ಬೆಂಗಳೂರು:ಬೆಂಗಳೂರಿನ ಸುಂಕದಕಟ್ಟೆ ಶಾಂತಿಧಾಮ ಕಾಲೇಜು ಗೋಡೆ, ರಸ್ತೆ ಮೇಲೆ ಸಾರಿ ಸಾರಿ ಸಾರಿ ಎಂದು ಬರೆಯಲಾಗಿದ್ದು, ಈ ಫೋಟೋಗಳು ಭಾರಿ ಪ್ರಶ್ನೆ ಹುಟ್ಟುಹಾಕಿವೆ.
ರಾತ್ರಿ ಮಲಗುವಾಗ ಇಲ್ಲದ ಈ ಬರಹ ರಾತ್ರೋರಾತ್ರಿ ಸೃಷ್ಟಿಯಾಗಿದ್ದು, ಬೆಳಗಾಗುತ್ತಿದ್ದಂತೆಯೇ ಎಲ್ಲೆಡೆ ಸಾರಿ ದರ್ಶನವಾಗಿದೆ. ಇದು ಪ್ರೇಮ ನಿವೇದನೆಯೋ, ಭಗ್ನ ಪ್ರೇಮಿ ಬರೆದದ್ದೋ ಎಂಬ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಆದರೆ ಅಲ್ಲಲ್ಲಿ ನಡುವೆ, ಸಾರಿ ಪಾ… ಸಾರಿ ಮಾ… ಎಂದೂ ಬರೆದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನೂರಾರು ಬಾರಿ ಇದೆಲ್ಲಾ ಬರೆದಿರುವವರು ಯಾರು? ಯಾರಿಗೆ, ಯಾಕಾಗಿ ಸಾರಿ ಕೇಳಿರುವುದು ಎಂಬೆಲ್ಲಾ ಪ್ರಶ್ನೆಗಳನ್ನು ಈ ಬರಹ ಹುಟ್ಟುಹಾಕಿದೆ.
ಗಾಡಿಯಲ್ಲಿ ಬಂದವರಾ?ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ಬೈಕ್‌ನಲ್ಲಿ ಬಂದು ಇಬ್ಬರು ಅಪರಿಚಿತರು ಇದನ್ನು ಬರೆದು ಹೋಗಿದ್ದಾರೆ. ಈ ಕುರಿತು ವಿಡಿಯೋ ಫುಟೇಜ್​ ಕೂಡ ಸಿಕ್ಕಿದ್ದು, ಅದರಲ್ಲಿ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಜೊಮ್ಯಾಟೊ ಬ್ಯಾಗ್ ಹಿಡಿದು ಇಬ್ಬರು ಬೈಕಿನಲ್ಲಿ ಬಂದಿರುವುದನ್ನು ಕಾಣಬಹುದು. ಬ್ಯಾಗ್ ನೊಳಗೆ ಕೆಂಪು ಬಣ್ಣದ ಸ್ಪ್ರೇ ತಂದಿದ್ರು. ಸ್ಪ್ರೇ ಮೂಲಕ ಸಾರಿ ಎಂದು ಬರೆದಿದ್ದಾರೆ.
ಈ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಇನ್ನಷ್ಟು ಸಿಸಿಟಿವಿಗಳ ಪರಿಶೀಲನೆ ನಡೆಸಿ ಅಪರಿಚಿತ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ.
ಅವನನ್ನು ಅಪ್ಪಾ ಎನ್ನಲು ಹೇಸಿಗೆಯಾಗ್ತಿದೆ, ಅವನನ್ನು ಸಾಯಿಸಲು ಆಗಲ್ಲ, ನಾನೇ ಸಾಯುತ್ತಿದ್ದೇನೆ: ಬಾಲಕಿ ಆತ್ಮಹತ್ಯೆ

ಮಂಡ್ಯದ ‘5 ರೂ. ಡಾಕ್ಟರ್’ ಶಂಕರೇಗೌಡರಿಗೆ ಹೃದಯಾಘಾತ- ಮೈಸೂರಿನ ಆಸ್ಪತ್ರೆಗೆ ದಾಖಲು

ಕಾರು ಚಾಲಕನ ಕೊಲೆ ಕೇಸ್​ಗೆ ಭಾರಿ ಟ್ವಿಸ್ಟ್: ನಾನೇ ಕೊಲೆಗಾರ ಎಂದು ಒಪ್ಪಿಕೊಂಡ ಶಾಸಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
