ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಗೆ ಶಾಲಾ-ಕಾಲೇಜುಗಳ ತರಗತಿಗಳು ಸರಿಯಾಗಿ ನಡೆಯಲಿಲ್ಲ. ಇದರಿಂದ ಎಷ್ಟೋ ಶಾಲೆಗಳಲ್ಲಿನ ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ 2022-23ರ ಅವಧಿಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ;ವನ್ನು ಸರ್ಕಾರ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಬೇಸಿಗೆ ರಜೆಯನ್ನು ಸ್ವಲ್ಪ ಕಡಿಮೆ ಮಾಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದೇ ರೀತಿ 1-9ನೇ ತರಗತಿಗೆ ಯಾವಾಗ ವಾರ್ಷಿಕ ಪರೀಕ್ಷೆ ನಡೆಸಬೇಕು ಎಂಬ ಬಗ್ಗೆ ಸುತ್ತೋಲೆಯಲ್ಲಿ ವಿವರಿಸಲಾಗಿದೆ.ಅದರ ವಿವರ ಹೀಗಿದೆ:ಬೇಸಿಗೆ ರಜೆಯು ಏಪ್ರಿಲ್​ 10 ರಿಂದ ಮೇ 15ರವರೆಗೆ ಇರಲಿದೆ. ಮೇ 16ರಿಂದ ಶಾಲೆಗಳು ಆರಂಭವಾಗಲಿವೆ.
1-9ನೇ ತರಗತಿಯ ಪರೀಕ್ಷೆ ವೇಳಾಪಟ್ಟಿ:1 ರಿಂದ 5 ಮತ್ತು 1ರಿಂದ 7/8 ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಲ್ಲಿ ಮಾರ್ಚ್​ 24ರಿಂದ ಏಪ್ರಿಲ್​ 4ರವರೆಗೆ;
8-9ನೇ ತರಗತಿಗಳು ಇರುವ ಪ್ರೌಢಶಾಲೆಗಳಲ್ಲಿ ಮಾರ್ಚ್​ 21ರಿಂದ ಮಾರ್ಚ್​ 26ರವರೆಗೆ ವಿಷಯವಾರು ಪರೀಕ್ಷೆಗಳು ಮತ್ತು ಮಾರ್ಚ್​ 29ರಂದು ಭಾಗ-2 (ದೈಹಿಕ ಶಿಕ್ಷಣ ಮತ್ತು ಇತರ) ಪರೀಕ್ಷೆಗಳು ನಡೆಯಲಿವೆ.
ಇದರ ಹೊರತಾಗಿ ಶಾಲೆಗಳ ಚಟುವಟಿಕೆಗಳ ಸಂಪೂರ್ಣ ವಿವರ ಈ ಕೆಳಗಿನ ಲಿಸ್ಟ್​ನಲ್ಲಿದೆ.

VIDEO: ಸಮಸ್ತ ಕನ್ನಡಿಗರಿಗೆ ನಮಸ್ಕಾರ… ಇವತ್ತಿನಿಂದ ನಾನು ರಾಧಿಕಾ ಕುಮಾರಸ್ವಾಮಿ ಎನ್ನುವ ಹೊಸ….

ಹರ್ಷನ ಕೊಲೆ ಮಾಡಿ ಅನುಮಾನ ಬಾರದಂತೆ ತಣ್ಣಗಿದ್ದ ಆರೋಪಿಗಳು ಸಿಕ್ಕಿಬಿದ್ದದ್ದೇ ರೋಚಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
