ಬೆಂಗಳೂರು:ಸುಪ್ರೀಂಕೋರ್ಟ್‌ ಆದೇಶದ ಹೊರತಾಗಿಯೂ ಹಲವು ಮಸೀದಿಗಳಲ್ಲಿ ಧ್ವನಿವರ್ಧಕಗಳಲ್ಲಿ ಆಜಾನ್‌ ಹೇಳುತ್ತಿರುವುದನ್ನು ವಿರೋಧಿಸಿರುವ ಕೆಲ ಹಿಂದೂ ಸಂಘಟನೆಗಳು ಸುಪ್ರಭಾತ ಅಭಿಯಾನಕ್ಕೆ ಚಾಲನೆ ನೀಡಿವೆ. ಈ ಹಿನ್ನೆಲೆಯಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ರಾಜ್ಯದ ವಿವಿಧ ದೇಗುಲಗಳಲ್ಲಿ ಏಕಕಾಲದಲ್ಲಿ ಸುಪ್ರಭಾತ ಮತ್ತು ಹನುಮಾನ್‌ ಚಾಲೀಸಾ ಮೊಳಗುತ್ತಿದೆ.
ಪ್ರತಿನಿತ್ಯವೂ ಹಲವು ದೇಗುಲಗಳಲ್ಲಿ ಸುಪ್ರಭಾತ ಮೊಳಗುವುದು ಸಾಮಾನ್ಯ. ಆದರೆ ಅದು ಸೀಮಿತ ದೂರದವರೆಗೆ ಮಾತ್ರ ಕೇಳುತ್ತಲಿದೆ. ಆದರೆ ಧ್ವನಿವರ್ಧಕಗಳ ಮೂಲಕ ಬಹುದೂರದವರೆಗೆ ಆಜಾನ್‌ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ತಾವು ಕೂಡ ಅದನ್ನು ವಿರೋಧಿಸಲು ಧ್ವನಿವರ್ಧಕಗಳ ಮೂಲಕವೇ ಸುಪ್ರಭಾತ, ಹನುಮಾನ್‌ ಚಾಲೀಸಾ ಮೊಳಗಿಸುತ್ತಿರುವುದಾಗಿ ಸಂಘಟನೆಗಳು ಹೇಳಿಕೊಂಡಿವೆ.
ಸುಪ್ರೀಂ ಕೋರ್ಟ್ ಆದೇಶ ಎಲ್ಲಿಯವರೆಗೆ ಪಾಲನೆ ಮಾಡೊದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭಿಯಾನ ಇರುತ್ತದೆ. ಅವರಿಗೆ ಎರಡು ಕಾನೂನು ಇದೆ, ನಮ್ಮ ಕಾನೂನು ಪಾಲನೆ ಮಾಡುತ್ತಿಲ್ಲ. ಪ್ರತಿದಿನ ದೇವಾಲಯದಲ್ಲಿ ಮಂತ್ರಪಠಣೆ, ಪೂಜಾ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ ಗದಗದಲ್ಲಿ ಹೇಳಿಕೆ ನೀಡಿದ್ದಾರೆ.
ಅಜಾನ್ ಗೆ ಬಳಸೋ ಧ್ವನಿವರ್ಧಕ ಬಳಕೆ ನಿಲ್ಲಿಸೋವರೆಗೂ ನಮ್ಮ ಅಭಿಯಾನ ನಡೆಯುತ್ತದೆ ಎಂದು ವಿಜಯಪುರದಲ್ಲಿ ಸುಪ್ರಭಾತ ಅಭಿಯಾನ ಶುರು ಮಾಡಿರುವ ಹಿಂದೂ ಸಂಘಟನೆಯ ಭೀಮು ಮಾಶ್ಯಾಳ, ಶಶಿ ಗಂಗನಹಳ್ಳಿ, ಈರಪ್ಪ ಹತ್ತಿ ಮುಂತಾದವರು ಹೇಳಿದ್ದಾರೆ. ಕಾನೂನು ಎಲ್ಲರೂ ಪಾಲನೆ ಮಾಡಬೇಕು. ಇಂದಿನಿಂದ ಆರಂಭವಾದ ಸುಪ್ರಭಾತ ಎಲ್ಲ ದೇವಸ್ಥಾನಗಳಲ್ಲೂ ಮೊಳಗಲಿದೆ. ದಿನಕ್ಕೆ ಐದು ಬಾರಿ ನಾವೂ ಸಹ ಪ್ರಾರ್ಥನೆ ಗೀತೆ ಮೊಳಗಿಸಲಿದ್ದೇವೆ. ಸರ್ಕಾರ ನಮ್ಮನ್ನು ಜೈಲಿಗೆ ಹಾಕುತ್ತದಾ? ಹಾಕಲಿ, ನಾವು ಎಲ್ಲದಕ್ಕೂ ಸಿದ್ಧ ಎಂದಿದ್ದಾರೆ ಯುವಕರು.
ರಂಜಾನ್ ಸಮಯದಲ್ಲಿ ಆಂಜನೇಯ ದೇಗುಲದಲ್ಲಿ ಹನುಮಾನ್ ಚಾಲಿಸ ಪಠಣ ಮಾಡಿಸಲು ಬಿಡಲಿಲ್ಲ. ಯಾರು ಬೆದರಿಕೆ ಹಾಕಿದ್ದಾರೋ ಗೊತ್ತಿಲ್ಲಾ, ಅರ್ಚಕರು ಹೆದರಿದ್ದರು. ಇಂದಿನಿಂದ ಹನುಮಾನ್ ಚಾಲಿಸಾ ಪ್ರಾರಂಭ ಮಾಡಿದ್ದೇವೆ. ಬೆಳಗ್ಗೆ, ಸಂಜೆ ಎರಡೂ ಸಮಯದಲ್ಲಿ ಚಾಲಿಸ ಪಠಣೆಯಾಗುತ್ತದೆ ಎಂದು ವಿಜಯಪುರದಲ್ಲಿ ಹಿಂದೂ ಸಂಘಟನೆ ಹೇಳಿದೆ.
ಆದರೆ ದ.ಕ‌ ಜಿಲ್ಲೆಯಲ್ಲಿ ಶ್ರೀರಾಮಸೇನೆ ಅಭಿಯಾನಕ್ಕೆ ಬೆಂಬಲ ಸಿಗಲಿಲ್ಲ. ಅಜಾನ್ ಗೆ ವಿರುದ್ಧವಾಗಿ ಶ್ರೀರಾಮಸೇನೆಯ ಸುಪ್ರಭಾತ ಅಭಿಯಾನ ಆರಂಭಿಸಿತ್ತಾದರೂ ಜಿಲ್ಲೆಯಲ್ಲಿ ಶ್ರೀರಾಮಸೇನೆ ಪ್ರಬಲವಾಗಿರದ ಹಿನ್ನೆಲೆಯಲ್ಲಿ ಇದಕ್ಕೆ ಬೆಂಬಲ ಸಿಗಲಿಲ್ಲ.
ನಮಗೆಲ್ಲಾ ಸಾಯಲು ಅವಕಾಶ ಕೊಡಿ ಎಂದ ಮುಸ್ಲಿಮರು: ದಯಾಮರಣಕ್ಕೆ ಕೋರಿ ಹೈಕೋರ್ಟ್‌ಗೆ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seven =
Remember me
