ಮಂಗಳೂರು:ತನ್ನ ಪ್ರೇಮಿಯ ಜತೆ ಮದುವೆಯಾಗುವ ಸಂತಸದಲ್ಲಿ ಮದುವೆ ಮಂಟಪದಲ್ಲಿ ಜಿಗಿದಾಡುತ್ತಿದ್ದ ವರ ಮಹಾಶಯನೊಬ್ಬ ಅದೇ ವಧುವಿನ ಜತೆ ಮದುವೆ ಮಂಟಪದಿಂದಲೇ ಪರಾರಿಯಾಗಿರುವ ಘಟನೆ ಮಂಗಳೂರಿನ ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪಡುಪಣಂಬೂರು ಬಳಿ ನಡೆದಿದೆ.
ತಾನೇ ಇಷ್ಟಪಟ್ಟ ಹುಡುಗಿಯ ಜತೆ ಮದುವೆಯಾಗುತ್ತಿರುವಾಗ, ಮದುವೆ ಮಂಟಪದಲ್ಲಿ ಏಕಾಏಕಿ ಆಕೆಯ ಜತೆ ಓಡಿಹೋಗಿದ್ದು ಏಕೆ ಎಂದು ಅಲ್ಲಿದ್ದವರಿಗೆಲ್ಲಾ ಅಚ್ಚರಿಯಾಗಿತ್ತು. ಅಸಲಿಗೆ ಆಗಿದ್ದೇನೆಂದರೆ ಈ ವರ ಮಹಾಶಯನ ಮೊದಲ ಪತ್ನಿ ಮದುವೆ ಮಂಟಪಕ್ಕೆ ದಿಢೀರ್‌ ಭೇಟಿ ಕೊಟ್ಟಿದ್ದಳು! ಮದುವೆಯಾಗಿ ಮಗುವನ್ನು ಹೊಂದಿದ್ದ ಈ ಪುಣ್ಯಾತ್ಮ ಮೊದಲ ಪತ್ನಿ ಇರುವಾಗಲೇ ಇನ್ನೊಬ್ಬಳ ಜತೆ ಮದುವೆಯಾಗಲು ಹೊರಟಿದ್ದ.
ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕನಾಗಿರುವ ತೀರ್ಥಹಳ್ಳಿ ಮೂಲದ 40 ವರ್ಷದ ವರ ಇಂಥದ್ದೊಂದು ಕಿತಾಪತಿ ಮಾಡಿದವ. ಸಸಿಹಿತ್ಲು ಮೂಲದ ಯುವತಿ ಜತೆ ಈತ ಪ್ರೀತಿಸುತ್ತಿದ್ದು, ಮದುವೆಗೆ ರೆಡಿಯಾಗಿದ್ದರು. ಇದೇ ಸಂದರ್ಭ ಸಭಾಂಗಣದ ಹೊರಭಾಗದಲ್ಲಿ ವರ ಹಾಗೂ ವಧುವಿನ ಫೋಟೋ ಶೂಟಿಂಗ್‌ ನಡೆಯುತ್ತಿತ್ತು.
ಇದೇ ಸಂದರ್ಭದಲ್ಲಿ ವರನ ಮೊದಲನೇ ಹೆಂಡತಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಬಂದು ಗಲಾಟೆ ಮಾಡಿದ್ದಾಳೆ. ತನಗೆ ಒಂದು ಗಂಡು ಮಗುವಿದ್ದು, ಪತಿ ಮಹಾಶಯ ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ ಎಂದು ಆಕೆ ಗಲಾಟೆ ಮಾಡಿದ್ದಾಳೆ.
ಫೋಟೋ ಶೂಟ್‌ನಲ್ಲಿದ್ದ ವರನಿಗೆ ಈ ವಿಷಯ ತಿಳಿಯುತ್ತಲೇ ವಧುವಿನ ಜತೆ ಎಸ್ಕೇಪ್‌ ಆಗಿದ್ದಾನೆ. ತನ್ನ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಮೂಲ್ಕಿ ಠಾಣೆಯಲ್ಲಿ ವಧುವಿನ ಪೋಷಕರು ನಡೆದ ಘಟನೆಯೊಂದಿಗೆ ದೂರು ಮಾತ್ರ ನೀಡಿದ್ದು ಅಧಿಕೃತವಾಗಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ನಿದ್ದೆಗೆಡಿಸಿದ ನಕಲಿ ಎಸಿಬಿ ಗ್ಯಾಂಗ್‌: ‘ಮರ್ಯಾದೆ’ ಉಳಿಸಿಕೊಳ್ಳಲು ಕೇಳಿದವರಿಗೆ ದುಡ್ಡು ಕೊಡ್ತಿರೋ ಅಧಿಕಾರಿಗಳು!

ಕೆಪಿಎಸ್‌ಸಿಯಿಂದ ಮತ್ತೊಂದು ಹಗರಣ? ಉತ್ತರ ಪತ್ರಿಕೆ ಕೊಡದೇ ನುಣುಚಿಕೊಳ್ಳೋ ಪ್ರಯತ್ನ- ಸಿಎಂಗೆ ದೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twelve =
Remember me
