ಬೆಂಗಳೂರು:ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದು ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಚಿವ ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.
ಈ ಬಾರಿ ಪರೀಕ್ಷೆ ಇದ್ದರೂ ವಿಭಿನ್ನ ರೀತಿಯಲ್ಲಿ ಇರುತ್ತದೆ. ಅದೇನೆಂದರೆ ಎರಡೇ ಪರೀಕ್ಷೆಗಳು ನಡೆಯಲಿವೆ.
ಒಂದನೇ ಪತ್ರಿಕೆಯಲ್ಲಿ ವಿಜ್ಞಾನ, ಗಣಿತ, ಸಮಾಜವಿಜ್ಞಾನ (science, maths and socialscience) ಮೂರು ವಿಷಯಗಳು ಸೇರಿ ಇರುತ್ತದೆ. ಇದರಲ್ಲಿ ಮಲ್ಟಿ ಚಾಯ್ಸ್‌ ಪ್ರಶ್ನೆಗಳು ಇರುತ್ತವೆ. ಪ್ರತಿ ಪ್ರಶ್ನೆಗೂ ನಾಲ್ಕೈದು ಉತ್ತರ ಇರುತ್ತವೆ. ಇವು ಸರಳ ಮತ್ತು ನೇರವಾಗಿರುತ್ತದೆ. ಅವುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.
ಇನ್ನೊಂದು ಲಾಂಗ್ವೇಜ್‌ ಪರೀಕ್ಷೆ. (ಕನ್ನಡ/ ಸಂಸ್ಕೃತ/ಹಿಂದಿ ಮತ್ತು ಇಂಗ್ಲಿಷ್‌) ಇದರಲ್ಲಿಯೂ ಇದೇ ರೀತಿ ಮಲ್ಟಿ ಚಾಯ್ಸ್‌ ಪ್ರಶ್ನೆಗಳು ಇರಲಿವೆ. ಮಕ್ಕಳಿಗೆ ಗ್ರೆಡೇಷನ್‌ ಅಂದರೆ ಎ ಪ್ಲಸ್‌, ಎ, ಈ ರೀತಿಯಾಗಿ ನೀ ಡಲಾಗುತ್ತದೆ. ಯಾರಿಗಾದರೂ ಒಂದು ವೇಳೆ ಕೋವಿಡ್‌ ಅಥವಾ ಇನ್ನಾವುದೇ ಕಾರಣಗಳಿಂದ ಪರೀಕ್ಷೆ ಬರೆಯಲು ಆಗದಿದ್ದರೆ ಅವರಿಗೆ ಪೂರಕ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಆ ಬಗ್ಗೆ ಸವಿಸ್ತಾರವಾಗಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಅಂಕಗಳು ಹೇಗೆ?ಪ್ರತಿ ವಿಷಯಕ್ಕೂ ತಲಾ 40-40 ಅಂಕಗಳನ್ನು ನೀಡಲಾಗುತ್ತದೆ. ಇದರರ್ಥ  ಮೊದಲ ಪತ್ರಿಕೆಯಲ್ಲಿ ಮೂರು ಸಬ್‌ಜೆಕ್ಟ್‌ ಇರುವ ಕಾರಣ 40, 40 ಎಂದರೆ 120 ಅಂಕಗಳು ಇರುತ್ತವೆ. ಎರಡನೆಯ ದಿನದ ಪತ್ರಿಕೆಯಲ್ಲಿ 120 ಅಂಕಗಳು ಇರುತ್ತವೆ.
ಜುಲೈ ಕೊನೆಯ ಭಾಗ ಅಥವಾ ಆಗಸ್ಟ್‌ ಮೊದಲ ಭಾಗದಲ್ಲಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಲ್ಲರಿಗೂ ಎನ್‌ 95 ಮಾಸ್ಕ್‌ ವಿತರಣೆ ಮಾಡುತ್ತೇವೆ, ಮನೆಯ ಸಮೀಪದ ಕೇಂದ್ರದಲ್ಲಿಯೇ ಬರೆಯಲು ಅವಕಾಶ ಕಲ್ಪಿಸುತ್ತೇವೆ. ಯಾವುದೇ ಕಾರಣಕ್ಕೂ ಮಕ್ಕಳು ಹೆದರುವ ಅಗತ್ಯವಿಲ್ಲ, ಎಲ್ಲರನ್ನೂ ಪಾಸ್‌ ಮಾಡಲಾಗುವುದು. ನಾನು ಚೆನ್ನಾಗಿ ಓದಿಲ್ಲ ಪರೀಕ್ಷೆ ಬರೆದರೂ ಫೇಲ್ ಆಗುತ್ತೇನೆ ಎಂಬ ಆಲೋಚನೆ ಬಿಟ್ಟು ಪರೀಕ್ಷೆ ಹಾಜರಾದರೆ ಸಾಕು ನೀವು ಪಾಸ್.ಎಂದು ಸಚಿವರು ಹೇಳಿದರು.
ಮೂರನೇ ವೇವ್‌ ಮಕ್ಕಳ ಮೇಲೆ ಅಫೆಕ್ಟ್‌ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ವಿಭಿನ್ನ ನಿಲುವು ವ್ಯಕ್ತವಾಗುತ್ತಿದೆ. ಆದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಚಿವರು ಹೇಳಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ 8.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಕಳೆದ ವರ್ಷ ನಾವು 9ನೇ ತರಗತಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದ್ದೇವೆ. ಕಳೆದ ವರ್ಷದ ವಿದ್ಯಾರ್ಥಿಗಳ ಮೌಲ್ಯಾಂಕನ ಇಲ್ಲದೆ ಇರುವುದರಿಂದ ಪರೀಕ್ಷೆ ಮಾಡುವುದು ಅನಿವಾರ್ಯವಾಗಿದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು- ಹಾಗಿದ್ದರೆ ಅಂಕ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 8 =
Remember me
