ಬೆಂಗಳೂರು:ಸರ್ಕಾರ ಎಷ್ಟೇ ಮನವಿ ಮಾಡಿಕೊಳ್ಳುತ್ತಿದ್ದರೂ ಸಾರಿಗೆ ನೌಕರರು ತಮ್ಮ ಪಟ್ಟನ್ನು ಬಿಡುತ್ತಿಲ್ಲ. ಮುಷ್ಕರವನ್ನು ಮುಂದುವರೆಸಿದ್ದಾರೆ.
ಇದಾಗಲೇ ಏನೆಲ್ಲಾ ಸಾಧ್ಯವೋ ಅದನ್ನು ಸರ್ಕಾರ ಮಾಡಿದೆ. ಹೆದರಿಸಿ, ಗದರಿಸಿ, ಮನವಿ ಮಾಡಿ ಎಲ್ಲವೂ ಆಗಿಹೋಗಿದೆ. ಕೆಲಸಕ್ಕೆ ಬರದಿದ್ದರೆ ಸಂಬಳ ಕೊಡಲ್ಲ ಎಂದು ಇದಾಗಲೇ ಸರ್ಕಾರ ಹೆದರಿಸಿದೆ. ಕೆಲ ನೌಕರರ ಮೇಲೆ ಕ್ರಮ ಜರುಗಿಸಿರುವುದೂ ಆಗಿದೆ. ಔದ್ಯೋಗಿಕ ನ್ಯಾಯಧೀಕರಣದಲ್ಲಿ ಪ್ರಕರಣ ಬಾಕಿ ಇದೆ ಎಂದು ಎಚ್ಚರಿಕೆ ಕೊಟ್ಟಿದ್ದೂ ಆಯಿತು, ಇದು ಅಗತ್ಯ ಸೇವೆಯಾಗಿದ್ದು ಬಂದು ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡಿದ್ದೂ ಆಯಿತು.
ಆದರೆ ಜಪ್ಪಯ್ಯ ಎಂದರೂ ಸಾರಿಗೆ ನೌಕರರು ಪಟ್ಟುಬಿಡುತ್ತಿಲ್ಲ. ಇದರಿಂದ ದಂಡಂ ದಶಗುಣಂ ಎಂದುಕೊಂಡಿರುವ ಸರ್ಕಾರ ಇದೀಗ ಕೊನೆಯ ಅಸ್ತ್ರವಾಗಿ ಹೊಸವರ್ಷ ಯುಗಾದಿಯನ್ನು ಈ ನೌಕರರ ಪಾಲಿಗೆ ಅನಿವಾರ್ಯವಾಗಿ ಕಹಿಯನ್ನಾಗಿ ಮಾಡಲು ಹೊರಟಿದೆ. ನೌಕರರು ಕೆಲಸಕ್ಕೆ ಬರುವವರೆಗೂ ಮಾರ್ಚ್ ಸಂಬಳ ನೀಡುವುದಿಲ್ಲ ಎಂದು ಇದೀಗ ಕೊನೆಯಾಗಿ ಹೇಳಿದೆ. ಇಲ್ಲಿಯವರೆಗೆ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದಷ್ಟೇ ಹೇಳುತ್ತಿದ್ದ ಸಾರಿಗೆ ಇಲಾಖೆ ಇದೀಗ ಅಂತಿಮ ನಿರ್ಧಾರಕ್ಕೆ ಬಂದಿದ್ದು, ಸಂಬಳ ನೀಡದೇ ಇರಲು ನಿರ್ಧರಿಸಿದೆ.
ನೌಕರರ ಮುಷ್ಕರಕ್ಕೆ ಯಾವುದೇ ಕಾರಣಕ್ಕೂ ಮಣಿಯದಿರಲು ಸರ್ಕಾರ ನಿರ್ಧಾರ ಮಾಡಿರುವ ಕಾರಣ, ಸಾರಿಗೆ ನೌಕರರಿಗೆ ಯುಗಾದಿಗೆ ಕತ್ತರಿ ಬೀಳುವ ಎಲ್ಲಾ ಲಕ್ಷಣಗಳೂ ಗೋಚರವಾಗಿದೆ.
ಮುಷ್ಕರ ನಿರತ ನೌಕರರಿಗೆ ಸಂಬಳ ನೀಡುವುದಿಲ್ಲ, ಕೆಲಸಕ್ಕೆ ಹಾಜರಾದ್ರೆ ಮಾತ್ರ ಸಂಬಳ. ನಾಳೆಯಿಂದ ಕೆಲಸಕ್ಕೆ ಹಾಜರಾದವರ ಅಕೌಂಟ್​ಗೆ ಸಂಬಳ ಸೇರುತ್ತದೆ ಎಂದು ಹೇಳಿರುವ ಸರ್ಕಾರ, ನಾಳೆಯಿಂದ ಮತ್ತಷ್ಟು ಕಠಿಣ ಧೋರಣೆ ತೋರಲು ನಿರ್ಧರಿಸಿದೆ.
ಕಡಿಮೆ ದರದಲ್ಲಿ ಸ್ವಂತ ಮನೆ ಆಕಾಂಕ್ಷಿಗಳಿಗೆ ಸಚಿವ ಮುರುಗೇಶ್​ ನಿರಾಣಿ ನೀಡಿದರೊಂದು ಗುಡ್​ನ್ಯೂಸ್

ಕೆಲಸದ ಒತ್ತಡ ತಾಳಲಾಗುತ್ತಿಲ್ಲ… ಸಾಯದೇ ದಾರಿ ಇಲ್ಲ… ಡೆತ್​ನೋಟ್​ ಬರೆದು ಬ್ಯಾಂಕ್​ ಮ್ಯಾನೇಜರ್​ ಆತ್ಮಹತ್ಯೆ

ಬಿಜೆಪಿಯವ್ರು ದುಡ್ಡು ಕೊಟ್ರೂ ತಗೊಳಿ, ಮಹಿಳೆಯರೇ ಕೈಒಡ್ಡಿ… ಆದ್ರೆ ವೋಟ್​ ಮಾತ್ರ ನಮ್ಗೆ ಹಾಕಿ… ಎಂದ ಅಧ್ಯಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
