ಮಂಗಳೂರು:ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನ ಕಂಡಿರುವ ಘಟನೆ ಕಳೆದ ತಿಂಗಳು ನಡೆದಿತ್ತು. ಮಂಗಳೂರು ಹೊರ ವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನ ಪತ್ತೆಯಾಗಿದೆ. ನವೀಕರಣದ ವೇಳೆ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ಮುಂಭಾಗವನ್ನು ಕೆಡವಲಾಗಿತ್ತು. ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದೆ. ದರ್ಗಾದಲ್ಲಿ ಜೈನ ಅಥವಾ ಹಿಂದೂ ದೇವಸ್ಥಾನ ಇರುವ ಸಾಧ್ಯತೆ ಗೋಚರ ಆಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತಾಂಬೂಲ ಪಶ್ನೆ ಇಡಲು ತೀರ್ಮಾನಿಸಿದೆ. ಜಾಗದಲ್ಲಿ ದೈವಿಕ ಶಕ್ತಿ ಇದೆಯೊ ಇಲ್ಲವೂ ಎಂದು ತಿಳಿಯಲು ತಾಂಬೂಲ ಪ್ರಶ್ನೆ ಇಡಲಾಗುವುದು ಎಂದಿರುವ ಮುಖಂಡರು ಇದಕ್ಕಾಗಿ ಮೇ.25ರಂದು ದಿನಾಂಕ ನಿಗದಿ ಮಾಡಿದ್ದಾರೆ.
ತಾಂಬೂಲ ಪ್ರಶ್ನೆ ಇಡಲು ಕೇರಳದ ಪೊದುವಾಳ್‌ ಅವರನ್ನು ಕರೆಸಲಾಗುತ್ತಿದೆ. ಇದೇ ಸಮಯದಲ್ಲಿ ಮುಂದಿನ ಹೋರಾಟದ ಬಗ್ಗೆ ಪೂರ್ವಸಿದ್ದತೆ ಸಭೆ ನಡೆದಿದ್ದು, ಸ್ಥಳೀಯ ಶಾಸಕ ಭರತ್ ಶೆಟ್ಟಿ, ವಿ.ಎಚ್.ಪಿ ಮುಖಂಡರ ನೇತೃತ್ವ ವಹಿಸಿದ್ದರು. ಹಿಂದೂ ಸಂಘಟನೆ ಪ್ರಮುಖರು, ಸ್ಥಳೀಯ ಜನ ಪ್ರತಿನಿಧಿಗಳು, ಊರಿನ ಹಿರಿಯರ ಜೊತೆ ಸಭೆ ನಡೆದಿದೆ.
ತಾಳಿ ಕಟ್ಟಿಸಿಕೊಳ್ಳದೇ ವಧುವಿನ ಹೈಡ್ರಾಮಾ: ಇವ್ನು ಬೇಡ, ಅವ್ನೇ ಬೇಕು ಎಂದು ಕುಸಿದುಬಿದ್ದ ಮೈಸೂರಿನ ವಧು

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಇನ್ನಿಲ್ಲ: ಇವರ ಹಾಡಿಗೆ ಮನಸೋತು ಚಿನ್ನದ ಸರವನ್ನೇ ಕೊಟ್ಟಿದ್ದ ಜಯಲಲಿತಾ

Sign in to your account
Please enter an answer in digits:14 − 7 =
Remember me
