ಬೆಂಗಳೂರು:ಇದಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರನ್ನು ತಲುಪಿದ್ದು ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈ ನಡುವೆಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿಯವರನ್ನು ಟೀಕಿಸಿ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. #Answermadi Modi ಹ್ಯಾಶ್ ಟಾಗ್ ಮಾಡಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದಿದ್ದಾರೆ.
ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳು ಏನು?* ಬೆಂಗಳೂರು ಉಪನಗರ ರೈಲು ಯೋಜನೆ ನನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕಾರಣವೇ
*ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದ ಶೇ.40ರಷ್ಟು ಕಮಿಷನ್ ಆರೋಪ ಬಗ್ಗೆ ತನಿಖೆ ಯಾವಾಗ?
*ಜಿಎಸ್ ಟಿ ಪರಿಹಾರ ಮೂರು ವರ್ಷ ಮುಂದುವರಿಸಬೇಕೆಂದು ಕೇಳಿದ್ದಕ್ಕೆ ನಿಮ್ಮ ಉತ್ತರವೇನು, ಜಿಎಸ್ ಟಿ ಪರಿಹಾರ ರಾಜ್ಯದ ಜನರ ಮೇಲೆ ಹೊರೆಯಲ್ಲವೇ, ಜಿಎಸ್ಟಿ ಜಾರಿ, ಕರೊನಾದಿಂದ, ನೋಟು ಅನಾಣ್ಯೀಕರಣದಿಂದ ಉದ್ಯೋಗ ಕಳೆದುಕೊಂಡಿದ್ದಕ್ಕೆ ಯಾರು ಹೊಣೆ?
*ಕರ್ನಾಟಕದಿಂದ ಇಷ್ಟೊಂದು ತೆರಿಗೆ ಸಂಗ್ರಹವಾಗುತ್ತಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಏಕೆ ಕಡಿಮೆ ಕೊಡುಗೆ ಬರುತ್ತಿದೆ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಅದಕ್ಕೆಲ್ಲಾ ಉತ್ತರಿಸಿ
* ಹಿಂದಿ ಭಾಷೆಯನ್ನು ಹೇರಲು ಹೊರಟಿರುವ ಸಂದರ್ಭದಲ್ಲಿ ಕನ್ನಡದ ಅತ್ಮಿತೆ ಬಗ್ಗೆ ನಿಮ್ಮ ನಿಲುವೇನು?
*ಅಮಿತ್ ಶಾ ಅವರ ಹಿಂದಿ ಹೇರಿಕೆಗೆ ನಿಮ್ಮ ಮೌನವೇಕೆ?
*ಬೆಂಗಳೂರು ಸುತ್ತಮುತ್ತ ಭಾಗಗಳಿಗೆ ನೀರುಣಿಸುವ ಮೇಕೆದಾಟು ಯೋಜನೆ ಜಾರಿಗೆ ವಿಳಂಬವೇಕೆ?
* ರಾಜ್ಯ ಸರ್ಕಾರವೇಕೆ ಕರಾಳ ಕೃಷಿ ಕಾಯ್ದೆಯನ್ನು ರದ್ದುಪಡಿಸಿಲ್ಲ, ಬೆಂಗಳೂರು ಉಪನಗರ ರೈಲು ಯೋಜನೆಗೆ ಶೇ.20ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ನೀಡಿದೆಯೆ?
#AnswerMadiModipic.twitter.com/6z5IxU3PkJ
— Siddaramaiah (@siddaramaiah)June 20, 2022

ಅಗ್ನಿಪಥ್ ಯೋಜನೆ: ಸುಳ್ಳು ಸುದ್ದಿ ಹರಡಿ ಹಿಂಸೆಗೆ ಪ್ರಚೋದನೆ- ವಾಟ್ಸ್​ಆ್ಯಪ್​ ಬ್ಯಾನ್​, 10 ಮಂದಿ ಬಂಧನ

ಭವಿಷ್ಯ ಹಾಳ್​ಮಾಡ್ಕೋಬೇಡ್ರಪ್ಪೋ… ಪ್ರತಿಭಟನೆಗೆ ಹೊರಟವರಿಗೆ ತಿಂಡಿ ಕೊಟ್ಟು ಕಳುಹಿಸಿದ ಚಿಕ್ಕೋಡಿ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
