ಚಾಮರಾಜನಗರ:ಶಿಕ್ಷಣಕೋಸ್ಕರ ಎರಡು ಚಾನೆಲ್​ಗಳು ಮೀಸಲಾಗಿದ್ದು, ಕೇಬಲ್​ ಆಪರೇಟರ್​ಗಳ ಜತೆ ಚರ್ಚೆ ಮಾಡಿ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಸೇತುಬಂಧ ಕಾರ್ಯಕ್ರಮ ನಡೆಯಲಿದೆ. 1ರಿಂದ 10 ನೇ ತರಗತಿಯವರಗಿನ ಮಕ್ಕಳಿಗೆ ಧ್ವನಿಮುದ್ರಿತ ಪಾಠ ಸಿದ್ಧವಿದ್ದು, ಶಿಕ್ಷಣ ಇಲಾಖೆಯ ಎರಡು ಚಾನೆಲ್​ಗಳ ಮೂಲಕ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಕೋವಿಡ್​ ಸಾವಿಗೆ ಕಡಿವಾಣ; ನಿಯಂತ್ರಣಕ್ಕೆ ಸಿಗುತ್ತಿಲ್ಲ ಹೊಸ ಪ್ರಕರಣ; ಲಕ್ಷದ ಸನಿಹ ಸೋಂಕಿತರ ಸಂಖ್ಯೆ
ರೆಗ್ಯುಲರ್ ಶಿಕ್ಷಣಕ್ಕೆ ಪೂರಕವಾಗಿ ಚಾನೆಲ್​ಗಳ ಮೂಲಕ ಪಾಠ ಮಾಡಲಾಗುವುದು. ಕೇಬಲ್ ಆಪರೇಟರ್​ಗಳೊಂದಿಗೆ ಮಾತುಕತೆ ನಡೆಸಿ ಈ ಚಾನೆಲ್​ಗಳ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಚಾನೆಲ್ ಪ್ರಸಾರ ಮಾಡುವ ಆಪರೇಟರ್​ಗಳಿಗೆ ಹಣ ಪಾವತಿಸಲಾಗುವುದು ಎಂದರು.
ಶಿಕ್ಷಣ ಇಲಾಖೆ ಕೊಟ್ಟಿರುವುದು ನನಗೆ ಸಮಾಧಾನ ತಂದಿದೆ. ಇಲಾಖೆಯ ಋಣ ತೀರಿಸುವ ಸಮಯ ಬಂದಿದೆ. ನನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರ ಕಡ್ಡಾಯ ವರ್ಗಾವಣೆ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಎಲ್ಲರ ಸಲಹೆ ಅಭಿಪ್ರಾಯಗಳನ್ನು ಪಡೆದು ಶಿಕ್ಷಣ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ತಂದಿದ್ದೇವೆ. ವಿಧಾನಸಭೆ ಮತ್ತು ಪರಿಷತ್​ನಲ್ಲಿ ಎಲ್ಲರು ಅನುಮೋದನೆ ಕೊಟ್ಟಿದ್ದಾರೆ. ಈಗಾಗಲೇ ನಿಯಮಗಳನ್ನ ಜಾರಿಗೆ ತಂದಿದ್ದೇವೆ. ಬಹಳ ವರ್ಷಗಳಿಂದ ಆಗಬೇಕಾದ ಕೆಲಸವನ್ನು ಮಾಡಿದ್ದೇನೆ. ಶಾಲೆಗಳಲ್ಲಿ ವಾಸ್ತವ್ಯ ಹೂಡಿ ಸಂವಾದ ಮಾಡುವ ಹೊಸ ಕಾರ್ಯಕ್ರಮ ಮಾಡಿದ್ದೇನೆ ಎಂದು ಚಾಮರಾಜನಗರದಲ್ಲಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಇದನ್ನೂ ಓದಿ:ವೃದ್ಧ ಬ್ರಾಹ್ಮಣರೊಬ್ಬರ ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕ!
ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ಲಾಕ್​ಡೌನ್​, ಎಲ್ಲೆಡೆ ಪೊಲೀಸ್​ ಕಣ್ಗಾವಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fifteen =
Remember me
