| ವಿಜಯವಾಣಿ ಸುದ್ದಿಜಾಲಚಿಕ್ಕಮಗಳೂರುಇಬ್ಬರಿಗೂಮಾತು ಬರುವುದಿಲ್ಲ, ಇದು ಹುಟ್ಟಿನಿಂದಲೇ ಇರುವ ಸಮಸ್ಯೆ. ಆದರೂ ಅವರ ನಡುವೆ ಪ್ರೀತಿ – ಪ್ರೇಮದ ಭಾವನೆ ವ್ಯಕ್ತಪಡಿಸಲು ಈ ಲೋಪ ಸಮಸ್ಯೆಯಾಗಲಿಲ್ಲ. ಅವರ ನಡುವೆ ಅರಳಿದ ಪ್ರೀತಿ ಸಪ್ತಪದಿ ತುಳಿಯಲು ನಾಂದಿಯಾಯಿತು. ಶುಕ್ರವಾರ ಇಲ್ಲಿನ ಒಕ್ಕಲಿಗರ ಭವನದಲ್ಲಿ ಬಂಧುಗಳ ಸಮ್ಮುಖದಲ್ಲಿ ಹೊಸ ಬದುಕಿಗೆ ಪದಾರ್ಪಣೆ ಮಾಡಿದರು.
ಕೆಎಸ್‍ಆರ್​ಟಿಸಿ ನಿವೃತ್ತ ನೌಕರ ಯಗಟಿ ಮಲ್ಲೇಶಪ್ಪ ಮಂಜುಳಾ ದಂಪತಿ ಪುತ್ರ ಡಿ.ಎಂ.ಶ್ರೀನಿವಾಸ್ ಹಾಗೂ ಕಣಿವೆದಾಸರಹಳ್ಳಿ ತಮ್ಮೇಗೌಡ ಕುಸುಮಾ ದಂಪತಿ ಪುತ್ರಿ ಡಿ.ಟಿ.ಕಾವ್ಯಾ ಸಪ್ತಪದಿ ತುಳಿದ ಅಪರೂಪದ ಜೋಡಿ ಇದು.
ಇಬ್ಬರೂ ನಗರದ ಅಂಗವಿಕಲರ ಶಾಲೆಗಳಲ್ಲಿ ಒಂದೆರಡು ವರ್ಷ ವಿದ್ಯಾಭ್ಯಾಸ ಮಾಡಿದ್ದಾರೆ. ಆಗ ಅವರಿಬ್ಬರು ಪರಸ್ಪರ ನೋಡಿದ್ದಷ್ಟೆ. ಶ್ರೀನಿವಾಸ್ ಬೇರೆ ಜಿಲ್ಲೆಗೆ ತೆರಳಿದ್ದರು. ಒಂದು ವರ್ಷದ ಹಿಂದೆ ಜಿಲ್ಲಾ ಆಟದ ಮೈದಾನದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಗ ಕಾವ್ಯಾ ಮತ್ತು ಶ್ರೀನಿವಾಸ್ ಅವರ ಭೇಟಿ ಆಯಿತು. ವಿಶ್ವ ಅಂಗವಿಕಲರ ದಿನವೇ ಅವರ ಪ್ರೇಮಾಂಕುರವಾಯಿತು. ಅಲ್ಲಿಂದಲೇ ಇಬ್ಬರೂ ಇಷ್ಟಪಟ್ಟು ಪರಸ್ಪರ ಪ್ರೀತಿಸುತ್ತಿದ್ದರು.
ಮೊಬೈಲ್ ವಿಡಿಯೋಕಾಲ್ ಮೂಲಕ ಪರಸ್ಪರ ಭಾವನೆ ಹಂಚಿಕೊಂಡ ಅವರು ನಂತರ ಪಾಲಕರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಸ್ನೇಹಿತರಾಗಿದ್ದವರು ಒಂದು ವರ್ಷದಿಂದ ಪ್ರೇಮಿಗಳಾಗಿ ಶುಕ್ರವಾರ ಒಕ್ಕಲಿಗರ ಭವನದಲ್ಲಿ ಸಪ್ತಪದಿ ತುಳಿದು ಬಾಳ ಸಂಗಾತಿಗಳಾದರು.
ಇಬ್ಬರೂ ಮೊಬೈಲ್ ವೀಡಿಯೋ ಕಾಲ್‍ನಲ್ಲಿ ಸನ್ನೆಗಳ ಮೂಲಕ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ವಧುವಿನ ಸಹೋದರ ಜೊತೆಯಲ್ಲೇ ಇರುತ್ತಿದುದರಿಂದ ಈ ವಿಷಯನ್ನು ಪಾಲಕರಿಗೆ ತಿಳಿಸಿ ಮದುವೆ ಮಾಡಲಾಯಿತು. ಮದುವೆಗೆ ಆಗಮಿಸಿದ್ದ ಬಂಧು ಬಳಗದವರು ಇಬ್ಬರೂ ಆದರ್ಶ ಜೀವನ ನಡೆಸಲಿ ಎಂದು ಹಾರೈಸಿದರು.
