ಬೆಂಗಳೂರು:ಗುರು-ಶಿಷ್ಯ ಎಂದು ಎನಿಸಿಕೊಂಡಿರುವ ಮಾಜಿ ಸಚಿವ ಜಮೀರ್​ ಅಹಮ್ಮದ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಈಗ ಮತ್ತೆ ಒಂದಾಗಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಜಮೀರ್​ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಸಿದ್ದರಾಮಯ್ಯ ಜಮೀರ್​ ಮನೆಗೆ ಹೋಗಿ ಸಮಾಧಾನ ಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹಲವು ಊಹಾಪೋಹ ಎದ್ದಿದ್ದವು. ಅದಕ್ಕೆಲ್ಲಾ ತೆರೆ ಎಳೆದಿರುವ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮಾಧ್ಯಮಗಳ ಮುಂದೆಯೇ ಜಮೀರ್​ ಜತೆ ಫೋನ್​ನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ.. ‘ಎಲ್ಲಿದಿಯಪ್ಪ ನೀನು, ಆಯ್ತು ಬಾಪ್ಪಾ ಮಾತನಾಡ್ತೇನೆ. ನಾನೇಕೆ ಅನುಮಾನ ಬೀಳಲಿ, ಮನೆಗೆ ಬಾ ಮಾತನಾಡೋಣ ಎಂದಿದ್ದರು. ಈಗ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ತಾವೇ ಖುದ್ದಾಗಿ ಜಮೀರ್​ ಮನೆಗೆ ಹೋಗಿದ್ದಾರೆ.
ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೋ..ತಡ ಮಾಡಬೇಡ. ಬಿಜೆಪಿ ಇಡಿ ಬಳಸಿಕೊಂಡು ನಿನ್ನ ಮೇಲೆ ರೇಡ್ ಮಾಡಿಸಿದೆ. ಎಲ್ಲ ದಾಖಲೆ ಸರಿ ಮಾಡಿಕೋ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನ ಬಗ್ಗೆ ನಾನು ತಪ್ಪು ತಿಳಿದುಕೊಂಡಿಲ್ಲ. ನೀನು ಟೆನ್ಷನ್ ಲ್ಲಿ ಇರ್ತಿಯಾ ಎಂದು ಕರೆ ಮಾಡಲಿಲ್ಲ. ಇದು ಮೂರನೇ ಬಾರಿ ಹೇಳ್ತಿದ್ದೀಯಾ, ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಜಮೀರ್​ಗೆ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ. ನಮ್ಮ ಪಕ್ಷದವರೇ ನಮ್ಮ ನಡುವೆ ಭಿನ್ನಾಭಿಪ್ರಾಯ ಇದು ಮಾತನಾಡ್ತಾರೆ. ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಇಷ್ಟು ದಿನ ದೂರ ಕಾಪಾಡಿಕೊಂಡಿರುವ ಬಗ್ಗೆ ಜಮೀರ್​ಗೆ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.
ನನ್ನ ಮನೆ ಕಟ್ಟಿರುವುದು ಸಹ ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಇವೆಲ್ಲಾ ಸುಳ್ಳು ಎಂದು ಜಮೀರ್​ ಇದೇ ವೇಳೆ ಅವಲತ್ತು ಕೊಂಡಿದ್ದಾರೆ. ಅದಕ್ಕೆ ಸಿದ್ದರಾಮಯ್ಯ, ನನಗೆ ಗೊತ್ತು ಬಿಡು ..ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೋ ಎಂದಿದ್ದಾರೆ.
ಬದುಕಿರುವಾಗಲೇ ಸೋನಿಯಾ ಗಾಂಧಿಯನ್ನು ‘ಹುತಾತ್ಮ’ ಎಂದು ಕೊಂಡಾಡಿದ ಡಿ.ಕೆ.ಶಿವಕುಮಾರ್​!

ಪತ್ನಿಗೆ ಮಕ್ಕಳಾಗದಿದ್ರೆ ನಾನು ಇನ್ನೊಂದು ಮದ್ವೆಯಾಗಬಹುದಾ? ಕಾನೂನು ಏನ್​ ಹೇಳತ್ತೆ?

ತಾಲಿಬಾನ್​ ವಶಕ್ಕೆ ಸಂಪೂರ್ಣ ಅಫ್ಘಾನ್​ : ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ಶರಣಾದ ಸರ್ಕಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
