ಬೆಂಗಳೂರು:ರಾಜ್ಯದ 30.26 ಲಕ್ಷ ರೈತರಿಗೆ 2021-22 ನೇ ಸಾಲಿನಲ್ಲಿ 19,370 ಕೋಟಿ ರೂ.ಅಲ್ಪಾವಧಿ ಬೆಳೆ ಸಾಲ 0.60 ಲಕ್ಷ ರೈತರಿಗೆ ರೂ. 1,440 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಒಟ್ಟು 30.86 ಲಕ್ಷ ರೈತರಿಗೆ ರೂ.20,810 ಕೋಟಿ ಸಾಲ ನೀಡಿಕೆ ಗುರಿ ಹೊಂದಲಾಗಿತ್ತು ಎಂದು ಬೆಂಗಳೂರಿನಲ್ಲಿ ಅವರು ಹೇಳಿದರು.
ಡಿ.31 ರವರೆಗೆ ಕೃಷಿ ಸಾಲ ವಿತರಣೆ ಸಾಧನೆ:19.27 ಲಕ್ಷ ರೈತರಿಗೆ ರೂ.13,295 ಕೋಟಿಗಳ ಅಲ್ಪಾವಧಿ ಕೃಷಿ ಸಾಲ, 0.31 ಲಕ್ಷ ರೈತರಿಗೆ ರೂ.893 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ, ಒಟ್ಟು 19.58 ಲಕ್ಷ ರೈತರಿಗೆ ರೂ. 14,188 ಕೋಟಿ ಕೃಷಿ ಸಾಲ ನೀಡಲಾಗಿದೆ. ಶೇಕಡವಾರು 68.18 ಪ್ರಗತಿ ಆಗಿದೆ. ಮೂರು ತಿಂಗಳಲ್ಲಿ ಉಳಿದ ಗುರಿಯನ್ನು ಸಾಧಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಡಿಸಿಸಿ ಬ್ಯಾಂಕಿನ ಅಲ್ಪಾವಧಿ ಮತ್ತು ಮಧ್ಯಮಾವಧಿ ಕೃಷಿ ಸಾಲ ವಸೂಲಾತಿ ಕ್ರಮವಾಗಿ ಶೇ.94.93 ಹಾಗೂ ಶೇ.76.29 ಈ ಯೋಜನೆ ಅನುಷ್ಠಾನಕ್ಕಾಗಿ ಈ ವರ್ಷದಲ್ಲಿ ಸಹಕಾರ ಸಂಸ್ಥೆಗಳಿಗೆ ರೂ.1,012 ಕೋಟಿಗಳ ಬಡ್ಡಿ ಸಹಾಯಧನ ನೀಡಲು ಅನುದಾನ ಕಲ್ಪಿಸಿದ್ದು, ಇದುವರೆಗೆ ರೂ. 757.21 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ:19,196 ಸ್ವಸಹಾಯ ಗುಂಪುಗಳಿಗೆ 689 ಕೋಟಿ ಸಾಲ ವಿತರಣೆ ಮಾಡಲಾಗುವುದು. ಈ ಸಾಲಿನಲ್ಲಿ ವಸೂಲಾಗುವ ಸಾಲಗಳಿಗೆ ಬಡ್ಡಿ ಸಹಾಯಧನಕ್ಕಾಗಿ ಆಯವ್ಯಯದಲ್ಲಿ 90.41 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಇದುವರೆಗೆ 36.01 ಕೋಟಿ ರೂ. ಬಡ್ಡಿ ಸಹಾಯಧನವನ್ನು ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಸಹಕಾರ ಸಂಘಗಳಲ್ಲಿ ರೈತರ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿ ಶೇ.7 ರ ಬಡ್ಡಿದರದಲ್ಲಿ ಕೃಷಿ ಅಡಮಾನ ಸಾಲ ವಿತರಣೆ ಮಾಡಲಾಗುವುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಮಾರುಕಟ್ಟೆ ಸಹಕಾರ ಸಂಘಗಳು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ತಮ್ಮ ಗೋದಾಮುಗಳಲ್ಲಿ ಶೇಖರಣೆ ಮಾಡಿ ಶೇ.7 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಈ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 18,958 ರೈತರಿಗೆ 306 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆ ಮತ್ತು ನಬಾರ್ಡ್‌ ಪ್ಯಾಕ್ಸ್ ಗಳನ್ನು ಬಹುಪಯೋಗಿ ಕೇಂದ್ರ ಗಳನ್ನಾಗಿ ಸ್ಥಾಪಿಸುವ ಯೋಜನೆ ಹೊಂದಲಾಗಿದೆ. ಈ ಯೋಜನೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮು ಸೌಲಭ್ಯ ಮತ್ತು ಕೊಯ್ಲು ನಂತರದ ಮೂಲಭೂತ ಸೌಕರ್ಯವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ.ನಿಗದಿಪಡಿಸಿದ ಗುರಿ 1,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನಬಾರ್ಡ್ 873 ಸಂಘಗಳಿಗೆ 302 ಕೋಟಿ ರೂ. ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.
