ಬೆಂಗಳೂರು:ಕರ್ನಾಟಕ ಉಗ್ರರ ಸ್ಲೀಪರ್​ ಸೆಲ್​ ಆಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎರಡು ವರ್ಷಗಳಿಂದ ಬೆಂಗಳೂರಲ್ಲಿ ಆಶ್ರಯ ಪಡೆದಿದ್ದ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಭಯೋತ್ಪಾದಕನನ್ನು ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಜಮ್ಮು-ಕಾಶ್ಮೀರದ ರಾಷ್ಟ್ರೀಯ ರೈಲ್ಸ್​ ಮತ್ತು ಸಿಆರ್​ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಜೂ.3ರಂದು ಬಂಧಿಸಿ, ಕರೆದೊಯ್ದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಹಿಜ್ಬುಲ್​ ಮುಜಾಹಿದ್ದೀನ್​ನ ಮಾಸ್ಟರ್​ಮೈಂಡ್​ ತಾಲಿಬ್​ ಹುಸೇನ್​ ಬಂಧಿತ ಉಗ್ರ. ಉಗ್ರನ ಬಂಧನ ವಿಚಾರವನ್ನು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್​ ಸಿಂಗ್​ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಜಮ್ಮುವಿನ ಕಿಸ್ತ್ವಾರ್​ ಜಿಲ್ಲೆ ನಾಗಸೇನಿ ತಹಸಿಲ್​ ಮೂಲದ ತಾಲಿಬ್​ ಹುಸೇನ್​, 2016ರಲ್ಲಿ ಹಿಜ್ಬುಲ್​ ಮುಜಾಹಿದ್ದೀನ್​ ಸೇರಿದ್ದ. ಬುಡಕಟ್ಟು ಜನಾಂಗದ ತಾಲಿಬ್​ಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ.
ಮೊದಲಿಗೆ ಯುವಕರನ್ನು ಟಾರ್ಗೆಟ್​ ಮಾಡಿ, ಅವರ ಮನಪರಿವರ್ತಿಸಿ ಉಗ್ರ ಸಂಘಟನೆಗೆ ಸೇರ್ಪಡೆ ಮಾಡುತ್ತಿದ್ದ. ನಂತರ ಇವರನ್ನೇ ಬಳಸಿಕೊಂಡು ಹಿಂದುಗಳ ಹತ್ಯೆಗೆ ಸ್ಕೆಚ್​ ರೂಪಿಸುತ್ತಿದ್ದ. ಬಾಂಬ್​ ಸ್ಫೋಟ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ. ಕೇಂದ್ರ ಪಡೆಗಳ ಹಿಟ್​ಲೀಸ್ಟ್​ ಸೇರುತ್ತಿದ್ದಂತೆ ತಾಲಿಬ್​ ಹುಸೇನ್​ ಪರಾರಿಯಾಗಿದ್ದ. 2 ವರ್ಷಗಳ ಹಿಂದೆ ಓರ್ವ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದು ಶ್ರೀರಾಂಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಉಗ್ರನ ಬಂಧನಕ್ಕಾಗಿ ಕೇಂದ್ರೀಯ ಪಡೆಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರೂ ಸುಳಿವು ಮಾತ್ರ ಲಭ್ಯವಾಗಿರಲಿಲ್ಲ.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ತಾಲಿಬ್​ ಹುಸೇನ್​ ಬೆಂಗಳೂರಿನಲ್ಲಿ ಅಡಗಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಒಂದು ವಾರದ ಹಿಂದೆ ಬೆಂಗಳೂರಿಗೆ ಬಂದ ರಾಷ್ಟ್ರೀಯ ರೈಲ್ಸ್​ ಪಡೆ ಮತ್ತು ಸಿಆರ್​ಪಿಎ್​ ವಿಶೇಷ ತಂಡ ನಗರ ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ವಿನಿಮಯ ಮಾಡಿಕೊಂಡಿತ್ತು. ಉಗ್ರನ ಮನೆ ಪತ್ತೆ ಹಾಗೂ ಬಂಧನ ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಸ್ಥಳಿಯ ಪೊಲೀಸರು ಉಗ್ರನ ಮನೆಯನ್ನು ಪತ್ತೆಹಚ್ಚಿ ಮಾಹಿತಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ಜಮ್ಮು-ಕಾಶ್ಮೀರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಬದುಕುಳಿದ ಏಕೈಕ ಉಗ್ರಕೇಂದ್ರ ಭದ್ರತಾ ಪಡೆಗಳ ಹಿಟ್​ಲಿಸ್ಟ್​ನಲ್ಲಿದ್ದವರ ಪೈಕಿ ಅತಿ ಹೆಚ್ಚು ಕಾಲ ಬದುಕುಳಿದ ಉಗ್ರ ತಾಲಿಬ್​ ಹುಸೇನ್​ ಎನ್ನಲಾಗಿದೆ. ಪರ್ವತಗಳನ್ನು ಚೆನ್ನಾಗಿ ತಿಳಿದಿದ್ದ ಈತ ಶಸ್ತ್ರಾಸ್ತ್ರಗಳೊಂದಿಗೆ ತಿರುಗಾಡುತ್ತಿರುವುದನ್ನು ಹಲವಾರು ಬಾರಿ ಸ್ಥಳಿಯರು ನೋಡಿದ್ದಾರೆ. ಉಗ್ರ ಸಂಟನೆಗೆ ಯುವಕರ ಸೇರ್ಪಡೆ ಮತ್ತು ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಸಕ್ರಿಯನಾಗಿದ್ದ ಎಂದು ಜಮ್ಮು&ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಅನುಮಾನ ಬಂದಿರಲಿಲ್ಲಶ್ರೀರಾಂಪುರದ ಬಾಡಿಗೆ ಮನೆಯಲ್ಲಿ ತಾಲೀಬ್​ ಹಾಗೂ ಆತನ ಪತ್ನಿ ವಾಸವಿದ್ದರೂ ಅಕ್ಕಪಕ್ಕದ ಮನೆಯವರಿಗಾಗಲಿ ಅಥವಾ ಮನೆ ಮಾಲೀಕರಿಗಾಗಲಿ ಅನುಮಾನ ಬಂದಿರಲಿಲ್ಲ. ಆಟೋ ಓಡಿಸಿಕೊಂಡು, ಮಾಮೂಲಿಯಾಗಿ ದಂಪತಿ ವಾಸವಿದ್ದರು. ಪೊಲೀಸರು ಬಂಧಿಸಿದಾಗಲೇ ಆತ ಉಗ್ರ ಎಂಬ ವಿಚಾರ ಗೊತ್ತಾಗಿದೆ.
ಸಿಎಂ ಬೊಮ್ಮಾಯಿ ಹೇಳಿಕೆ:ಉಗ್ರನ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ನೆಲೆಯೂರಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿರುವುದು ನಿಜ. ಮುಂದಿನ ಹಂತದ ತನಿಖೆಗೆ ಬೇಕಾದ ಎಲ್ಲ ಸಹಕಾರವನ್ನು ಜಮ್ಮು-ಕಾಶ್ಮೀರ ಪೊಲೀಸರಿಗೆ ನಮ್ಮ ಪೊಲೀಸರು ನೀಡುವರು ಎಂದು ಹೇಳಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾವಹಿಸುವುದು ಸಹಜ. ಈ ಹಿಂದೆ ಭಟ್ಕಳ, ಶಿರಸಿಯಲ್ಲಿ ಇಂತಹವರನ್ನು ಬಂಧಿಸಿ ಕರೆದೊಯ್ದ ನಿದರ್ಶನಗಳಿವೆ ಎಂದರು.
ಅಮ್ಮಾ.. ಹಠ ಮಾಡಿ ಮದ್ವೆಯಾದೆ, ಅದೇ ಹಠದಲ್ಲೇ ಸಾಯ್ತಿದ್ದೇನೆ: ನಿಗೂಢವಾಗಿದೆ ಬೆಂಗಳೂರಿನ ಇಂಜಿನಿಯರ್ ಡೆತ್‌ನೋಟ್‌!

ದೇವೇಗೌಡರು ಬಿತ್ತನೆ ಕಾಳು… ಮೋದಿಯವರು ಮಕ್ಕಳು ಮಾಡದಿದ್ರೆ ಅದು ನಮ್‌ ತಪ್ಪಾ ಎಂದ ಇಬ್ರಾಹಿಂ!

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಅಭಿಮಾನಿಗಳಿಂದ ಇದೇಕೆ ಅತಿರೇಕ? ಅಪ್ಪು ಪುತ್ಥಳಿ ಅನಾವರಣದಂದು ಕುರ್ಚಿಗಳು ಪೀಸ್‌ ಪೀಸ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − twelve =
Remember me
