ಜಡಿಗೇನಹಳ್ಳಿ (ಬೆಂಗಳೂರು ಗ್ರಾಮಾಂತರ):ಕುಸಿದ ತಡೆಗೋಡೆಯಡಿ ಅಪ್ಪಚ್ಚಿಯಾಗಿ ಸಾಯುವ ಹಣೆಬರಹ ಇವರದ್ದಾಗಿತ್ತಾ? ಇದಕ್ಕಾಗಿ ಅಷ್ಟು ದೂರದ ಬಿಹಾರದಿಂದ ಬಂದಿದ್ದರಾ, ಬಂದ ನಾಲ್ಕೇ ದಿನಕ್ಕೆ ಇವರಿಗೆ ಇಂಥ ದುರ್ಮರಣ ಕಾದಿತ್ತಾ..? ತಾತ್ಕಾಲಿಕ ಸೂರಿನಡಿ ನಿದ್ರೆಗೆ ಜಾರಿದ್ದ ಈ ಬಡಪಾಯಿಗಳು ಮುಂಜಾನೆ ವೇಳೆಗಾಗಲೇ ಚಿರನಿದ್ರೆಗೆ ಜಾರಿಬಿಟ್ಟರಾ…
ಸ್ಥಳೀಯರ ಇಂಥ ನೂರಾರು ಕರುಣಾಜನಕ ಪ್ರಶ್ನೆಗಳಿಗೆ ಕಾಚರಕಹಳ್ಳಿ ತಡೆಗೋಡೆ ಕುಸಿತ ಪ್ರಕರಣ ಜೀವಂತ ಸಾಕ್ಷಿಯಾಗಿ ನಿಂತಿದೆ.
ಹೌದು. ಗ್ರಾಮಾಂತರ ಜಿಲ್ಲೆ ಜಡಿಗೇನಹಳ್ಳಿ ಹೋಬಳಿ ಕಾಚರಕನಹಳ್ಳಿಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ಮಣ್ಣಿನಡಿ ಉಸಿರುಚೆಲ್ಲಿದ ನಾಲ್ವರು ಕಟ್ಟಡ ಕಾರ್ಮಿಕರು ಬಿಹಾರದಿಂದ ನಾಲ್ಕು ದಿನದ ಹಿಂದಷ್ಟೇ ಬಂದಿದ್ದರು ಎನ್ನಲಾಗಿದೆ. 8 ಮಂದಿಯ ತಂಡ ಕೂಲಿ ಅರಸಿಕೊಂಡು ಬಂದಿದ್ದು, ಇದರಲ್ಲಿ ನಾಲ್ವರು ಅಸುನೀಗಿದ್ದರೆ ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಹೆಣವಾಗಲು ಬಿಹಾರದಿಂದ ಇಲ್ಲಿಗೆ ಬಂದರಾ ಎಂಬ ಪ್ರಶ್ನಾರ್ಥಕ ಚಿಹ್ಹೆ ಸ್ಥಳೀಯ ಕಣ್ಣಾಲಿಗಳನ್ನು ತೇವಗೊಳಿಸಿದೆ. ಇವರು ಯಾರು? ಇವರ ಬಂಧುಗಳ್ಯಾರು, ಸ್ನೇಹಿತರು, ಪರಿಚಿತರು.. ಯಾರೂಬ್ಬರೂ ಸ್ಥಳೀಯರಿಗೆ ಗೊತ್ತಿಲ್ಲ. ಇವರ ಕಡೆಯವರಿಗೆ ಸಾವಿನ ಸುದ್ದಿ ಮುಟ್ಟಿಸಲೂ ಸಾಧ್ಯವಾಗದಂಥ ದುರ್ವಿಧಿ ಇವರದ್ದಾಗಿದೆ, ಇವರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದ್ದು. ಇವರ ಸಂಗಡವಿದ್ದ ಸಣ್ಣಸಣ್ಣ ಬಟ್ಟೆ ಮೂಟೆಗಳು, ಕೆಲವು ಪಾತ್ರೆಸಾಮಾನುಗಳು ದೇವರ ಪೋಟೊ ಎಲ್ಲವೂ ಅವಶೇಷಗಳಡಿ ಮಣ್ಣಾಗಿವೆ.
ಬಣ್ಣ ಬಳಿಯುವವರ ಬದುಕು ಅಪೋಷನ:ಈ ಎಂಟೂ ಜನ ಕಾರ್ಮಿಕರು ಪೇಂಟರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಪೇಂಟಿಂಗ್ ಕೆಲಸಕ್ಕಾಗಿ ಕರೆತರಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ತಂದೆ-ತಾಯಿ, ಹೆಂಡತಿ ಮಕ್ಕಳನ್ನು ದೂರದ ಊರಿನಲ್ಲಿ ಬಿಟ್ಟು ಹೊಟ್ಟೆಪಾಡಿಗಾಗಿ ಬ್ರೆಷ್ ಹಿಡಿದು ಬಂದ ಪೇಂಟರ್‌ಗಳ ಬದುಕನ್ನು ಜವರಾಯ ತಡೆಗೋಡೆ ರೂಪದಲ್ಲಿ ಅಪೋಷನ ತೆಗೆದುಕೊಂಡಿದ್ದಾನೆ. ಸಮರ್ಪಕ ಗಾಳಿ ಬೆಳಕಿಲ್ಲ, ಭದ್ರವಾದ ಗೋಡೆಯೂ ಇಲ್ಲದ ಕೇವಲ ನಾಲ್ಕೈದು ತಗಡಿನ ಶೀಟ್‌ಗಳನ್ನು ಹೊದಿಸಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ಶೆಡ್ ನಾಲ್ವರನ್ನು ಸಾವಿನ ಮನೆಗೆ ದೂಡಿದೆ. ಕಟ್ಟಡ ನಿರ್ಮಾಣ ಮಾಲೀಕರು, ಅಲ್ಲಿನ ಇಂಜಿನಿಯರ್, ಕಾರ್ಮಿಕ ಇಲಾಖೆಯ ಬೇಜವಬ್ದಾರಿ ಅಮಾಕರ ಜೀವವನ್ನು ಬಲಿತೆಗೆದುಕೊಂಡಿದೆ.
ಅದು ನನ್ನ ಬರ್ತ್​ಡೇಟ್​ ಅಲ್ವೋ, ಡೆತ್​ಡೇಟ್​ ಎಂದಿದ್ದ ಬಾಲಕ: ಸ್ನೇಹಿತನಿಗೆ ಹೇಳಿದ್ದ ಮಾತು ನಿಜವಾಗಿತ್ತು!

ಕೂಡ್ಲಿಗಿಯಲ್ಲೊಂದು ಬೆಚ್ಚಿಬೀಳೋ ಘಟನೆ: ಮದುವೆಗೆ ಒಪ್ಪಲಿಲ್ಲವೆಂದು ರುಂಡ ಕಡಿದು ಪೊಲೀಸ್​ ಠಾಣೆಗೆ ತಂದ!

ಕಂಕುಳಿನ ಕೂದಲಿನಿಂದ ಕೋಟಿ ಕೋಟಿ ರೂ. ಗಳಿಸ್ತಾಳೆ ಈಕೆ- ಬೆವರೇ ಈಕೆಯ ಆದಾಯದ ಮೂಲವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nineteen =
Remember me
