ಬೆಂಗಳೂರು:ಗಂಡನನ್ನು ಕೊಲ್ಲಲು ಹೆಂಡತಿಯೇ ಸುಪಾರಿ ಕೊಟ್ಟು, ತಂದೆಯನ್ನು ಸಾಯಿಸಲು ಮಗನೇ ಆರು ಲಕ್ಷ ರೂಪಾಯಿ ನೀಡಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಬ್ಬರಾಯಪ್ಪ ಎಂಬುವವರು ಕೊಲೆಯಾದವರು. ಯಶೋದಮ್ಮ ಹಾಗೂ ಅವರ ಮಗ ದೇವರಾಜ್ ಎನ್ನುವವರು ಈ ಕೃತ್ಯ ಎಸಗಿದ್ದು, ಇವರು ಅನಿಲ್ ಎಂಬಾತನಿಗೆ ದುಡ್ಡು ನೀಡಿ ಕೊಲೆಗೆ ಸುಪಾರಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ವೈಟ್ ಫೀಲ್ಡ್ ಸಂಚಾರಿ ಪೊಲೀಸರ ವ್ಯಾಪ್ತಿಯಲ್ಲಿ ಶವ ಸಿಕ್ಕಿತ್ತು. ಆದರೆ ತನ್ನ ಪತಿ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಯಶೋದಮ್ಮ ಹೇಳಿದ್ದಳು. ಇದಕ್ಕೆ ಮಗ ಕೂಡ ಸಾಥ್​ ನೀಡಿದ್ದ. ಅಪ್ಪ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದ.
ಆದರೆ ಪೊಲೀಸರು ಇದು ಅಪಘಾತವೋ, ಕೊಲೆಯೋ ಎಂಬ ಬಗ್ಗೆ ತನಿಖೆ ಆರಂಭಿಸಿದ್ದರು. ನಂತರ ಪ್ರಕರಣ ಸಂಬಂಧ ತನಿಖೆಗೆ ಒಂದು ತಂಡ ರಚಿಸಲಾಗಿತ್ತು. ತನಿಖೆಯ ವೇಳೆ ಸ್ಥಳದಲ್ಲಿ ಅಪಘಾತದ ಬಗ್ಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಇದರಿಂದ ಈ ಸಾವಿನ ಬಗ್ಗೆ ಇನ್ನಷ್ಟು ಸಂದೇಹ ಬಂತು.
ನಂತರ ಪೊಲೀಸರು ಕೊಲೆಯಾದ ವ್ಯಕ್ತಿಯ ಮೊಬೈಲ್ ಲಾಸ್ಟ್ ಕಾಲ್ ಹಾಗೂ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದರು. ಕೊಲೆಯಾದ ಸುಬ್ಬರಾಯಪ್ಪನಿಗೆ ಕೊನೆಬಾರಿಗೆ ಅನಿಲ್ ಕರೆ ಮಾಡಿದ್ದು ತಿಳಿದುಬಂತು. ಮಾತ್ರವಲ್ಲದೇ ಸಿಸಿಟಿವಿಯಲ್ಲಿ ಅದೇ ರಸ್ತೆಯಲ್ಲಿ ಕಂಡುಬಂದಿದ್ದ ಸ್ಕಾರ್ಫಿಯೋ ಕಾರ್ ಮಾಲೀಕ ಕೂಡಾ ಅನಿಲ್ ಆಗಿರುವುದು ತಿಳಿಯಿತು.
ಆದ್ದರಿಂದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಅನಿಲ್​ನನ್ನು ಹಿಡಿದಾಗ ಆತ ಬಾಯಿ ಬಿಟ್ಟಿದ್ದಾನೆ. 6 ಲಕ್ಷ ರೂಪಾಯಿಗೆ ಡೀಲ್ ಮಾಡ್ಕೊಂಡಿದ್ದು, ಮುಂಗಡವಾಗಿ 4 ಲಕ್ಷ ರೂಪಾಯಿ ಪಡೆದಿರುವುದನ್ನು ಹೇಳಿದ್ದಾನೆ. ಅನಿಲ್ ಜೊತೆ ಸುನೀಲ್ ಕುಮಾರ್, ನಾಗೇಶ್, ಧನುಷ್ ಸೇರಿ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಿರುವ ವಿಷಯ ತಿಳಿದಿದೆ. ತನಿಖೆ ಮುಂದುವರೆದಿದೆ.
ಸಿಡಿ ಲೇಡಿ ಕಿಡ್ನ್ಯಾಪ್ ಪ್ರಕರಣ: ಕೇಸ್ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ !

ಗರ್ಲ್​ಫ್ರೆಂಡ್​ ಜತೆ ತಂದೆಯ ಸರಸ: ಕಣ್ಣಾರೆ ಕಂಡ ಮಗ ಎಸಗಿದ ಕೃತ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
