ಮಂಡ್ಯ: ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಅಚ್ಚರಿ ಮೂಡಿಸಿದ ಘಟನೆ ಮಂಡ್ಯ ನಡೆದಿದೆ.
ಮಂಡ್ಯ ನಗರದ ಗಾಂಧಿನಗರ ಬಿಸಿಲು ಮಾರಮ್ಮ ದೇವಾಲಯದಲ್ಲಿ ಭಕ್ತರು ಮಾರಮ್ಮನ ಉತ್ಸವ ಆಚರಣೆ ಮಾಡುತ್ತಿದ್ದರು. ಆ ವೇಳೆ ರತ್ನಮ್ಮ ಎಂಬುವವರು ಹುಂಜ ಒಂದನ್ನ ಬಲಿ‌ ಕೊಟ್ಟು ದೇವರಿಗೆ ಹರಕೆ ತೀರಿಸಲು ಬಂದಿದ್ದರು.
ಈ ವೇಳೆ ಭಕ್ತೆ ಕೈಯಿಂದ ಹಾರಿದ ಕೋಳಿ ದೇವಸ್ಥಾನದ ಎದುರಿಗೆ ಇರುವ ಮರದ ಮೇಲೆ ಹತ್ತಿ ಭಕ್ತರ ಕೈಗೆ ಸಿಗದೆ ಕುಳಿತಿದೆ. ಭಕ್ತರೆಲ್ಲರು ಕೋಳಿ ಹಿಡಿಯಲು ಪ್ರಯತ್ನಿಸಿದ್ರು ರಂಬೆ ರೆಂಬೆಗೆ ಜಾಗ ಬದಲಾಯಿಸಿ ಅಡ್ಡಾಡುತ್ತಿದ್ದ ಕೋಳಿ ಇಳಿಸಲು ಹರಸಾಹಸವನ್ನೆ ಪಡಬೇಕಾಯಿತು.
ಸತತ ಮೂರು ಗಂಟೆ ಕೆಳಗೆ ಇಳಿಯಲೆ ಇಲ್ಲ. ಒಂದು ಕಡೇ ಹಬ್ಬದಲ್ಲಿ ನೆರೆದಿದ್ದ ಭಕ್ತರಿಗೆ ಈ‌ ಘಟನೆ ಅಚ್ಚರಿ ಮೂಡಿಸಿದ್ರೆ, ಮತ್ತೊಂದು ಕಡೆ ಹರಕೆ ತೀರಿಸಲು ಅಪಶಕುನವ ಎಂದು ಆತಂಕಕ್ಕೆ ಒಳಗಾಗಿದ್ದರು. ಮೂರು ತಾಸುಗಳ ಬಳಿಕ ಮರದಿಂದ ಕೆಳಗಿಳಿದ ಹುಂಜ ಹಿಡಿದು ನಿಟ್ಟುಸಿರು ಬಿಟ್ಟರು. ಬಳಿಕ ಬಿಸಿಲು ಮಾರಮ್ಮ ದೇವಿಗೆ ಮರದಿಂದ ಕೆಳಗಿಳಿದ ಹುಂಜ ಹಿಡಿದ ಭಕ್ತರು ಬಲಿ ಕೊಟ್ಟು ಹರಕೆ ತೀರಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಅಚ್ಚರಿ ಮೂಡಿಸಿದ ಘಟನೆ ಮಂಡ್ಯ ನಡೆದಿದೆ.pic.twitter.com/A0iYzYfL1R
— Vijayavani (@VVani4U)May 11, 2022

VIDEO: ‘ಹುಡುಗಿಗೆ ಪ್ರಶಸ್ತಿ ಕೊಡೋದಾ? ಛೇ… ನಮ್ಮ ನಿರ್ಧಾರ ಏನು ಅಂತ ಗೊತ್ತಿಲ್ವಾ ನಿಮ್ಗೆ?’

ಪಿಎಸ್​ಐ ಪರೀಕ್ಷೆ: ಗೋಲ್​ಮಾಲ್​ ದಂಪತಿ ಜೈಲಲ್ಲಿ ಭೇಟಿ- ಕಣ್ಣೀರ ಧಾರೆ, ಸಿಂಗಲ್​ ಸೆಲ್​ ಬೇಡ ಎಂದು ಅವಲತ್ತು

VIDEO: ಗ್ರಾಮಲೆಕ್ಕಾಧಿಕಾರಿ ಫುಲ್​ ಟೈಟ್​- ತಹಶೀಲ್ದಾರ್​ ಕಚೇರಿ ಎದುರೇ ಆಹಾ! ಎಂಥ ಸವಿ ನಿದ್ದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