ಈ ಪೈಕಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು 581 ಸಂಘಗಳಿಗೆ ರೂ.72.73 ಕೋಟಿಗಳನ್ನು ಬಿಡುಗಡೆ ಮಾಡಿರುತ್ತವೆ. ರೈತರಿಗೆ ತ್ವರಿತವಾಗಿ ಕೃಷಿ ಸಾಲ ದೊರೆಯಲು ಅನುಕೂಲವಾಗಲು ಇ-ಆಡಳಿತ ಇಲಾಖೆಯ ತಂತ್ರಾಂಶ ಬಳಸಿ ಆನ್‌ಲೈನ್ ಮೂಲಕ ಪಹಣಿಯಲ್ಲಿ ಸಾಲದ ಋಣವನ್ನು ದಾಖಲಿಸುವ ಬಗ್ಗೆ ಪ್ಯಾಕ್ಸ್, ಡಿಸಿಸಿ ಬ್ಯಾಂಕ್ ಶಾಖೆ ಮತ್ತು ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ರೈತರು ಕೃಷಿ ಸಾಲ ಪಡೆಯಲು ಸಾಲದ ಮೇಲಿನ ಋಣವನ್ನು ಪಹಣಿಯಲ್ಲಿ ದಾಖಲಿಸಲು ಮತ್ತು ಸಾಲ ತೀರುವಳಿ ಮಾಡಿದಾಗ ಬಿಡುಗಡೆ ಪತ್ರ ಪಡೆಯಲು ರೈತರು ಖುದ್ದಾಗಿ ಉಪನೊಂದಣಾಧಿಕಾರಿಗಳ ಕಚೇರಿಗೆ ದಾಖಲೆ ಸಲ್ಲಿಸಬೇಕಿತ್ತು. ಈ ವ್ಯವಸ್ಥೆಯನ್ನು ಆನ್‌ಲೈನ್ ಮಾಡಲಾಗಿದೆ.ಈ ವ್ಯವಸ್ಥೆಯಿಂದ ರೈತರಿಗೆ ತ್ವರಿತವಾಗಿ ಸಾಲದ ಋಣವನ್ನು ಪಹಣಿಯಲ್ಲಿ ದಾಖಲಿಸಿ ಸಾಲ ದೊರೆಯಲು ಸಹಾಯವಾಗಿರುತ್ತದೆ ಮತ್ತು ರೈತರು ಉಪ ನೊಂದಣಾಧಿಕಾರಿಗಳ ಕಛೇರಿಗೆ ಖುದ್ದಾಗಿ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ.
ಮಾರ್ಚ್ 2022 ರ ವರೆಗೆ ಉಪ ನೊಂದಣಾಧಿಕಾರಿಗಳ ಕಚೇರಿಗೆ ಭೌತಿಕವಾಗಿಯೂ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಏಪ್ರಿಲ್ 2022 ರಿಂದ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಮೂಲಕವೇ ದಾಖಲೆ ಸಲ್ಲಿಸಲು ಕ್ರಮವಹಿಸಲಾಗಿದೆ.
ಪಟ್ಟಣ ಸಹಕಾರ ಬ್ಯಾಂಕುಗಳ ಮಾಹಿತಿರಾಜ್ಯದಲ್ಲಿ ಒಟ್ಟು 264 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು 1,122 ಶಾಖೆಗಳನ್ನು ಹೊಂದಿರುತ್ತವೆ. ಈ ಪಟ್ಟಣ ಸಹಕಾರ ಬ್ಯಾಂಕುಗಳು ದಿನಾಂಕ 31-03-2021 ರ ಅಂತ್ಯಕ್ಕೆ ರೂ.45,580.09 ಕೋಟಿ ಠೇವಣಾತಿ, ರೂ.52,593.94 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ.29,219.38 ಕೋಟಿ ಸಾಲ ಮತ್ತು ಮುಂಗಡವನ್ನು ನೀಡಿರುತ್ತವೆ ಹಾಗೂ ರೂ.301.34 ಕೋಟಿ ಲಾಭವನ್ನು ಗಳಿಸಿರುತ್ತವೆ.ಈ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ 18 ಪಟ್ಟಣ ಬ್ಯಾಂಕುಗಳನ್ನು ದುರ್ಬಲ ಸಹಕಾರ ಬ್ಯಾಂಕುಗಳೆಂದು ಗುರುತಿಸಲಾಗಿರುತ್ತವೆ ಎಂದು ಸಚಿವರು ಹೇಳಿದರು.
ಟ್ರಕ್‌ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಐದು ಜೀವ- ಡಿವೈಡರ್‌ಗೆ ಗುದ್ದಿದ ಪರಿಣಾಮ ನಡೆಯಿತು ಅನಾಹುತ

ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಕೋರ್ಟ್‌ನಿಂದ ಭಾರಿ ದಂಡ ಹಾಕಿಸ್ಕೊಂಡ ಪತಿ! ಕಂ, ಕಿಂ ಎಂದರೆ ಆಸ್ತಿ ಜಪ್ತಿ ಮಾಡಲು ಆದೇಶ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × 3 =
Remember me
