ಬೆಂಗಳೂರು:ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್​- ಜೆಡಿಎಸ್​ ವಿರುದ್ಧ ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ಅವರು ನೀಡಿರುವ ಒಬ್ಳೇ ಹೆಂಡ್ತಿ ಸವಾಲ್​ ಇದೀಗ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿಬಿಟ್ಟಿದೆ.
ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. 225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ ಎಂದು ಸುಧಾಕರ್​ ಹೇಳಿದ್ದರು.
ಈ ಚಾಲೆಂಜ್​ಗೆ ತಾವು ರೆಡಿ ಎಂದು ಇದಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದರು. ಆದರೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್​ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಅವಶ್ಯಕತೆ ಏನಿತ್ತು, ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿಗೆ, ಅವುಗಳ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.
ಜತೆಗೆ, ಸುಧಾಕರ್​ ಅವರು ತಮ್ಮ ಹೆಸರನ್ನು ಪ್ರಸ್ತಾಪ ಮಾಡಿರುವುದು ಬೇಸರ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ನೋಡಿ ಎಲ್ಲರ ಮನೆಯ ದೋಸೆಯೂ ತೂತೇ. ಇವೆಲ್ಲಾ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪ್ರಕ್ರಿಯೆ. ಇದನ್ನು ಬೀದಿಗೆ ತರುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
“ಯಾರೂ ಸತ್ಯಹರಿಶ್ಚಂದ್ರರಲ್ಲ. ನಾನು ಇದಾಗಲೇ ಹೇಳಿಬಿಟ್ಟಿದ್ದೇನೆ. ನಾನು ಕೂಡ ಒಮ್ಮೆ ಎಡವಿದ್ದೆ ಅಂತ. ಸುಮ್ಮನೇ ನನ್ನ ಹೆಸರನ್ನು ಈ ವಿಷಯದಲ್ಲಿ ಎಳೆದು ತಂದಿರುವುದು ಸರಿಯಲ್ಲ ಎಂದರು,. ಪ್ರಾಣಿಗಳು ಕೂಡ ಈ ಕ್ರಿಯೆ ಮಾಡುತ್ತವೆ. ಅದು ದೇವರು ಕೊಟ್ಟ ಸಹಜ ಕ್ರಿಯೆ. ಇಂಥ ವಿಷಯಗಳನ್ನು ಬೀದಿಗೆ ತರುವುದು ಸರಿಯಲ್ಲ ಎಂದರು.
ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಎಂದು ಸವಾಲ್​ ಹಾಕಿದ ಸಚಿವ..

ನೋಡ್ರಪ್ಪಾ ನನಗಿರೋದು ಒಬ್ಳೇ ಹೆಂಡ್ತಿ, ತನಿಖೆ ಆಗ್ಲಿ… ಸತ್ಯ ಹರಿಶ್ಚಂದ್ರ ಚಾಲೆಂಜ್​ ಸ್ವೀಕರಿಸಿದ ಡಿಕೆಶಿ,

ಮಧ್ಯರಾತ್ರಿವರೆಗೂ ಬಿಸಿಬಿಸಿ ಮಾತು: ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಷಾ;

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − three =
Remember me
