ನವದೆಹಲಿ: ಮುಂದಿನ ವರ್ಷ 18 ವಯಸ್ಸು ನಿಮಗೆ ಆಗುವುದಾದರೆ, ನೀವು ಈಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. ಹೀಗೊಂದು ಹೊಸ ಪ್ರಕಟಣೆಯನ್ನು ಇತ್ತೀಚೆಗೆ ಚುನಾವಣಾ ಆಯೋಗ ಹೊರಡಿಸಿತ್ತು. ಇದರ ಅರ್ಥ 17 ವರ್ಷಕ್ಕಿಂತ ಮೇಲ್ಪಟ್ಟರು ಈಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎನ್ನುವುದಾಗಿದೆ.
ಅದರ ಮುಂದುವರೆದಿರುವ ಭಾಗವಾಗಿ ಇದೀಗ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಅವಕಾಶಗಳನ್ನು ಚುನಾವಣಾ ಆಯೋಗ ನೀಡಿದೆ.
ಇಷ್ಟು ವರ್ಷಗಳು ಕೇವಲ ಜನವರಿ 1ರಂದು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿತ್ತು. ಆದರೀಗ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್​ಗೂ ನೀವು ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಒಂದು ವೇಳೆ ಈ ನಾಲ್ಕು ದಿನಾಂಕದಲ್ಲಿ ನಿಮಗೆ 18 ವರ್ಷ ತುಂಬುವುದೇ ಆಗಿದ್ದರೆ, ನೀವು ಅರ್ಜಿಯನ್ನು ಸಲ್ಲಿಸಲು ಕೂಡ ಅರ್ಹರಾಗಿರುತ್ತೀರಿ. ಒಂದು ವೇಳೆ ಯಾವುದೋ ಕಾರಣಗಳಿಂದ ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆಗದಿದ್ದರೆ ಅಂಥವರು ಕೂಡ ಈ ನಾಲ್ಕು ದಿನಾಂಕಗಳಂದು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ನೋಂದಾಯಿಸಿದ ನಂತರ, ನಿಮಗೆ ಚುನಾವಣಾ ಫೋಟೋ ಗುರುತಿನ ಚೀಟಿ (EPIC) ನೀಡಲಾಗುತ್ತದೆ. ಆದ್ದರಿಂದ ತಡ ಮಾಡುವುದು ಬೇಡ. ಒಂದು ವೇಳೆ 2023ರ ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರೊಳಗೆ 18 ವರ್ಷ ವಯಸ್ಸು ಆಗುವುದೇ ಆಗಿದ್ದರೆ ಅಂಥವರು ಹಾಗೂ ಇನ್ನಾವುದೇ ಕಾರಣಗಳಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದವರು ಕೂಡಲೇ ಅರ್ಜಿ ಸಲ್ಲಿಸಿ, ಗುರುತಿನ ಚೀಟಿ ಪಡೆದು ಮುಂಬರುವ ಚುನಾವಣೆಯಲ್ಲಿ ನಿಮ್ಮಿಷ್ಟದವರಿಗೆ ಮತದಾನ ಮಾಡಬಹುದಾಗಿದೆ.ವೋಟರ್​ ಹೆಲ್ಪ್​ಲೈನ್​ ಆ್ಯಪ್​ ಮೂಲಕ ಇಲ್ಲವೇ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಸೀಪದ ಬೂತ್​ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು.
ಯಾವ ನಮೂನೆ ಅರ್ಜಿಗಳನ್ನು ಪಡೆಯಬೇಕು?ಹೊಸದಾಗಿ ಮತದಾರರ ನೋಂದಣಿ ಮಾಡಿಕೊಳ್ಳುವುದಿದ್ದರೆ: ಫಾರ್ಮ್​ ನಂ. 6ಮತದಾರರ ಪಟ್ಟಿಯಲ್ಲಿನ ಮಾಹಿತಿ ತಿದ್ದುಪಡಿಗೆ- ನಮೂನೆ 8ಮತದಾ ಪಟ್ಟಿಯಿಂದ ಹೆಸರು ತೆಗೆಯುವುದರಿದ್ದರೆ- ಫಾರ್ಮ್​ 7ಆಧಾರ್​ ಸಂಖ್ಯೆಯನ್ನು ಮತದಾರ ಗುರುತಿನ ಚೀಟಿಯೊಂದಿಗೆ ಲಿಂಕ್​ ಮಾಡುವುದಿದ್ದರೆ- ಫಾರ್ಮ್​ ನಮೂನೆ 6ಬಿ
ವೋಟರ್​ ಹೆಲ್ಪ್​ಲೈನ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಲುhttp://www.nvsp.inಗೆ ಲಾಗಿನ್​ ಆಗಬೇಕು.
ಆಸ್ತಿಯಲ್ಲಿ ಅಜ್ಜನಿಗೆ ಮೋಸ ಮಾಡಿದ್ರೆ ನೀವೀಗ ಪ್ರಶ್ನಿಸುವಂತಿಲ್ಲ… ಕಾನೂನು ಏನು ಹೇಳುತ್ತದೆ ನೋಡಿ…

ಬಿಇಎಲ್​ನಲ್ಲಿ ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ ಆಹ್ವಾನ: ಅರ್ಜಿ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ

‘ಕೊಲೆಯಾದ’ ಪತ್ನಿ ಪ್ರೇಮಿಯ ತೋಳಲ್ಲಿ: ಅಮಾಯಕ ಪತಿ 10 ವರ್ಷಗಳ ಶಿಕ್ಷೆ ಅನುಭವಿಸುತ್ತಾ ಜೈಲಲ್ಲಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:11 + 19 =
Remember me
