ಬೆಂಗಳೂರು:ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ವಿರುದ್ಧ ಒಂದು ವರ್ಗದಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಚಿವ ಆರ್​.ಅಶೋಕ್​ ಪತ್ರಿಕಾಗೋಷ್ಠಿ ನಡೆಸಿ ನಿಜಕ್ಕೂ ನಡೆದಿರುವುದು ಏನು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪನವರು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಪಠ್ಯದಲ್ಲಿ ಆಗಿದ್ದ ತಿದ್ದುಪಡಿಗಳೇನು? ಈಗ ರೋಹಿತ್​ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಆಗಿರುವ ಪರಿಷ್ಕರಣೆ ಏನು ಎಂಬ ಬಗ್ಗೆ ಮಾರ್ಮಿಕವಾಗಿ ಈ ರೀತಿ ವಿವರಣೆ ನೀಡಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಚರ್ಚೆಯಾಗಿ ವಾದ-ಪ್ರತಿವಾದವಾಗಿರುವ ಮೊದಲ ಪಠ್ಯಪುಸ್ತಕವಿದು. ಈ ಹಿಂದೆ ಅವರಿಗೆ ಬೇಕಾದ ಅಜೆಂಡಾ ತುರುಕಿ ಹಾಗೇ ಬರುತ್ತಿತ್ತು. ಮೊದಲ ಬಾರಿಗೆ ಚರ್ಚೆ ವಿಷಯವಾಗಿ ಹೊರಹೊಮ್ಮಿರುವುದು ಭಾರಿ ಒಳ್ಳೆಯದು ಎಂದು ಅಶೋಕ್​ ಹೇಳಿದರು.
ಹಿಂದಿನ ಸಮಿತಿಯವರಿಗೆ ರಾಮ, ಕೃಷ್ಞ, ರಜಪೂತ, ಶಿವಾಜಿ ಇವೆಲ್ಲವೂ ಇಷ್ಟವಾಗದ ಪದಗಳಾದವು. ಅದನ್ನು ತೆಗೆಯುವ ಪ್ರಯತ್ನಕ್ಕೆ ಸಮಿತಿ ಮುಂದಾಗಿತ್ತು. ನಿರಂತರವಾಗಿ ಅಲ್ಪ ಸಂಖ್ಯಾತರ ಓಲೈಕೆಮಾಡುವುದು ಅವರ ಉದ್ದೇಶವಾಗಿತ್ತು ಎಂದು ವಾಗ್ದಾಳಿ ಮಾಡಿದರು.
ಕಾಗೇರಿಯವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಕುವೆಂಪು ರಚಿಸಿದ ಪದ್ಯ, ಗದ್ಯ ಎಂಟು ಅಧ್ಯಾಯಗಳು ಇತ್ತು. ಈಗ ಕುವೆಂಪು ಅವರ ಬಗ್ಗೆ ಬಹಳ ದೊಡ್ಡದಾಗಿ ಮಾತನಾಡುತ್ತಿದ್ದಾರೆ ಸಿದ್ದರಾಮಯ್ಯನವರು. ಆದರೆ ಅಸಲಿಗೆ ಅವರ ಅವಧಿಯಲ್ಲಿ ‌ ಕುವೆಂಪು ಅವರ ಅನಲೆಯನ್ನು ತೆಗೆದು ಹಾಕಿದರು. ಎಂಟು ಇದ್ದ ಗದ್ಯ ಏಳು ಮಾಡಿದ್ದು ಯಾರು ಎಂದು ಪ್ರಶ್ನಿಸಿದರು. ಕುವೆಂಪು ಅವರಿಗೆ ಈ ಸರ್ಕಾರ ತಾರತಮ್ಯ ಮಾಡಿದೆ ಎಂದು ದಿನವೂ ಕಮೆಂಟ್ ಮಾಡುತ್ತಿದ್ದೀರಲ್ಲ, ಎಂಟು ಇದ್ದ ಗದ್ಯ ಏಳು ಮಾಡಿದವರು ನೀವೇ ಅಲ್ಲವೆ? ಅವರ ಬದಲು ಪರಮ ಪ್ರೀತಿಯ, ಈಗಿನ ಪಠ್ಯಪುಸ್ತಕದ ವಿರುದ್ಧ ಪ್ರತಿಭಟಿಸುತ್ತಿರುವ ಹಂಸಲೇಖ ಪದ್ಯ ಸೇರಿಸಿದವರಾರು ಎಂದು ಸಚಿವ ಅಶೋಕ್​ ಪ್ರಶ್ನಿಸಿದ್ದಾರೆ.
