ಧಾರವಾಡ:ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್​ ಕುಲಕರ್ಣಿ ಅವರು ಇದ್ದ ಕಾರೂ ಬೈಕ್​ಗಳಿಗೆ ಗುದ್ದಿದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ರಸ್ತೆ ಬದಿ ನಿಂತಿದ್ದ ಮೂರು ಬೈಕ್​ಗಳಿಗೆ ವಿಜಯ್​ ಅವರು ಇದ್ದ ಕಾರು ಡಿಕ್ಕಿಹೊಡೆದಿದೆ. ಈ ರಭಸಕ್ಕೆ ಕುಮಾರೇಶ್ವರನಗರದ ಚರಣ್ ಮೌನೇಶ್ವರ ನಾಯಕ (16) ಹಾಗೂ ಎತ್ತಿನಗುಡ್ಡದ ಶೇಖರ ಬಸಪ್ಪ ಹುದ್ದಾರ (37) ಅವರು ಮೃತಪಟ್ಟಿದ್ದಾರೆ. ಸಾಧನಕೇರಿಯ ಅರವಿಂದ ಮಲ್ಲನಗೌಡ ಪಾಟೀಲ ಎಂಬುವವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿ ವಿಜಯ್​ ಸೇರಿದಂತೆ ಮೂವರು ಇದ್ದು, ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವರ ಕಾರು ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿತ್ತು. ಬೆಳಗಾವಿ ರಸ್ತೆಯ ಕೆವಿಜಿ ಬ್ಯಾಂಕ್ ಎದುರು ನಿಂತಿದ್ದ ಬೈಕ್​ಗಳಿಗೆ ಕಾರು ಢಿಕ್ಕಿ ಹೊಡೆದಿದ್ದು ಈ ಅವಘಡ ಸಂಭವಿಸಿದೆ.
ನಮಗ್ಯಾವ ರೂಲ್ಸ್​ರೀ ಎಂದು ಹೆಲ್ಮೆಟ್​ ಇಲ್ದೇ ತ್ರಿಬಲ್​ ರೈಡಿಂಗ್​ ಹೋದ ಲೇಡಿ ಪೊಲೀಸರಿಗೆ ಬಿತ್ತು ದಂಡ

‘ಅನುಭವವಿಲ್ಲದ ಸಚಿವ… ಹಠಮಾರಿ ಸಿಎಂ.. ಈಶ್ವರಪ್ಪ ಖಾತೆಯ ಹಣ ಕಾಣತ್ತೆ, ಸಮಸ್ಯೆ ಗೊತ್ತಾಗಲ್ವಾ?’

ಕಳ್ಳರಿಗೆ ಬಲಿಯಾದ ಪೊಲೀಸ್ ಅಧಿಕಾರಿಯ ಶವ ನೋಡಿ ಪ್ರಾಣಬಿಟ್ಟ ಅಮ್ಮ! ಒಟ್ಟಿಗೇ ಶವ ಸಂಸ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
