ಬೆಂಗಳೂರು:ಮಾಜಿ ಸಚಿವ ರಮೇಶ್​ ಜಾರಕಿಹೊಳೆ ಸಿಡಿ ಕೇಸ್​ ಕ್ಷಣ ಕ್ಷಣಕ್ಕೂ ಹೊಸ ಹೊಸ ವಿವಾದಗಳನ್ನು ಸೃಷ್ಟಿ ಮಾಡುತ್ತಲೇ ಸಾಗಿದೆ. ಈ ವಿಚಾರದ ಕುರಿತಂತೆ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದೆ.
ಬಿಜೆಪಿ ಸಚಿವರಾಗಿದ್ದವರ ವಿರುದ್ಧ ಸಿಡಿ ಕೇಸ್​ ಬಂದಿದ್ದರಿಂದ ಕಾಂಗ್ರೆಸ್​ನವರು ಎಲ್ಲಾ ಬಿಜೆಪಿ ಮುಖಂಡರ ವಿರುದ್ಧ ಟೀಕೆ ಮಾಡುತ್ತಿದ್ದರೆ ಇದೀಗ ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ?” ಎಂದು ಸುಧಾಕರ್​ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನೂ ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ ಎಂದು ತಿಳಿಸಿದರು.
ಈ ವಿಷಯವನ್ನು ಸದನಲ್ಲಿ ಕೂಡ ಹೇಳಬೇಕು ಅಂದುಕೊಂಡಿದ್ದೆ.. ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. 225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ ಎಂದರು.
ಈ ಸವಾಲು ಇದೀಗ ಎಲ್ಲ ಪಕ್ಷದಲ್ಲಿಯೂ ಭಾರಿ ಕೋಲಾಹಲ ಸೃಷ್ಟಿ ಮಾಡಿದೆ.
ಡಿಪ್ಲೋಮಾ, ಹಿಂದಿ- ಇಂಗ್ಲಿಷ್​ನಲ್ಲಿ ಸ್ನಾತಕ ಪದವೀಧರರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ ಅರ್ಜಿ ಆಹ್ವಾನ

ಅಬ್ಬಾಜಾನ್​ ಬನ್ನಿ… ಶರಣಾಗಿ… ಶೂಟ್​ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!

ಹೆಂಡ್ತಿ ಕಳ್ಳತನ ಮಾಡ್ತಾಳೆ, ಗಲ್ಲಿಗಲ್ಲಿ ತಿರಗ್ತಾಳೆ, ಒಬ್ಬಳೇ ನಗ್ತಾಳೆ- ಭಯವಾಗ್ತಿದೆ, ಇದೇನಿದು ಮೇಡಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 14 =
Remember me
