ಶಿವಮೊಗ್ಗ:ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಸಿಗಂದೂರು ದೇವಿಯ ಶಾಪ ತಟ್ಟಿದೆ. ಸಿಗಂದೂರು ಕ್ಷೇತ್ರದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಶಾಪಕ್ಕೆ ತುತ್ತಾಗಿದ್ದಾರೆ. ಇದರ ಜತೆಗೆ ಬಿಜೆಪಿಯ ಕೆಲ ಮುಖಂಡರ ಶಾಪವೂ ಇದೆ. ಈ ಸಂಕ್ರಾಂತಿಯೇ ಕೊನೆ. ಆ ನಂತರ ಅವರು ಖುರ್ಚಿಯಿಂದ ಕೆಳಕ್ಕೆ ಇಳಿಯಲಿದ್ದಾರೆ ಎಂದು ಕಾಂಗ್ರೆಸ್​ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸಂಕ್ರಾಂತಿ ನಂತರ ಹೊಸ ಸಂಕ್ರಮಣ ಶುರುವಾಗುತ್ತದೆ. ಬಿ.ಎಸ್.ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಾಗಲಿದ್ದು, ಲಿಂಗಾಯಿತ ಸಮುದಾಯದವರೇ ರಾಜ್ಯದ ಸಾರಥ್ಯ ವಹಿಸಲಿದ್ದಾರೆ ಎಂದು ಕಳೆದ ಅಕ್ಟೋಬರ್​ನಲ್ಲಿ ಹೇಳುವ ಮೂಲಕ ಭಾರಿ ಆಕ್ರೋಶಕ್ಕೆ ವ್ಯಕ್ತವಾಗಿದ್ದರು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ. ಆದರೆ ಅದೇ ಮಾತನ್ನು ಇದೀಗ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಪುನರುಚ್ಚರಿಸಿದ್ದಾರೆ.
ಸಂಕ್ರಾಂತಿ ನಂತರ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವುದಿಲ್ಲ ಎಂದು ಬಿಜೆಪಿಯ ಮಾಜಿ ನಾಯಕರೂ ಆಗಿದ್ದ ಬೇಳೂರು ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಸಿಗಂದೂರು ಕ್ಷೇತ್ರದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಯಡಿಯೂರಪ್ಪ ಅವರು ದೇವಿಯ ಶಾಪಕ್ಕೆ ತುತ್ತಾಗಿದ್ದಾರೆ ಎಂದಿರುವ ಬೇಳೂರು, ಇದೇನು ನಾನು ನುಡಿಯುತ್ತಿರುವ ಭವಿಷ್ಯವಲ್ಲ, ಬದಲಿಗೆ ಬಂದಿರುವ ಮಾಹಿತಿಯನ್ನು ನಾನು ಖಚಿತಪಡಿಸುತ್ತಿದ್ದೇನಷ್ಟೇ. ಜನವರಿ 16ರ ನಂತರ ಅವರು ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂದಿದ್ದಾರೆ.
ಇದಕ್ಕೆ ಸಾಕ್ಷಿಯೇ ಡೀನೋಟಿಫಿಕೇಶನ್ ಪ್ರಕರಣ ಈಗ ಮತ್ತೆ ಚರ್ಚೆಗೆ ಬಂದಿರುವುದು. ಇದು ದೇವಿಯ ಶಾಪವಲ್ಲದೇ ಇನ್ನೇನು? ಮಕರ ಸಂಕ್ರಮಣದ ನಂತರ ಹೊಸ ರಾಜಕೀಯ ತಿರುವು ಆಗಲಿದೆ ಎಂದಿದ್ದಾರೆ. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ಪರೋಕ್ಷವಾಗಿ ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದರು.
ನಾಯಕತ್ವ ಬದಲಾವಣೆಯ ಕಾವು ಜೋರಾಗಿದ್ದ ಸಂದರ್ಭದಲ್ಲಿ ಸಿ.ಟಿ.ರವಿ ಮಾತನಾಡುತ್ತ ರಾಜಕಾರಣದಲ್ಲಿ ಎಲ್ಲವೂ ಇರುತ್ತೆ. ಸದ್ದುಗದ್ದಲ ಇಲ್ಲದಿದ್ದರೆ ಜಾತ್ರೆ ಆಗಲ್ಲ ಎಂದು ಸಿ.ಟಿ. ರವಿ ಹೇಳಿದ್ದರು. ಆದರೆ ಪಕ್ಷ ನಾಯಕತ್ವ ಬದಲಾವಣೆಯನ್ನು ಒಪ್ಪುತ್ತಿಲ್ಲ. ಯಡಿಯೂರಪ್ಪನವರೇ ಮುಂದುವರೆಯಲಿದ್ದಾರೆ ಎನ್ನುತ್ತಿದೆ.
ಬೆಳಗಾವಿ, ಬೆಂಗಳೂರಿನ ಮೇಲೆ ಬಿದ್ದಿದೆ ಓವೈಸಿ ಕಣ್ಣು: ಅಧಿಪತ್ಯ ಸಾಧಿಸಲು ‘ಮಾಜಿ’ಗಳ ಭೇಟಿ

ಸ್ಥಾಪನಾ ದಿನ ಇದ್ರೇನಂತೆ? ಅಜ್ಜಿ ನೋಡೋಕೆ ಹೋಗಿರ್ಬೋದು… ಎಲ್ಲಾದಕ್ಕೂ ಕಾರಣ ಕೊಡೋಕಾಗತ್ತಾ?

2000 ವರ್ಷಗಳ ಹಿಂದೆಯೇ ಇತ್ತು ಫಾಸ್ಟ್​ಫುಡ್ ಮಳಿಗೆ​: ಇದು ಪತ್ತೆಯಾದದ್ದೇ ರೋಚಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − six =
Remember me