ಯೋಗ, ಸಂಸ್ಕೃತಿ ಬಗ್ಗೆ ಇದ್ದ ಭಾರತೀಯ ಪರಂಪರೆ ಕುರಿತ ಪಠ್ಯವನ್ನು ಸಿದ್ದರಾಮಯ್ಯ ಸರ್ಕಾರ ಕೈ ಬಿಟ್ಟಿತು. ಏಕೆಂದರೆ ಅದು ಅವರಿಗೆ ಬೇಡವಾಗಿತ್ತು. ದೆಹಲಿ ಸುಲ್ತಾನರ ಪಾಠದಲ್ಲಿ ಈ ಮೊದಲು ಇದ್ದದ್ದು ಅವರು ಧ್ವಂಸ ಮಾಡಿದ್ದರು ಎಂದು. ಅದನ್ನು ತೆಗೆದು ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಸೇರಿಸಿದರು. ಇದರ ಅರ್ಥ ಸಿದ್ದರಾಮಯ್ಯನವರಿಗೆ  ವಿಧ್ವಂಸಕ ಕೃತ್ಯಗಳೆಲ್ಲಾ ಒಳ್ಳೆದಾಗಿ ಕಾಣಿಸುತ್ತಿದೆ ಎಂದಾಯಿತು.
ಪೃಥ್ವಿರಾಜ್ ಚೌಹಾಣ್ ಪಠ್ಯದಲ್ಲಿ ನಮ್ಮ ರಾಜರ ಔದಾರ್ಯ ನಮ್ಮ ಮಕ್ಕಳಿಗೆ ತಿಳಿಯಬಾರದು ಎಂಬಂತೆ ಸಿದ್ದರಾಮಯ್ಯ ಅವಧಿಯಲ್ಲಿ ಪರಿಷ್ಕರಿಸಲಾಗಿದೆ. ನಾಲ್ಕನೇ ತರಗತಿ ಪಠ್ಯದಲ್ಲಿ ವಾಕ್ಯ ತಪ್ಪಾಗಿದೆ ಎಂದು ಟೀಕೆ ಬಂದಿತು. ಸಂಬಂಧಿಸಿದ ಪಠ್ಯವು ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಾಗೇ ಇತ್ತಲ್ಲ, ಆಗ ದನಿ ಎತ್ತದ ಸಾಹಿತಿಗಳು ಈಗ ದನಿ ಎತ್ತುತ್ತಿರುವುದು ಯಾಕೆ ಎಂದು ಕೇಳಿದರು.
ಬೆಂಗಳೂರು ವಿಭಾಗ ಪರಿಚಯ ವಿಚಾರದಲ್ಲಿ ಆರನೇ ತರಗತಿ ಪಠ್ಯದಲ್ಲಿ ಕೆಂಪೇಗೌಡರ ಬಗ್ಗೆ ಮಾಹಿತಿ ಇರಲಿಲ್ಲ‌. ನಮ್ಮ ಸರ್ಕಾರ ಸೇರಿಸಿದೆ. ಅದು ತಪ್ಪಾ? ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಗೀತೆ ಕಿತ್ತು ಹಾಕಿದರು. ಕಾಂಗ್ರೆಸ್‌ನವರ ನಾಡಿನ ಬಗ್ಗೆ ಪ್ರೀತಿ ಎಷ್ಟೆಂದು ಗೊತ್ತಾಗುತ್ತದೆ ಎಂದರು.
