ಬೆಂಗಳೂರು:ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2021ನಲ್ಲಿ ಇಂದು ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿ ಹಾರಾಟ ನಡೆಸಿದ್ದಾರೆ. ಎಲ್​ಸಿಎ ತೇಜಸ್ ಯುದ್ಧ ವಿಮಾನದಲ್ಲಿ ಅವರು ಹಾರಾಟ ಮಾಡಿದ್ದಾರೆ.
ಎಲ್​ಸಿಎ ತೇಜಸ್ ಲಘು ಯುದ್ಧ ವಿಮಾನದಲ್ಲಿ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದರು. ಕೇಂದ್ರ ಸರ್ಕಾರ ಹೆಚ್ಎಎಲ್​ನಿಂದ 48 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ತೇಜಸ್ ವಿಮಾನಗಳನ್ನು ಖರೀದಿಸಲು ನಿರ್ಧರಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ ತೇಜಸ್ವಿಯವರು, ಈ ಹಾರಾಟ ಅದ್ಭುತವಾದ ಅನುಭವ ನೀಡಿದೆ, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 15 ಸಾವಿರ ಎತ್ತರದಲ್ಲಿ ಒಂದು ಸಾವಿರ ಕಿಲೋ ಮೀಟರ್ ವೇಗದಲ್ಲಿ ಹಾರಾಟ ಮಾಡಿರುವುದು ತುಂಬಾ ಖುಷಿ ತಂದಿದೆ ಎಂದರು.

ಕೆಲವು ವರ್ಷಗಳ ಹಿಂದೆ ಏರೋ ಇಂಡಿಯಾ ಷೋ ನೋಡಲು ಪಾಸ್ ಸಿಗುತ್ತಿರಲಿಲ್ಲ. ಆದರೆ ಇಂದು ಖುದ್ದಾಗಿ ಏರೋ ಇಂಡಿಯಾ ಷೋನ ವಿಮಾನದಲ್ಲಿ ಸುಮಾರು 30 ನಿಮಿಷ ಹಾರಾಟ ಮಾಡಿದ್ದು ತುಂಬಾ ಸಂತಸ ತಂದಿದೆ ಎಂದು ಅನುಭವ ಹಂಚಿಕೊಂಡರು.
ದೇಶೀಯವಾಗಿ ತಯಾರಾಗಿರುವ ತೇಜಸ್ ವಿಮಾನವನ್ನು ಖರೀದಿಸುವ ಮೂಲಕ ಬೆಂಗಳೂರು ನಗರವನ್ನು ವಿಶ್ವಮಟ್ಟದ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದ ಅಗ್ರಗಣ್ಯ ನಗರವನ್ನಾಗಿ ಮಾರ್ಪಡಿಸಲು ಪಣತೊಟ್ಟಿರುವ ಸರ್ಕಾರದ ಕ್ರಮ ಸ್ವಾಗತಾರ್ಯ ಎಂದರು. ಎಲ್​ಸಿಎ ಏರ್​ಕ್ರಾಫ್ಟ್ ಭಾರತದವರೇ ನಿರ್ಮಾಣ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಈ ಏರ್ ಕ್ರಾಫ್ಟ್ ಉತ್ಪಾದನೆಗೆ ಮುಂದಾಗಿವೆ. ಭಾರತೀಯ ನಿರ್ಮಾಣದ ಏರ್ ಕ್ರಾಫ್ಟ್ ಅದ್ಭುತವಾಗಿದೆ. ಲಘು ಯುದ್ಧ ವಿಮಾನ ನಿರ್ಮಾಣ ಮಾಡಿದ ಇಂಜಿನಿಯರ್, ಸಿಬ್ಬಂದಿಗಳಿಗೆ ಗೌರವ ಸಲ್ಲಿಸಬೇಕಾಗುತ್ತದೆ. ತೇಜಸ್ ಯುದ್ಧವಿಮಾನವನ್ನು ಹೆಚ್ಚು ರಫ್ತು ಮಾಡುವ ಮೂಲಕ ವಿಶ್ವ ದರ್ಜೆಯ ಬ್ರಾಂಡ್ ನ್ನಾಗಿಸಬೇಕೆಂದು ತೇಜಸ್ವಿ ಸೂರ್ಯ ನುಡಿದರು.
ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!

ರೈಲಿಗೆ ತಲೆಬಾಗಿ ನಮಸ್ಕಾರ ಮಾಡಿದ ಯುವಕ- ಫೋಟೋ ಆಯ್ತು ವೈರಲ್​

ಹೆಂಡತಿಗೆ ಕಳ್ಳತನ ಮಾಡೋ ಚಟ- ಇದು ಮನೋರೋಗವೆ? ಪ್ಲೀಸ್​ ಪರಿಹಾರ ಹೇಳಿ..

ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 20 =
Remember me
