ರಾಯಚೂರು:ಪ್ರವಾಹದ ಭೀತಿ ನಡುವೆ ಕೃಷ್ಣಾ ನದಿ ತಟದಲ್ಲಿ ಚಿತ್ರ ವಿಚಿತ್ರ ಪೂಜೆಯನ್ನು ಗ್ರಾಮಸ್ಥರು ನಡೆಸಿದ್ದಾರೆ. ರಾಯಚೂರು ತಾಲೂಕಿನ ಕಾಡ್ಲೂರು ಬಳಿ ಈ ಘಟನೆ ನಡೆದಿದೆ.
ಮಹಿಳೆಯರ ಮೈಮೇಲಿನ ದೆವ್ವ, ಭೂತ ಬಿಡಿಸುವ ನೆಪದಲ್ಲಿ ಪೂಜೆ ಮಾಡಲಾಗಿದೆ. ನಿಂಬೆ ಹಣ್ಣು, ನೈವೇದ್ಯ ನದಿಗೆ ಹರಿ ಬಿಟ್ಟು, ನದಿಯಲ್ಲೇ ಸ್ನಾನ ಮಾಡಿರುವ ದೃಶ್ಯ ಕಂಡುಬಂದಿದೆ.
ನದಿಗೆ ಹೊಸ ನೀರು ಬರುತ್ತಿರುವ ಹಿನ್ನೆಲೆ ವಿಚಿತ್ರ ಪೂಜೆಗೆ ಜನರು ಮುಂದಾಗಿದ್ದಾರೆ. ನಾರಾಯಣಪುರ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.
ನದಿ ಸೆಳೆತ ಜೋರಾಗಿದ್ದರೂ ನದಿ ತಟಕ್ಕೆ ಬರುತ್ತಿರುವ ಜನ ವಿಚಿತ್ರ ಪೂಜೆಯಲ್ಲಿ ತೊಡಗಿದ್ದಾರೆ. ಪೂಜೆಯ ಜತೆಗೆ ಮೀನು ಹಿಡಿಯಲು ಕೂಡ ಜನರು ಬರುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಇಲ್ಲಿದೆ ನೋಡಿ ವಿಡಿಯೋ:
ಪ್ರವಾಹದ ಭೀತಿ ನಡುವೆಯೂ ರಾಯಚೂರು ತಾಲೂಕಿನ ಕಾಡ್ಲೂರು ಬಳಿ ಕೃಷ್ಣಾ ನದಿ ತಟದಲ್ಲಿ ಮಹಿಳೆಯರಿಗೆ ದೆವ್ವ ಬಿಡಿಸುವ ಸಾಹಸಕ್ಕೆ ಜನ ಕೈಹಾಕಿದ್ದಾರೆ.pic.twitter.com/vcbXHNjSSR— Vijayavani (@VVani4U)July 18, 2022
ಪ್ರವಾಹದ ಭೀತಿ ನಡುವೆಯೂ ರಾಯಚೂರು ತಾಲೂಕಿನ ಕಾಡ್ಲೂರು ಬಳಿ ಕೃಷ್ಣಾ ನದಿ ತಟದಲ್ಲಿ ಮಹಿಳೆಯರಿಗೆ ದೆವ್ವ ಬಿಡಿಸುವ ಸಾಹಸಕ್ಕೆ ಜನ ಕೈಹಾಕಿದ್ದಾರೆ.pic.twitter.com/vcbXHNjSSR
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
