ಚಿಕ್ಕಬಳ್ಳಾಪುರ:ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೋ ಒಂದು ಪಲ್ಟಿ ಹೊಡೆದ ಪರಿಣಾಮ ರಸ್ತೆಯ ಮಧ್ಯದಲ್ಲಿಯೇ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಮದ್ಯದ ಹೊಳೆಯೇ ಹರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಕಣಿವೆಯ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ಕಣಿವೆಯ ಇಳಿಜಾರಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಉರುಳಿ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.
ಮದ್ಯ ಸಂಗ್ರಹಣಾ ಗೋದಾಮಿನಿಂದ ಗೌರಿಬಿದನೂರಿನ ಕೆಲವು ಅಂಗಡಿಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ ಮದ್ಯ ಸರಬರಾಜು ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಇದರಿಂದ ಬಾಟಲಿಗಳೆಲ್ಲಾ ಚೂರು ಚೂರಾಗಿ ರಸ್ತೆಯ ಮೇಲೆ ಬಿದ್ದಿವೆ.
ಟೆಂಪೋದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಪಾಕೆಟ್, ಬಿಯರ್ ಬಾಟಲಿಗಳು ಇದ್ದವು. ಇವೆಲ್ಲಾ ಒಡೆದು ಹೋಗಿವೆ ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ಟೆಂಪೋ ಉರುಳಿಬಿದ್ದ ಪರಿಣಾಮ, ಬಾಟಲಿಗಳ ನಡುವೆ ಟೆಂಪೋದಲ್ಲಿ ಚಾಲಕ ಸಿಕ್ಕಿಬಿದ್ದ ಪರಿಣಾಮ ಅವರನ್ನು ಹೊರಕೆಕ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅವರನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಇದೇ ಜಾಗದಲ್ಲಿ ಕಳೆದ ಒಂದು ವಾರದ ಹಿಂದೆ ಅಡುಗೆ ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಅಡುಗೆ ಎಣ್ಣೆ ರಸ್ತೆ ನಡುವೆ ಚೆಲ್ಲಿರುವುದಾಗಿ ಸ್ಥಳೀಯರು ಹೇಳಿದ್ದು, ಇದು ತುಂಬಾ ಅಪಾಯಕಾರಿ ಜಾಗ ಎಂದಿದ್ದಾರೆ.
ದೇವಾಲಯದ ಆವರಣ ಶುಚಿಗೊಳಿಸಲು ಹೋಗಿ ಎಡವಟ್ಟು: ಹಳೆಬೀಡಿನ ಐತಿಹಾಸಿಕ ವಿಗ್ರಹಗಳಿಗೆ ಹಾನಿ

ಶಾಕಿಂಗ್‌! ಚಾವಣಿ ತೆಗೆದು ಒಳನುಗ್ಗಿ ಹಸುಗೂಸನ್ನು ಎಳೆದೊಯ್ದ ಮಂಗ- ಅಸುನೀಗಿದ ಕಂದಮ್ಮ

ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
