ಮಂಗಳೂರು:ಕೊಡಗಿನ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಎಂಬುವವರನ್ನು ಕಳೆದ ವರ್ಷ ಕೊಲೆ ಮಾಡಿರುವ ಆರೋಪ ಹೊತ್ತ ಸಂಪತ್​ಕುಮಾರ್​ (35) ಇಂದು ಸುಳ್ಯದಲ್ಲಿ ಗುಂಡಿಗೆ ಬಲಿಯಾಗಿದ್ದಾರೆ. ಇಂದು ನಸುಕಿನ ವೇಳೆ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಸುಳ್ಯ ತಾಲೂಕಿನ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ.
ಕಾರಿನಲ್ಲಿ ಬಂದ ನಾಲ್ವರ ತಂಡದಿಂದ ಗುಂಡಿನ ದಾಳಿ ನಡೆದಿದೆ. ಸಂಪತ್ ಬೆಳಗ್ಗೆ ಸುಮಾರು 6.30ರ ಹೊತ್ತಿಗೆ ಮನೆಯಿಂದ ಕಾರಿನಲ್ಲಿ ಹೊರಡುತ್ತಿದ್ದರು. ಈ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ಕಾರಿನ ಗಾಜಿಗೆ ಗುಂಡೇಟು ಬಿದ್ದ ಕೂಡಲೇ ಸಂಪತ್ ಕಾರಿನಿಂದ ಇಳಿದು ಪಕ್ಕದ ಇನ್ನೊಂದು ಮನೆಯತ್ತ ಓಡಿದ್ದಾರೆ‌. ಆದರೆ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಸೇಡಿನ ಕೊಲೆ: ಬೆಂಗಳೂರು ನಂ.1- ರಾಜಧಾನಿಯಲ್ಲಿ ನಡೆದಿರುವ ದ್ವೇಷದ ಹತ್ಯೆ ಎಷ್ಟು ಗೊತ್ತಾ?
ಗುಂಡೇಟು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಪತ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಸಂಪತ್ ಕುಮಾರ್ ಮೃತಪಟ್ಟಿದ್ದಾರೆ.
ಇದೊಂದು ಪೂರ್ವ ದ್ವೇಷದ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು, ಎಫ್‍ಎಸ್‍ಎಲ್ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
24 ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಣೆ- ಪ್ರವೇಶ​ ಪಡೆಯುವಾಗ ಎಚ್ಚರ: ಇಲ್ಲಿದೆ ವಿವರ

ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
