ಚಿತ್ರದುರ್ಗ:ವೀರ್​ ಸಾವರ್ಕರ್​ ಕುರಿತು ಕೆಟ್ಟದ್ದಾಗಿ ಮಾತನಾಡಿದ ಹಾಗೂ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಅವರನ್ನು ಬೆಂಬಲಿಸಿದ ಕಾದಂಬರಿಕಾರ ಬಿ.ಎಲ್ ವೇಣು ಅವರಿಗೆ ಕೈಬರಹದ ಬೆದರಿಕೆ ಪತ್ರ ಬಂದಿದೆ. ಈ ಹಿಂದೆ ಕೂಡ ಒಂದು ಪತ್ರ ಬಂದಿತ್ತು. ಇದೀಗ ಮತ್ತೊಂದು ಪತ್ರ ಬಂದಿದೆ.
ಅದರಲ್ಲಿ ವೀರ್​ ಸಾವರ್ಕರ್ ಕುರಿತು ನೀಡಿದ ಹೇಳಿಕೆಗೆ ಬಹಿರಂಗ ಕ್ಷಮೆ ಕೇಳುವಂತೆ ತಿಳಿಸಲಾಗಿದೆ. ಪತ್ರದ ಕೊನೆಯಲ್ಲಿ ಸಹಷ್ಣು ಹಿಂದೂ ಎಂಬ ಉಲ್ಲೇಖವಿದ್ದು, ಯಾವುದೇ ವಿಳಾಸವಿಲ್ಲ. 61 ಸಾಹಿತಿಗಳಿಗೆ ಬುದ್ಧಿ ಹೇಳಿ ಹಾಗೂ ಕ್ಷಮೆ ಕೋರುವಂತೆ ಹೇಳಲಾಗಿದೆ.

ಬಿ,ಎಲ್​.ವೇಣು ಸರ್​, ನಮಸ್ತೆ ಎನ್ನುವುದರೊಂದಿಗೆ ಪತ್ರ ಶುರುವಾಗಿದೆ. ಸಾವರ್ಕರ್ ಅವರು ಇಡೀ ಜೀವನವನ್ನು ಸ್ವಾತಂತ್ರ್ಯ ಚಳವಳಿಯ ಯಜ್ಞ ಕಾರ್ಯಕ್ಕೆ ಅರ್ಪಣೆ ಮಾಡಿದ್ದಾರೆ. ಅಂಥವರನ್ನು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರುವುದಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ನಾಡದ್ರೋಹದ ಕೆಲಸ ಮಾಡಿದ್ದಾರೆ. ಅನೇಕ ಮಹನೀಯರ ಪಾಠವನ್ನು ಕಿತ್ತುಹಾಕಿದ್ದಾರೆ. ಇವರ ಬೆಂಬಲಕ್ಕೆ 61 ಸಾಹಿತಿಗಳು ನಿಂತಿದ್ದಾರೆ. ಈ ಎಲ್ಲರನ್ನೂ ಗಲ್ಲಿಗೇರಿಸಬೇಕು. ಇಲ್ಲವೆ ಗುಂಡಿಕ್ಕಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಕೂಡಲೇ ಎಲ್ಲರೂ ಕ್ಷಮೆ ಕೇಳಬೇಕು, ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ ಎಂಬ ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ.
ಈ ದೇಶದಲ್ಲಿ ಹುಟ್ಟಿ ಭಗವದ್ಗೀತೆಯ ಮೇಲೆ ಏಕಿಷ್ಟು ಹೀನಭಾವನೆ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಹಂಸಲೇಖ ಅವರು ಮೊದಲು ಹಂಸನಂತೆ ಇದ್ದರು. ಅವರನ್ನೂ ನೀವೆಲ್ಲಾ ಸೇರಿ ಕಂಸನಂತೆ ಮಾಡಿದ್ದೀರಿ ಎಂದು ಬರೆಯಲಾಗಿದೆ.(ದಿಗ್ವಿಜಯ ನ್ಯೂಸ್​)
ಬುಡಕಟ್ಟು ವಿದ್ಯಾರ್ಥಿಗಳ ಹಣ ದೇಶವಿರೋಧಿ ಚಟುವಟಿಕೆಗೆ? ಮೇಧಾ ಪಾಟ್ಕರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!

ಗನ್​ಮ್ಯಾನ್​ಗೆ ಪಿಎಸ್​ಐ ಪಟ್ಟ? ಶಾಸಕನ ಪುತ್ರ, ಸಹೋದರನ ಸುತ್ತ ಅಕ್ರಮದ ಘಾಟು- ಬಾಯಿಬಿಟ್ಟ ಕಿಂಗ್​ಪಿನ್​

ಗೋವಾದಲ್ಲಿ ಶುರುವಾಯ್ತು ರಾಜಕೀಯ ಕೋಲಾಹಲ: ಕಾಂಗ್ರೆಸ್​ನ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಬಿತ್ತು ಕೊಕ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:8 + eight =
Remember me
