ಬೆಂಗಳೂರು:ತಂಗಿಯನ್ನು ಪ್ರೀತಿಸಿ ವಿವಾಹವಾದ ಎಂಬ ಕಾರಣಕ್ಕೆ ರೌಡಿ ಹತ್ಯೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಸುಪಾರಿ ನೀಡಿದ್ದ ರೌಡಿ ಜಿಲಾನ್ ಕಳ್ಳಾಟ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.ವಿ.ವಿ.ಪುರ ಸಮೀಪದ ಪಾರ್ವತಿಪುರದ ಜಿಲಾನ್‌ನ ಸಹಚರರಾದ ಶೋಯೆಬ್, ನವೀದ್, ಅರ್ಬಾಜ್ ಖಾನ್ ಮತ್ತು ಫೈಝಲ್ ಬಂಧಿತರು. ಶಿವಗಂಗಾ ಮಠದ ರಸ್ತೆಯಲ್ಲಿ ರೌಡಿ ರಾಹುಲ್ ಹತ್ಯೆಗೆ ಆರೋಪಿಗಳು ಹೊಂಚು ಹಾಕಿದ್ದಾಗ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ವತಿಪುರದಲ್ಲಿ ಜಿಲಾನ್ ಮತ್ತು ರಾಹುಲ್ ನೆರೆಹೊರೆಯವರು. ಹಲವು ವರ್ಷಗಳಿಂದ ಅಪರಾಧಗಳಲ್ಲಿ ಸಕ್ರಿಯವಾಗಿದ್ದರು.
ವಿ.ವಿ.ಪುರ ಠಾಣೆಯಲ್ಲಿ ಇಬ್ಬರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಸ್ಥಳೀಯವಾಗಿ ಹಿಡಿತ ಸಾಧಿಸಲು ಮನಸ್ತಾಪವಾಗಿತ್ತು. ಸೋದರಿಯನ್ನು ರಾಹುಲ್ ಪ್ರೀತಿಸುವ ಸಂಗತಿ ತಿಳಿದು ಜಿಲಾನ್ ಕೋಪಗೊಂಡಿದ್ದ. ಅಲ್ಲದೆ, ತಂಗಿ ಸಹವಾಸಕ್ಕೆ ಬರದಂತೆ ರಾಹುಲ್‌ಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ. 2021ರಲ್ಲಿ ಮಹಿಳೆ ಕೊಲೆ ಪ್ರಕರಣ ಸಂಬಂಧ ಜಿಲಾನ್‌ನನ್ನು ಬಂಧಿಸಿ ವಿ.ವಿ.ಪುರ ಪೊಲೀಸರು ಜೈಲಿಗೆ ಕಳುಹಿಸಿದ್ದರು.
ಇತ್ತ ಜಿಲಾನ್ ಜೈಲು ಸೇರಿದ ಬಳಿಕ ಆತನ ತಂಗಿ ಜತೆ ರಾಹುಲ್ ಮದುವೆ ಆಗಿದ್ದ. ಕೆರಳಿದ ಜಿಲಾನ್, ತನ್ನ ಇಚ್ಛೆಗೆ ವಿರುದ್ಧವಾಗಿ ಸೋದರಿಯನ್ನು ಮದುವೆಯಾದ ಎಂಬ ಕಾರಣಕ್ಕೆ ರಾಹುಲ್ ಕೊಲೆಗೆ ನಿರ್ಧರಿಸಿದ್ದ. ಪಾರ್ವತಿಪುರದ ತನ್ನ ಸಹಚರರಾದ ಶೋಯೆಬ್, ನವೀದ್, ಅರ್ಬಾಜ್ ಖಾನ್ ಮತ್ತು ಫೈಝಲ್‌ನನ್ನು ಸೆಂಟ್ರಲ್ ಜೈಲಿಗೆ ಕರೆಸಿಕೊಂಡು ರಾಹುಲ್ ಹತ್ಯೆಗೆ ಸುಪಾರಿ ನೀಡಿದ್ದ. ಆರೋಪಿಗಳ ಚಲನವಲನಗಳ ಮೇಲೆ ಕಣ್ಣಿರಿಸಿದ್ದ ಪೊಲೀಸರು ಸಿಸಿಬಿ ಎಸಿಪಿ ಎಚ್.ಎನ್. ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿದೆ.
ಜೈಲಿನಲ್ಲಿ ಫೋಟೋ ಶೂಟ್ಕೊಲೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ರೌಡಿ ಜಿಲಾನ್, ಜೈಲಿನಲ್ಲಿ ಮೊಬೈಲ್‌ನಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದ. ಇದರ ಪೋಟೋ ಬಹಿರಂಗವಾಗಿದ್ದು, ಜೈಲಿನಲ್ಲಿ ರೌಡಿಗಳಿಗೆ ವಿಐಪಿ ಸತ್ಕಾರದ ಆರೋಪಕ್ಕೆ ಪುರಾವೆ ಲಭ್ಯವಾಗಿವೆ.
ಬಟ್ಟೆ ತೆಗೆಯದಿದ್ದರೂ, ಒಳ ಉಡುಪು ಇದ್ದಾಗ ದೌರ್ಜನ್ಯ ಎಸಗಿದರೂ ಅದು ಅತ್ಯಾಚಾರವೇ ಎಂದ ಹೈಕೋರ್ಟ್​

ಮದ್ವೆಯಾಗುವವರೆಗೂ ಚೆನ್ನಾಗಿ ಹಣ ಲೂಟಿ ಮಾಡಿ ಈಗ ನೀನು ಬೇಡ ಎನ್ನುತ್ತಿರೋ ಪತ್ನಿಯಿಂದ ಮುಕ್ತಿ ಹೇಗೆ?

VIDEO: ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ನವಜಾತ ಶಿಶು ಗಾಯಬ್​! ದಾವಣಗೆರೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 9 =
Remember me
