ಬೆಂಗಳೂರು:ಮದುವೆ ಸಾಲ ತೀರಿಸುವ ಉದ್ದೇಶಕ್ಕಾಗಿ ಸ್ನೇಹಿತರೊಂದಿಗೆ ಸೇರಿ ಸರಗಳ್ಳತನಕ್ಕೆ ಇಳಿದಿದ್ದ ಆರೋಪಿ ಸೇರಿ ಮೂವರು ರಾಮಮೂತಿರ್ನಗರ ಪೊಲೀಸರ ಬಲೆಗೆ ಬಿದಿದ್ದಾರೆ.ಆಡುಗೋಡಿಯ ಅಪ್ಪಯ್ಯ(32), ಹೊಸಕೋಟೆಯ ಶಿವಕುಮಾರ್​ (23), ಗುಣಶೇಖರ್​ (34) ಬಂಧಿತರು.
ಆರೋಪಿ ಅಪ್ಪಯ್ಯ ಕೆಲ ತಿಂಗಳ ಹಿಂದೆ ವಿವಾಹವಾಗಿದ್ದ. ವಿವಾಹ ಸಮಾರಂಭಕ್ಕಾಗಿ ಪರಿಚಿತರ ಬಳಿ ಲಕ್ಷಾಂತರ ರೂ. ಸಾಲ ಮಾಡಿದ್ದ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಅಪ್ಪಯ್ಯಗೆ ಸಾಲ ತೀರಿಸಲಾಗದೇ ಕಳ್ಳತನಕ್ಕೆ ಇಳಿದಿದ್ದ. ಈ ಹಿಂದೆ ಸರಕಳ್ಳತನ ನಡೆಸಿ ಜೈಲು ಸೇರಿದ್ದ. ಜೈಲಿನಲ್ಲಿ ಇತರ ಆರೋಪಿಗಳಾದ ಶಿವಕುಮಾರ್​, ಗುಣಶೇಖರ್​ ಪರಿಚಿತರಾಗಿದ್ದರು. ಇತ್ತೀಚೆಗೆ ಜೈಲಿನಿಂದ ಹೊರ ಬಂದು ಮೂವರೂ ರಾಮಮೂತಿರ್ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ, ಮನೆಗಳ್ಳತನ ನಡೆಸುತ್ತಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ ?ಹೊರಮಾವು ನಿವಾಸಿ ಚಿನ್ನಮ್ಮ ಮಾ.11ರಂದು ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮನೆ ಸಮೀಪವಿರುವ ದೇವಾಲಯಕ್ಕೆ ಹೋಗಿ ಮನೆಗೆ ಆಟೋದಲ್ಲಿ ವಾಪಾಸ್ಸಾಗಿದ್ದರು. ಮನೆಯ ಮುಂಬಾಗ ಇಳಿದು ಮನೆಯೊಳಗೆ ಹೋಗಬೇಕೆನ್ನುವಷ್ಟರಲ್ಲಿ ಬೈಕ್​ನಲ್ಲಿ ಬಂದಿದ್ದ ಆರೋಪಿಗಳು ಇವರ ಕತ್ತಿನಲ್ಲಿದ್ದ 1.50 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಮಮೂತಿರ್ನಗರ ಪೊಲೀಸರು ಸ್ಥಳಿಯ ಸಿಸಿಕ್ಯಾಮರಾಗಳನ್ನು ಪರಿಶೀಲಿಸಿದಾಗ ಆರೋಪಿ ಶಿವಕುಮಾರ್​ನ ಮುಖ ಅಸ್ಪಷ್ಟವಾಗಿ ಕಂಡು ಬಂದಿತ್ತು. ಈ ಸುಳಿವಿನ ಮೇರೆಗೆ ಈತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈತ ನೀಡಿದ ಮಾಹಿತಿ ಆಧರಿಸಿ ಅಪ್ಪಯ್ಯ, ಗುಣಶೇಖರ್​ನನ್ನು ಬಂಧಿಸಲಾಗಿದೆ. ಸದ್ಯ ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಲ್ಲಿಂದ ಹುಲ್ಲು ಹಾಕಿದ್ರೆ ಅಲ್ಲಿಂದ ಹಾಲು ಬರತ್ತೆ’ ಎಂದ ಜಾಹೀರಾತು ಕಂಪೆನಿಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತರು!

ನಿನಗೆ ಆಸ್ತಿ ಕೊಡುವುದಿಲ್ಲ ಎಂದು ತಂದೆ ಹೇಳುತ್ತಿದ್ದಾರೆ- ನಾನು ಇದರ ವಿರುದ್ಧ ಕೋರ್ಟ್‌ಗೆ ಹೋಗಬಹುದಾ?

ತಂಗಿಯ ಜತೆ ಮಂಚದಲ್ಲಿ ಚಕ್ಕಂದ- ನಾಲ್ಕನೇ ಗಂಡನಿಂದ ‘ಡ್ರಗ್ಸ್‌ ರಾಣಿ’ಯ ದುರಂತ ಅಂತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
