ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತೇಜಸ್ವಿ ಸೂರ್ಯ ಅಂತಹವರಲ್ಲ, ಶಾಸಕ ಸತೀಶ್ ರೆಡ್ಡಿ ವಿರುದ್ಧ ಬೆಡ್ ಬ್ಲಾಕಿಂಗ್ ಆರೋಪ ಹೊರಿಸುವುದು ಸರಿಯಲ್ಲವೆಂದು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಸಮಜಾಯಿಷಿ ನೀಡಿದರು.
ವಾಸ ವಿ‌ಕನ್ವೆನ್ಷನ್ ಸೆಂಟರ್ ನಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತೇಜಸ್ವಿ ಸೂರ್ಯ ಕರೆಯ ಮೇರೆಗೆ ನನ್ನ ಜತೆಗೆ ಇನ್ನಿಬ್ಬರು ಶಾಸಕರು ವಾರ್‌ರೂಮ್‌ಗೆ ಭೇಟಿ ಕೊಟ್ಟಿದ್ದು, ಹಾಸಿಗೆಗಳ ಹಂಚಿಕೆ ಕುರಿತು ಕಾವೇರಿದ ಚರ್ಚೆಯಾದದ್ದು ನಿಜ.
ವಾರ್‌ರೂಮ್‌ನಲ್ಲಿ ವಾಸ್ತವವಾಗಿ 200ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಆದರೆ, 17 ಮುಸ್ಲಿಂ ಸಿಬ್ಬಂದಿ ಹೆಸರುಗಳ ಪಟ್ಟಿ ಮಾತ್ರ ಯಾರು ಕೊಟ್ಟರೋ ತಿಳಿಯದು. ತಪ್ಪು ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಿದ್ದಾರೆ.
ತಪ್ಪು ವ್ಯಾಖ್ಯಾನದಿಂದ ಹಾಗೆ ಹೇಳಬೇಕಾಯಿತು ಎಂದು ನನ್ನ ಮುಂದೆ ಹೇಳಿದಾಗ ಈ ಕುರಿತು ಸ್ಪಷ್ಟೀಕರಣ ನೀಡಬೇಕೆಂಬ ಸಲಹೆ ಕೊಟ್ಟಿರುವೆ. ತೇಜಸ್ವಿ ಸೂರ್ಯ ಅವರಲ್ಲಿ ಮುಸ್ಲಿಂರ ಬಗ್ಗೆ ಬೇರೆ ಭಾವನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಮರು, ಹಿಂದುಗಳು ಯಾವುದೇ ಧರ್ಮ-ಪಂಥದವರಾಗಿರಲಿ, ಎಲ್ಲರೂ ಈ ದೇಶದ ಪ್ರಜೆಗಳು. ಸಂವಿಧಾನವೇ ಅಂತಿಮ. ಎಲ್ಲರೂ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಉದಯ್ ಗರುಡಾಚಾರ್ ಹೇಳಿದರು.
ಆರೋಪ ಸರಿಯಲ್ಲ:ಜನಪ್ರತಿನಿಧಿಗಳೆಂದ ಮೇಲೆ ನಿತ್ಯವೂ ನೂರಾರು ಕರೆ ಬರುತ್ತವೆ. ಬೆಡ್ ಸಮಸ್ಯೆ ಹೇಳಿಕೊಂಡಾಗ ವಾರ್ ರೂಮ್ ಗೆ ಕರೆ ಮಾಡಿ ಹೇಳಿದ್ದಿದೆ. ಹಾಗಂತ ನಾವೆಲ್ಲರೂ ಬೆಡ್ ಬ್ಲಾಕಿಂಗ್ ದಂಡೆಯಲ್ಲಿ ಭಾಗಿಯಾಗಿದ್ದೇವೆ ಎಂದರ್ಥವಲ್ಲ. ಶಾಸಕ ಸತೀಶ್ ರೆಡ್ಡಿ ವಿರುದ್ಧ ಆರೋಪ ಸರಿಯಲ್ಲವೆಂದು ಉದಯ್ ಗರುಡಾಚಾರ್ ತಳ್ಳಿಹಾಕಿದರು.
ನಾಲ್ಕೇ ದಿನದಲ್ಲಿ ಬದಲಾಯ್ತು ಜಿಲ್ಲಾ ಉಸ್ತುವಾರಿ ಸ್ಥಾನ: ಅವರ ಬದಲು ಇವರು… ಇವರ ಬದಲು ಅವರು…

ಯಾವನದ್ದೋ ಜತೆ ಹಾಸಿಗೆಯಲ್ಲಿ ಸಿಕ್ಕಿಬಿದ್ದ ಪತ್ನಿ ನನ್ನ ಮೇಲೆಯೇ ಕೇಸ್‌ ಹಾಕಿದ್ದಾಳೆ- ಏನು ಮಾಡಲಿ?

ಪತ್ನಿಯೊಂದಿಗೆ ಇರುವ ಮಗು ನೋಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಹೊರತಾಗಿ ಬೇರೆ ಉಪಾಯವಿದೆಯೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 7 =
Remember me