ಮಾಸ್ಕ್ ಧರಿಸಿ ಆರೋಗ್ಯ ಉಳಿಸಿಕೊಳ್ಳಿ :ನಗರ ಹೊರವಲಯದ ಎಐಟಿ ವೃತ್ತದ ಒಕ್ಕಲಿಗರ ಭವನದಲ್ಲಿ ಮದುವೆ ನೆರವೇರಿತು. ಮಾಸ್ಕ್ ಧರಿಸಿ ಆರೋಗ್ಯ ಉಳಿಸಿಕೊಳ್ಳಿ ಎಂಬ ಕರೊನಾ ತಡೆ ನಿಯಮ ಫಲಕಗಳನ್ನು ಮದುವೆ ಮಂಟಪದಲ್ಲಿ ಅಳವಡಿಸಲಾಗಿತ್ತು. ವಧು- ವರರು ಮಾಸ್ಕ್ ಧರಿಸಿದ್ದರು. ಶುಭ ಕಾರ್ಯಕ್ಕೆ 30ಕ್ಕೂ ಹೆಚ್ಚು ಮಾತುಬಾರದ ಸ್ನೇಹಿತರು ಆಗಮಿಸಿದ್ದರು. ಎರಡೂ ಕುಟುಂಬದವರು, ಬಂಧುಗಳು ನವದಂಪತಿಗೆ ಶುಭ ಹಾರೈಸಿದರು.
ಹುಟ್ಟಿನಿಂದಲೇ ಸಮಸ್ಯೆ:ಇವರಿಬ್ಬರಿಗೂ ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಕಾವ್ಯಾ ಮನೆಯಲ್ಲಿ ಪಾಲಕರ ಕೆಲಸಕ್ಕೆ ಸಹಕರಿಸುತ್ತಿದ್ದರು. ಬೇಕರಿ ತಿನಿಸುಗಳ ತಯಾರಿಕೆಯಲ್ಲಿ ನಿಪುಣನಾಗಿರುವ ಶ್ರೀನಿವಾಸ್ ಏಳೆಂಟು ವರ್ಷದಿಂದಲೂ ಕೈ ತುಂಬ ಕಾಸು ಸಂಪಾದಿಸಿ ಜೀವನ ನಡೆಸುತ್ತಿದ್ದಾನೆ ಎನ್ನುತ್ತಾರೆ ಶ್ರೀನಿವಾಸ್ ಅವರ ತಂದೆ ಡಿ.ಕೆ.ಮಲ್ಲೇಶಪ್ಪ.
ಹುಟ್ಟಿ 4 ವರ್ಷವಾದರೂ ಮಗನಿಗೆ ಮಾತು ಬರಲಿಲ್ಲ. ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆ ವೈದ್ಯರು ಪರೀಕ್ಷಿಸಿ ಹುಟ್ಟಿನಿಂದ ಸಮಸ್ಯೆ ಇರುವುದರಿಂದ ಮಾತು ಬರುವುದು ಕಷ್ಟಸಾಧ್ಯ ಎಂದು ಹೇಳಿದ್ದರು. ಅವರ ಸಲಹೆಯಂತೆ ದಾವಣಗೆರೆ, ಶಿವಮೊಗ್ಗ, ಭದ್ರಾವತಿ ತರಂಗ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೂ ವಿದ್ಯಾಭ್ಯಾಸ ಜತೆ ಉತ್ತಮ ತರಬೇತಿ ಸಿಕ್ಕಿದರೂ ಮಾತು ಬರಲಿಲ್ಲ. ನಗರದಲ್ಲಿ 9ನೇ ತರಗತಿವರೆಗೂ ವಿದ್ಯಾಭ್ಯಾಸದ ನಂತರ ಉದ್ಯೋಗ ಮಾಡಲಾರಂಭಿಸಿದ ಎಂದು ಅವರು ನೆನಪಿಸಿಕೊಂಡರು.
ಮಗಳ ಮದುವೆಗೆ ತೀವ್ರ ಸಂತಸ ಪಟ್ಟಿರುವ ಕಾವ್ಯಾ ಅವರ ಅಮ್ಮ ಕುಸುಮಾ ತಮ್ಮೇಗೌಡ ಮಗಳಿಗೆ ಮಾತು ಬರುತ್ತಿಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡಿಕೊಟ್ಟಿದ್ದೇವೆ ಎಂದರು.
ಕರೊನಾ ಬಿಕ್ಕಟ್ಟಿನಲ್ಲೂ ಈ ಶಿಕ್ಷಕಿಯಾದರು ಕೋಟ್ಯಧಿಪತಿ!

ಕೇಂದ್ರದಿಂದ ಫಲಾನುಭವಿಗಳಿಗೆ ಸಿಗಲಿದೆ ₹6 ಸಾವಿರ: ಹೆಸರಿದೆಯೇ ನೋಡಿಕೊಳ್ಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
