ಬೆಂಗಳೂರು:ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿದೆ. ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದೀಗ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಅವರ ಆಪ್ತ ಸಹಾಯಕರಾಗಿದ್ದ ಎಚ್​.ಜೆ. ರಮೇಶ್​ ಅವರನ್ನೂ ಕರೊನಾ ಬಲಿ ಪಡೆದಿದೆ.
ಈ ಕುರಿತು ಸುರೇಶ್​ ಕುಮಾರ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಕ್ಷೇತ್ರದ ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ ನನ್ನ ಆಪ್ತ ಸಹಾಯಕ ಎಚ್​ಜೆ ರಮೇಶ್​ ಇನ್ನಿಲ್ಲ. ರಮೇಶ್​ ಸುಮಾರು ಎಂಟು ವರ್ಷ ನನ್ನೊಂದಿಗೆ ನಗುನಗುತ್ತಾ ಸೇವೆ ಸಲ್ಲಿಸಿದ್ದರು, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸುರೇಶ್​ ಕುಮಾರ್​ ಬರೆದುಕೊಂಡಿದ್ದಾರೆ.

ಕರೊನಾದಿಂದ ರಮೇಶ್​ ಅವರು ಚೇತರಿಸಿಕೊಂಡಿದ್ದರು. ಆದರೆ ನಂತರ ಪುನಃ ಉಸಿರಾಟದ ಸಮಸ್ಯೆ ಉಂಟಾಗಿ ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಇದ್ದಕ್ಕಿದ್ದಂತೆ ಅವರ ಆಮ್ಲಜನಕದ ಮಟ್ಟವು ಕಡಿಮೆಯಾಯಿತು ಮತ್ತು ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಮೂಲಗಳು ಹೇಳಿವೆ.
ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!

ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?

ಸರ್ಪದೋಷ ಪರಿಹಾರಕ್ಕಾಗಿ ಹೆತ್ತ ಹಸುಗೂಸಿನ ಗಂಟಲು ಸೀಳಿದ ಮಹಿಳೆ ಸಂತೋಷದಿಂದ ಕುಣಿದಾಡಿದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
