ಮೈಸೂರು:ನಿನ್ನೆ ಭಾನುವಾರವಷ್ಟೇ ತುಮಕೂರಿನ ಮನೆಯೊಂದರ ಹೊರಗೆ ಇದ್ದ ಶೂಸ್‌ನಲ್ಲಿ ನಾಗರಹಾವಿನ ಮರಿಯೊಂದು ಮಲಗಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಮೈಸೂರಿನ ಹೆಬ್ಬಾಳ ಮನೆಯ ಒಳಗೆ ನಾಗರಹಾವು ಕಾಣಸಿಕೊಂಡು ಆತಂಕ ಮೂಡಿಸಿರುವ ಘಟನೆ ನಡೆದಿದೆ.
ಹೆಬ್ಬಾಳದ ನಿವಾಸಿ ಮಂಗಲ್ ಅವರ ಮನೆಯೊಳಕ್ಕೆ ಹಾವು ನುಗ್ಗಿದೆ. ಮಂಗಲ್ ಅವರ ಮಗ ಜೀತು ಮಲಗಿದ್ದಾಗ ಆತನ ಮೇಲೆ ಹಾವು ಹರಿದು ಹೋಗಿದೆ. ತಕ್ಷಣವೇ ಜೀತು ಹಾವನ್ನು ದೂರ ಎಸೆದಿದ್ದಾನೆ. ಅದೃಷ್ಟವಶಾತ್‌ ಅದು ಆತನಿಗೆ ಕಚ್ಚಲಿಲ್ಲ. ಈ ಹಿನ್ನೆಲೆಯಲ್ಲಿ ಜೀತು ಸುರಕ್ಷಿತವಾಗಿದ್ದಾನೆ.
ಕೊನೆಗೆ ಗಲಾಟೆಯಾದಾಗ, ಹಾವು ಮನೆಯ ಟಿವಿ ಸ್ಟ್ಯಾಂಡ್ ಕೆಳಗೆ ಅಡಗಿ ಕುಳಿತಿತ್ತು. ಉರಗ ಸಂರಕ್ಷಕ ಸೂರ್ಯಕೀರ್ತಿ ಅವರನ್ನು ಕರೆಸಿ ಹಾವನ್ನು ರಕ್ಷಣೆ ಮಾಡಲಾಗಿದೆ. ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ಮೈಸೂರಿನ ಹೆಬ್ಬಾಳ ಮನೆಯ ಒಳಗೆ ನಾಗರಹಾವು ಕಾಣಸಿಕೊಂಡು ಆತಂಕ ಮೂಡಿಸಿರುವ ಘಟನೆ ನಡೆದಿದೆ.pic.twitter.com/2uAegUvL3O
— Vijayavani (@VVani4U)May 30, 2022

VIDEO: ಹೊರಗಿಟ್ಟಿರೋ ಶೂಸ್​ ಧರಿಸೋ ಮುನ್ನ ಎಚ್ಚರ: ಪ್ರಾಣಕ್ಕೇ ಕುತ್ತಾದೀತು! ತುಮಕೂರಿನ ಶಾಕಿಂಗ್​ ವಿಡಿಯೋ ನೋಡಿ…

ನಾಗರ ಹಾವಿನಿಂದ ಮಾಲೀಕನ ಪ್ರಾಣ ಉಳಿಸಿ ಕಣ್ಮುಚ್ಚಿದ ಶ್ವಾನ- ಕೋಲಾರದಲ್ಲೊಂದು ಮನಮಿಡಿಯುವ ಘಟನೆ

Sign in to your account
Please enter an answer in digits:2 × 1 =
Remember me
