
ರಸ್ತೆ ವಿಚಾರವಾಗಿ ಮನವಿ ಸಲ್ಲಿಸಲು ಗ್ರಾಮಸ್ಥರೊಬ್ಬರು ಬಂದಾಗ, ಸಿದ್ದರಾಮಯ್ಯ, ನೋಡಿ ಈ ಸರ್ಕಾರ ನಿಮಗೆ ಏನೂ ಮಾಡಲ್ಲ. ನಮ್ಮ ಸರ್ಕಾರ ಬಂದಾಗ ಹೇಳಯ್ಯ, ಎಲ್ಲಾ ವ್ಯವಸ್ಥೆ ಮಾಡಿಸುವೆ ಎಂದರು. ಇದೇ ವೇಳೆ `ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.
ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿ ಸರ್ಕಾರ ಹೊರಡಿಸಿಬಿಡ್ತಾ ಆದೇಶ? ದೇವ್ರೇ ನೀನೇ ಕನ್ನಡ ಕಾಪಾಡಪ್ಪ ಅಂತಿದ್ದಾರೆ ನೆಟ್ಟಿಗರು!

ರಾಜ್ಯದಲ್ಲಿ ಅತಿವೃಷ್ಟಿ: ಮೂಲ ಸೌಕರ್ಯ ಕಲ್ಪಿಸಲು 500 ಕೋಟಿ ರೂ. ಬಿಡುಗಡೆ- ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fourteen =
Remember me