ನಮ್ಮ ಸಿದ್ದರಾಮಯ್ಯನಿಗೆ ಟಿಪ್ಪು ಅಂದರೆ ಮೈಮೇಲೆ ಬರುತ್ತದೆ. ಮೈಸೂರು ಒಡೆಯರ್ ಅವರ ಕಡಗಣನೆ ಮಾಡಿದ್ದಾರೆ. ರಾಜವಂಶಕ್ಕೆ ಅವಮರ್ಯಾದೆ ಮಾಡಿದ್ದಾರೆ. ಟಿಪ್ಪು ಬಗ್ಗೆ ಒಂದು ಪುಟ ಬರೆಯಬಹುದು, ಮತಾಂತರ ಮಾಡಿದರು, ಹಿಂದುಗಳ‌ ಮೇಲೆ ದೌರ್ಜನ್ಯ ಮಾಡಿದರು, ಕನ್ನಡದ ಮೇಲೆ ಅಭಿಮಾನವೇ ಇರಲಿಲ್ಲ‌. ಇಷ್ಟು ಸಾಕು. ಅದನ್ನು ಬಿಟ್ಟು ಟಿಪ್ಪುವನ್ನು ಹೊಗಳಿ ಆರು ಪುಟವಿದೆ. ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠವನ್ನು ಪರಿಷ್ಕರಿಸಿ ವಿಜಯನಗರ ಅರಸು ಮನೆತನಗಳು ಎಂದು ತಿದ್ದಿದ್ದಾರೆ. ಗಾಂಧಿಯವರು ಕೋಲ್ಕತ್ತಾದಲ್ಲಿ ಗೀತೆ ಪಠಿಸುತ್ತಾ ಉಪವಾಸಕೈಗೊಂಡರು ಎಂದಿದ್ದ ಸಾಲಿನಲ್ಲಿ ಗೀತೆ ಪದ ಕೈಬಿಟ್ಟರು. ವೀರ ಶಿವಾಜಿ ಕಡೆಗಣಿಸಲಾಯಿತು. ರಜಪೂತರ ಪಾಠವನ್ನೂ ಕೈಬಿಟ್ಟರು ಎಂದು ಅಶೋಕ್​ ಹೇಳಿದರು.

ಡಿಕೆಶಿವಕುಮಾರ್​ ಪಠ್ಯ ಪುಸ್ತಕ ಹರಿದರಲ್ಲ, ಅದರಲ್ಲಿ ಕೆಂಪೇಗೌಡರ ಪಾಠವಿತ್ತು‌, ಎಷ್ಟು ಸರಿ ಎಂದು ಪ್ರಶ್ನಿಸುತ್ತೇನೆ. ಅಂಬೇಡ್ಕರ್, ವಿವೇಕಾನಂದರ ಪಾಠ ಕೈ ಬಿಡಲಾಗಿತ್ತು. ನಾವು ಸೇರ್ಪಡೆ ಮಾಡಿದ್ದೇವೆ. ಪೆರಿಯಾರ್, ಭಗತ್ ಸಿಂಗ್, ಪೆರಿಯಾರ್ ಪಾಠ ಬಿಟ್ಟಿಲ್ಲ. ಆದರೂ ಅಪಪ್ರಚಾರ ಮಾಡಿದರು. ಟಿಪ್ಪು, ತುಘಲಕ್, ಮೊಘಲ್ ವಿಚಾರ ಪುಟಗಟ್ಟಲೆ ಬರೆದು ಭಾರತೀಯ ರಾಜರ ಸಾಹಸ, ಶೌರ್ಯ ಮಕ್ಕಳಿಗೆ ಪರಿಚಯಿಸಿರಲಿಲ್ಲ. ಸಿಂಧೂ ಸಂಸ್ಕೃತಿ ಪಾಠ ತೆಗೆದು ನೆಹರೂ ಪತ್ರಗಳು ಪಾಠ ಸೇರಿಸಿದ್ದರು. ನಾವು ಸಿಂಧೂ ಸರಸ್ವತಿ ನಾಗರೀಕತೆ ಪಠ್ಯ ಸೇರಿಸಿದ್ದೇವೆ.
