ಬಾಗಲಕೋಟೆ:ಸಿದ್ದರಾಮೋತ್ಸವಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಗಲಕೋಟೆಯ ಗಿರಿಮಲ್ಲ ಖಂಡೇಕರ್ ಎಂಬುವವರು ಕೊನೆಗೂ ಒಂದೂವರೆ ತಿಂಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ.
ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ನಿವಾಸಿ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಅಗಸ್ಟ್​ 2 ರಂದು ಗ್ರಾಮಸ್ಥರ ಜತೆಗೆ ಇವರು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸಾಗಿರಲಿಲ್ಲ. ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನ ತೆರಳಿದ್ದ ಇವರು ವಾಪಸಾಗದೇ ಮನೆಯವರೆಲ್ಲರೂ ಚಿಂತೆಗೀಡಾಗಿದ್ದರು.
‘ದುಡ್ಡಿನ ಆಮಿಷ ಒಡ್ಡಿ ಮಗನನ್ನು ಕರೆದುಕೊಂಡು ಹೋಗಲಾಗಿತ್ತು. ಈಗ ಆತ ಪತ್ತೆಯಿಲ್ಲ’ ಎಂದು ಗಿರಿಮಲ್ಲ ತಾಯಿ ಕಣ್ಣೀರು ಹಾಕಿದ್ದರು. ಇದು ಭಾರಿ ಸುದ್ದಿಯಾಗುತ್ತಲೇ ಖುದ್ದಿ ಸಿದ್ದರಾಮಯ್ಯ ಗಿರಿಮಲ್ಲ ಅವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದರು. ‘ನಿಮ್ಮ ಮಗ ವಾಪಸ್​ ಬಂದೇ ಬರುತ್ತಾನೆ’ ಎಂದಿದ್ದರು. ‘ಗಿರಿಮಲ್ಲ ಜೀವಂತ ಇದ್ದಾನೆ, ಅವನಿಗೆ ಏನೂ ಆಗಿಲ್ಲ, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದಷ್ಟು ಬೇಗ ನಿಮ್ಮ ಮಗ ಮನೆಗೆ ಬರ್ತಾನೆ’ ಎಂದಿದ್ದ ಸಿದ್ದರಾಮಯ್ಯ, ‘ಸೆ. 27ಕ್ಕೆ ಮತ್ತೆ ಬಂದು ಆರ್ಥಿಕ ಸಹಾಯ ಮಾಡುವೆ’ ಎಂದಿದ್ದರು.
ಮಗ ಬರುತ್ತಾನೆ ಎನ್ನುವ ಸಿದ್ದರಾಮಯ್ಯ ಅವರ ಭವಿಷ್ಯ ನಿಜವಾಗಿದೆ. ಪೊಲೀಸರ ಸತತ ಹುಡುಕಾಟದಿಂದ ಗಿರಿಮಲ್ಲ ಪತ್ತೆಯಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ಗ್ರಾಮಕ್ಕೆ ಗಿರಿಮಲ್ಲ ಅವರನ್ನು ಗ್ರಾಮಸ್ಥರು ಕರೆತಂದಿದ್ದು, ಗ್ರಾಮದಲ್ಲೀಗ ಸಂತಸ ಮನೆ ಮಾಡಿದೆ. ಒಂದೂವರೆ ತಿಂಗಳಿನಿಂದ ಅವರು ಏನು ಮಾಡುತ್ತಿದ್ದರು, ಹೇಗೆ ತಪ್ಪಿಸಿಕೊಂಡರು ಎಂಬ ಬಗ್ಗೆ ಇನ್ನಷ್ಟೇ ವಿಷಯ ತಿಳೀಯಬೇಕಿದೆ.(ದಿಗ್ವಿಜಯ ನ್ಯೂಸ್​)
ಬುರ್ಖಾ ತೆಗೆಯುತ್ತಿದ್ದಂತೆಯೇ ಮೂರ್ಛೆ ಹೋಗೋ ಬೆಂಗಳೂರಿನ ಚಿನ್ನದಂಗಡಿವರು! ಬ್ಲ್ಯಾಕ್​ ಮ್ಯಾಜಿಕ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ…
ನನ್ನ ಬೆತ್ತಲೆ ಫೋಟೋ ತಿರುಚಲಾಗಿದೆ, ಆ ಪಾರ್ಟ್​ ನನ್ನದಲ್ಲ- ಪೊಲೀಸರ ಮುಂದೆ ನಟ ರಣವೀರ್​ ಸಿಂಗ್​ ಹೇಳಿಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen + 9 =
Remember me
