ಬೆಂಗಳೂರು:ಸುಳ್ಳು ಸುದ್ದಿಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬಸವನಗುಡಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರೊಬ್ಬರು ಸಿಕ್ಕಿದ್ದರು.‌ ಸಾಕಷ್ಟು ಒಳ್ಳೆಯ ಹೆಸರುಳ್ಳ ಹೋಟೆಲ್ ಅವರದು.‌ ಹೇಗಿದೆ ವ್ಯಾಪಾರ? ಎಂದು ಕೇಳಿದೆ. ಕಳೆದ ವಾರ ಚೆನ್ನಾಗಿತ್ತು. ಆದರೆ ಈ ವಾರ ಪೂರ್ತಿ ಡಲ್ ಎಂದರು. ಏಕೆ ಹೀಗೆ? ಎಂಬ ನನ್ನ ಪ್ರಶ್ನೆಗೆ ಅವರು ತಮ್ಮ ಮೊಬೈಲ್​ನಲ್ಲಿ ಒಂದು ವಾಟ್ಸಪ್ ಸಂದೇಶ ತೋರಿಸಿದರು.‌
ಇದನ್ನೂ ಓದಿ:ಉತ್ತರ ಕೊರಿಯಾ ಸರ್ವಾಧಿಕಾರಿ ಕೋಪಕ್ಕೆ ಕಾರಣವಾಯ್ತು ಪತ್ನಿಯ ಅಶ್ಲೀಲ ಚಿತ್ರಗಳು…!
ಅವರ‌ ಮತ್ತು ಆ ಭಾಗದ ಇತರೆ ಪ್ರಸಿದ್ಧ 2-3 ಹೋಟೆಲ್​ಗಳಲ್ಲಿ ಕರೊನಾ ಸೋಂಕು ತಗುಲಿದವರು ಇದ್ದಾರೆ ಹಾಗೂ ಬಂದು ಹೋಗಿದ್ದಾರೆ ಎಂಬುದು ಆ ವಾಟ್ಸಪ್ ಸಂದೇಶದ ತಿರುಳು.
ರಾಜಾಜಿನಗರದ ಪ್ರಸಿದ್ಧ ಬೇಕರಿ ಕುರಿತು ಇದೇ ರೀತಿಯ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪೋಲೀಸ್ ಕಂಪ್ಲೇಂಟ್ ದಾಖಲಿಸಿ, ಬೇಕರಿಯ ಮುಂದೆ ತಮ್ಮ ಬೇಕರಿಯ ಬಗ್ಗೆ ಹರಡುತ್ತಿರುವುದು ಸುಳ್ಳು ಸುದ್ದಿ ಎಂದು ತಿಳಿಸುವ ಬ್ಯಾನರ್ ಸಹ ಹಾಕಲಾಗಿದೆ.
ಈ ರೀತಿಯ ಶುದ್ಧ ಸುಳ್ಳು ಸುದ್ದಿ ಹರಡಿ ವಿಕೃತಾನಂದ ಅನುಭವಿಸುವವರಿಗೆ ಏನನ್ನಬೇಕು? “ಒಳ್ಳೆಯ ಹೆಸರು ಸಂಪಾದಿಸುವುದಕ್ಕೆ ಹತ್ತು ವರುಷ, ವಾಟ್ಸ್​ಆ್ಯಪ್​ಗೆ ಹತ್ತು ನಿಮಿಷ” ಎಂಬ ಹೊಸ ಗಾದೆ ಸೃಷ್ಟಿಸಬಹುದೇನೋ? ಎಂದು ಸುರೇಶ್​ ಕುಮಾರ್​ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಪತ್ನಿಯನ್ನು ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ ದುರುಳ ಪತಿ
2 ಸಾವಿರಕ್ಕೂ ಅಧಿಕ ಯೋಧರಿಗೆ ಕರೊನಾ ಸೋಂಕು- ಅನೇಕರು ಚೇತರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