ಸಾಹಿತಿ ಎಸ್.ಎಲ್ ಭೈರಪ್ಪ ಬರೆದ ಯಾವುದೇ ಬರಹ ಪಠ್ಯದಲ್ಲಿ ಇರಲಿಲ್ಲ. ಈಗ ಸೇರಿಸಲಾಗಿದೆ. ಸನಾತನ ಧರ್ಮದ ಬಗ್ಗೆ ಮಾಹಿತಿ ಇರಲಿಲ್ಲ, ಈಗ ಸೇರಿಸಲಾಗಿದೆ. ಕ್ರೈಸ್ತ, ಇಸ್ಲಾಂ ಎಂಬ ಅಧ್ಯಾಯವನ್ನು ಪಾಶ್ಚಾತ್ಯ ರಿಲೀಜಿಯನ್ ಎಂದು ಬದಲಾಯಿಸಿ, ಯಹೂದಿ, ಪಾರ್ಸಿ ಧರ್ಮಗಳ ವಿಷಯ ಸೇರಿಸಲಾಗಿದೆ. ಬಸವಣ್ಣನವರ ಕುರಿತಂತೆ ಸರ್ವಸಮ್ಮತವಾದ ಮಾಹಿತಿ ನೀಡಿದಲ್ಲಿ ಪಠ್ಯದಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು.
ಬಸವಣ್ಣನ ಪಠ್ಯದ ವಿಚಾರದಲ್ಲಿ ಮುಕ್ತ ಮನಸ್ಸಿನಿಂದಿದ್ದೇವೆ. ಸಾಣೇಹಳ್ಳಿ ಶ್ರೀಗಳ ಪತ್ರವನ್ನು ಪರಿಗಣಿಸಲಾಗುತ್ತದೆ. ಬರಗೂರು ಪಠ್ಯವೇ ಬೇಕೆಂದರೆ ಕೆಂಪೇಗೌಡರ ಪಠ್ಯ ಇಲ್ಲವಾಗುತ್ತದೆ, ಕುವೆಂಪು ಪಠ್ಯ ಕಡಿಮೆಯಾಗುತ್ತದೆ. ನಾವು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಪರಿಷ್ಕೃತ ಪಠ್ಯದಲ್ಲಿ ಏಳರಿಂದ ಎಂಟು ತಪ್ಪುಗಳಾಗಿವೆ. ಅವುಗಳನ್ನು ಸರಿಪಡಿಸಿಕೊಡಲಾಗುತ್ತಿದೆ. ಅಂಬೇಡ್ಕರ್, ಸಿದ್ದಗಂಗಾ ಮಠ, ಕುವೆಂಪು ವಿಚಾರದ ಅಂಶವನ್ನು ಹೊಸದಾಗಿ ಸೇರಿಸಲಾಗುತ್ತಿದೆ.
ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವಾಗ ಆ ಪಂಥ ಈ ಪಂಥ ಎಂದಿಲ್ಲ. ಮುಖ್ಯಮಂತ್ರಿಗಳು ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಒಳ್ಳೆಯದು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶೋಕ್​ ಹೇಳಿದರು.
ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥರನ್ನು ಕೈಬಿಟ್ಟ ಸರ್ಕಾರ

10ನೇ ತರಗತಿ ಪಠ್ಯದಿಂದ ಭಗತ್​ ಸಿಂಗ್​ ಪಾಠ ಕೈಬಿಟ್ಟಿದ್ದು ನಿಜನಾ? ಸರ್ಕಾರ ಕೊಟ್ಟಿದೆ ಈ ಸ್ಪಷ್ಟನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
