ಬೆಂಗಳೂರು:ಕಳೆದ ಹಲವು ದಿನಗಳಿಂದ ನಟಿ, ಸಂಸದೆ ಸುಮಲತಾ ಅಂಬರೀಶ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ನಡೆಯುತ್ತಿರುವ ಜಟಾಪಟಿ ಇದೀಗ ಜಾತಿ ಬಣ್ಣಕ್ಕೆ ತಿರುಗಿ ಆವಾಂತರ ಸೃಷ್ಟಿಸಿದೆ.ಇವರ ವಾಕ್ಸಮರದ ಮಧ್ಯೆ ಪ್ರವೇಶ ಮಾಡಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಳ್ಳಿಕಾರ್‌ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ವಿರುದ್ಧ ಈ ಸಮುದಾಯದವರು ಸಿಡಿದೆದ್ದಿದ್ದಾರೆ.
ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡುವ ಭರದಲ್ಲಿ ರಾಕ್‌ಲೈನ್‌ ವೆಂಕಟೇಶ್ ಅವರು ವಜ್ರಮುನಿ ಅವರ ಬಗ್ಗೆ  ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಹಳ್ಳಿಕಾರ್ ಸಮುದಾಯದವರು, ಕೂಡಲೇ ಅವರು ತಮ್ಮ ಸಮಯದಾಯದ ಕ್ಷಮೆ ಕೋರಬೇಕು ಎಂದಿದ್ದಾರೆ. ಅವರ ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ವಿಜಯನಗರದ ಶ್ರೀ ಆದಿಚುಂಚನಗಿರಿ ಮಠದ ಬಳಿ ಪ್ರತಿಭಟನೆ ಮಾಡಲಿರುವ ಹಳ್ಳಿಕಾರ್ ಸಮುದಾಯದವರು ಕೂಡಲೆ ರಾಕ್‌ಲೈನ್‌ ವೆಂಕಟೇಶ್‌ ಅವರು ಕ್ಷಮೆ ಕೋರಬೇಕು ಎಂದಿದ್ದಾರೆ.ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡುವಾಗ ರಾಕ್‌ಲೈನ್‌ ವೆಂಕಟೇಶ್‌ ಅವರು, ‘ಅಂಬಿ ಇದ್ದಾಗ ಮುಂಗಾರು ಮಳೆ ಗಣೇಶ್ ರೀತಿ ಇದ್ರು, ಈಗ ವಜ್ರಮುನಿ ತರ ಆಗಿದ್ದಾರೆ. ಅವರ ರೀತಿಯಲ್ಲಿ ಖಳನಾಯಕನ ಥರ ಕೂಗಾಟ ಶುರು ಮಾಡಿದ್ದಾರೆ’ ಎಂದಿದ್ದರು. ಅದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಿರಿಯ ನಟನನ್ನು ನಿಂದಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
‘ನನ್ನ-ಸುಮಲತಾರ ಅಶ್ಲೀಲ ವಿಡಿಯೋ ಮಾಡಲು ಹೊರಟಿದ್ರು ಕುಮಾರಸ್ವಾಮಿ, ಅಂಥ ಕೊಳಕು ಮನಸು ಅವರದ್ದು’

VIDEO: ದಿಢೀರ್‌ ಪತ್ತೆಯಾದ ರಮ್ಯಾ ಹೇಳಿದ್ರು ಗುಟ್ಟಿನ ವಿಷ್ಯ: ಆದರೆ ಅದೊಂದು ಪ್ರಶ್ನೆಗೆ ಮಾತ್ರ ಗಪ್‌ಚುಪ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twenty =
Remember me
