ಬೆಂಗಳೂರು:ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳ ಮಕ್ಕಳಿಗೆ ವಿತರಿಸುವ ಸ್ವೆಟರ್​ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಹೊರಬಂದಿದ್ದು, ಇದೀಗ ಇದರ ಸುಳಿಯಲ್ಲಿ ಹಾಸ್ಯನಟ ಕೋಮಲ್​ ಸಿಲುಕಿದ್ದಾರೆ!
ಮಕ್ಕಳ ಹೆಸರಲ್ಲಿ ಪಾಲಿಕೆ ಅಧಿಕಾರಿಗಳು ಹಣ ಲೂಟಿ ಮಾಡಿರುವ ಆರೋಪವಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಕೋಮಲ್​ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಾಲಿಕೆ ಮಕ್ಕಳಿಗೆ ಸ್ವೆಟರ್​ ವಿತರಣೆ ಮಾಡಲು ಟೆಂಡರ್​ ಕರೆಯಲಾಗಿತ್ತು. ಆ ಟೆಂಡರ್​ ತೆಗೆದುಕೊಂಡಿರುವುದು ನಟ ಕೋಮಲ್​. ಆದರೆ ಮಕ್ಕಳಿಗೆ ಈ ಸ್ಟೆಟರ್ ಹಂಚಿಕೆಯಾಗಿಲ್ಲ. ಏಕೆಂದರೆ ಕಳೆದ ವರ್ಷ ಶಾಲಾ ಕಾಲೇಜುಗಳ ತರಗತಿಗಳು ನಡೆದಿಲ್ಲ. ಆದರೂ ಮಕ್ಕಳಿಗೆ ಸ್ಪೆಟರ್ ವಿತರಣೆ ಮಾಡಿದ್ದೇವೆ ಅಂತ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪವಿದೆ. ಪಾಲಿಕೆ ಅಧಿಕಾರಗಳ ಮೇಲೆ ಸಚಿವ ಆರ್ ಅಶೋಕ್, ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆಂಬ ಗಂಭೀರ ಆರೋಪವಿದೆ.
ಮಕ್ಕಳಿಗೆ ಸ್ಪೆಟರ್ ನೀಡಿದ್ದೇವೆ ಎಂದು ಒಂದು ಮುಕ್ಕಾಲು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಬಿಎಂಪಿ ಕಚೇರಿ ಮುಂಭಾಗ ಒಂದು ಸ್ಪೆಟರ್ 50 ಬೆಲೆ ನಿಗದಿ ಮಾಡಿ ಹರಾಜು ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಶುರುವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಕೋಮಲ್​, ನನಗೂ ಈ ಟೆಂಡರ್​ಗೂ ಯಾವುದೇ ಸಂಬಂಧ ಇಲ್ಲ, ನನ್ನ ವಿರುದ್ಧ ವೃಥಾ ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.
ಮಂಡ್ಯದ ನಟನ ಬಾಳಲ್ಲಿ ಪತ್ನಿಯೇ ವಿಲನ್!​  ಕಾಡಿಸಿ-ಪೀಡಿಸಿ ಮದ್ವೆಯಾದ ‘ಆದರ್ಶ ಪತ್ನಿ’ ಪರಾರಿ

ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣ ಭೇದಿಸಿದ ಪೊಲೀಸರು

ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 8 =
Remember me
