ಬೆಂಗಳೂರು:ಬಿಗ್​ಬಾಸ್​ ಓಟಿಟಿ ರಿಯಾಲಿಟಿ ಷೋ ಕ್ಷಣಕ್ಷಣಕ್ಕೂ ನೋಡುಗರಿಗೆ ಕುತೂಹಲ ಮೂಡಿಸುತ್ತಿದೆ. ಒಂದು ವಾರದ ಚರ್ಚೆ ವಾರಾಂತ್ಯದಲ್ಲಿ ಸುದೀಪ್​ ನಡೆಸುತ್ತಾರೆ. ಈ ಸಂದರ್ಭದಲ್ಲಿ ಆಯಾ ವಾರದ ಕೆಲವೊಂದು ಕುತೂಹಲ ಘಟನೆಗಳು ಜನರ ಮುಂದೆ ಬರುತ್ತವೆ. ಅದೇ ರೀತಿ ಈ ವಾರದ ಚರ್ಚೆಯಲ್ಲಿ ಮುಖ್ಯವಾಗಿ ಮುನ್ನೆಲೆಗೆ ಬಂದದ್ದು ಭಾರಿ ಟ್ರೋಲ್​ ಮೂಲಕವೇ ಜನಪ್ರಿಯತೆ ಗಳಿಸುತ್ತಿರುವ ಸೋನು ಶ್ರೀನಿವಾಸ ಗೌಡ.
ಮೊದಲಿಗೆ ಸುದೀಪ್​, ಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವವರು ಯಾರು, ತಮ್ಮ ವಸ್ತುಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ ಗಲೀಜು ಮಾಡೋದು ಯಾರು ಎಂದು ಸ್ಪರ್ಧಿಗಳಿಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಬ್ಬೊಬ್ಬರ ಹೆಸರು ಹೇಳಿದ್ದಾರೆ. ಆಗ ಸ್ನಾನದ ವಿಷಯವೂ ಬಂದಾಗ, ಸೋನು ಗೌಡ ಅವರ ಸ್ನಾನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಇನ್ನೊಬ್ಬ ಸ್ಪರ್ಧಿ ಸಾನ್ಯಾ ಅಯ್ಯರ್​.
ಸೋನು ಗೌಡ ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಸುದೀಪ್​ ಅವರಿಗೆ ಹೇಳಿದ್ದಾರೆ. ಆಗ ಸುದೀಪ್​ ಇದು ನಿಜವೇ ಎಂದು ಕೇಳಿದಾಗ ಸೋನು ಗೌಡ, ಹೌದು ನನಗೆ ಮೂಡ್​ ಬಂದ್ರೆ ಮಾತ್ರ ಸ್ನಾನ ಮಾಡುತ್ತೇನೆ. ಇವತ್ತು ಸ್ನಾನ ಮಾಡಲಿಲ್ಲ ಎಂದಿದ್ದಾರೆ. ನನಗೆ ಸ್ನಾನ ಮಾಡಬೇಕು ಎಂದರೆ ಮೂಡ್​ ಬರಬೇಕು. ಅದಕ್ಕಾಗಿ ಮೂರು-ಮೂರು ದಿನ ಸ್ನಾನ ಮಾಡದೆಯೂ ಇರಬಲ್ಲೆ. ಸ್ನಾನದ ವಿಷಯದಲ್ಲಿ ಡ್ರಾಮಾ ಮಾಡಲಾರೆ ಎಂದಿದ್ದಾರೆ.
ಸ್ನಾನದ ಬಗ್ಗೆ ಹಲವರು ಡ್ರಾಮಾ ಮಾಡುತ್ತಾರೆ ಎಂದೂ ಇದೇ ವೇಳೆ ಸೋನು ಹೇಳಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಪ್ರತಿ ದಿನ ಸ್ನಾನ ಮಾಡೋ ಥರ ಡ್ರಾಮಾ ಮಾಡ್ತಾರೆ. ನಾನು ಹಾಗೆ ಮಾಡಲ್ಲ. ಮೂಡ್​ ಇಲ್ಲ ಅಂದ್ರೆ ಸ್ನಾನನೇ ಮಾಡಲ್ಲ ಎಂದರು. ಇದನ್ನು ಕೇಳಿ ಎಲ್ಲರೂ ಹುಬ್ಬೇರಿಸಿದರು.
ಒಂದಿಲ್ಲೊಂದು ವಿಷಯದಲ್ಲಿ ಟ್ರೋಲ್​ ಆಗ್ತಿರೋ, ಆ ಟ್ರೋಲ್​ನಿಂದಲೇ ಭಾರಿ ಖುಷಿ ಪಡ್ತಿರೋ ಸೋನು ಗೌಡ ಅವರನ್ನು ಟ್ರೋಲ್​ ಮಾಡಲು ಟ್ರೋಲಿಗರಿಗೆ ಈಗ ಸ್ನಾನದ ವಿಷಯವೂ ಸಿಕ್ಕಿದೆ.
ವೈಜಯಂತಿ ಮಾಲಾ@86: ಮೊದಲ ಬಾರಿಗೆ ಬಿಕಿನಿ ಧರಿಸಿ ಸಿನಿ ಜಗತ್ತಲ್ಲಿ ಹಂಗಾಮಾ ಸೃಷ್ಟಿಸಿದ್ದ ನಟಿ ಬಿಚ್ಚಿಟ್ಟ ಅನುಭವದ ಬುತ್ತಿ…

ಆತ ಮಧ್ಯರಾತ್ರಿ ಕರೆದಾಗ ಹೋದ್ರೆ ಸಿನಿಮಾದಲ್ಲಿ ಛಾನ್ಸ್​, ಇಲ್ಲದಿದ್ರೆ ಔಟ್​: ಕರಾಳ ಸತ್ಯ ಬಿಚ್ಚಿಟ್ಟ ನಟಿ ಮಲ್ಲಿಕಾ

ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡ ನಟಿ! ಖಾಸಗಿ ಅಂಗಗಳ ನೋವು ಬಿಚ್ಚಿಟ್ಟಿದ್ದು ಹೀಗೆ…

‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಚಂದು ಮನೆಗೆ ಸಾಕ್ಷಾತ್​ ಲಕ್ಷ್ಮಿಯ ಆಗಮನ: ಹೆಣ್ಣುಮಗುವಿನ ಜನನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
