ಬೆಂಗಳೂರು:ಆರನೇ ವೇತನ ಆಯೋಗ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇದೇ ತಿಂಗಳ 7ರಂದು ಸಾರಿಗೆ ನೌಕರರು ಮತ್ತೊಮ್ಮೆ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರು, ಕಳೆದ‌ ಡಿಸೆಂಬರ್ ತಿಂಗಳಿನಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಮಾಡಿದ್ದರು. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ  ಅನುಭವಿಸಿದ್ದರು. ಒಕ್ಕೂಟದ‌ ಮುಖಂಡರು, ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೆವು. 9 ಬೇಡಿಕೆಗಳನ್ನು ನಮ್ಮ ಮುಂದಿಟ್ಟಿದ್ದರು. ಈ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಲಿಖಿತವಾಗಿ ಭರವಸೆ ಕೊಟ್ಟಿದ್ದೇವೆ. 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ ಎಂದು ಹೇಳಿದರು.
ಸಾರಿಗೆ ನೌಕರರಿಗೆ ಆರೋಗ್ಯ ಭಾಗ್ಯ, ಕೋವಿಡ್‌ನಿಂದ ಮೃತಪಟ್ಟರೆ 30 ಲಕ್ಷ ರೂಪಾಯಿ ಪರಿಹಾರ. ನಿಗಮದಲ್ಲಿ ಹೆಚ್.ಆರ್.ಎಂ.ಎಸ್ ಅಳವಡಿಸಲು ಆದೇಶ. ಕೋವಿಡ್ ಕಾರಣ ಸ್ಥಗಿತವಾಗಿದ್ದ ಬಾಟಾ ಕೊಡಲು ಒಪ್ಪಿಗೆ. ಹಿರಿಯ ಅಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ.  NINC ಹಣವೂ ನೀಡದೇ, ಟಿಕೆಟ್ ನೀಡದೆ ಇದ್ದರೂ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇವೆ. ಅಂತರ್ ನಿಗಮ ವರ್ಗಾವಣೆಗೆ ಸರ್ಕಾರದ ಒಪ್ಪಿಗೆ ನೀಡಿದೆ. ಬಿಎಂಟಿಸಿಯಲ್ಲಿ ಶೇ. 60 ಸಿಬ್ಬಂದಿ ಉತ್ತರ ಕರ್ನಾಟಕದವರು. ಪ್ರತಿವರ್ಷ ಶೇ. 2 ಸಿಬ್ಬಂದಿ ವರ್ಗಾವಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಒಂದೇ ವಯಸ್ಸು, ಒಂದು ಸಂಬಳ ಇದ್ದರೆ ಯಾವುದೇ ನಿರ್ಬಂಧ ಇಲ್ಲದೇ ವರ್ಗಾವಣೆ ಅವಕಾಶ ನೀಡಲಾಗಿದೆ. ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಿದ್ದೇವೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ರಾಜ್ಯ ಸರ್ಕಾರದಂತೆ 6ನೇ ವೇತನ ಆಯೋಗದಂತೆ ಸಂಬಳ ನೀಡಲು ಬೇಡಿಕೆ ಇಟ್ಟಿದ್ದರು.  ಕೋವಿಡ್ ಬಂದು ಒಂದು ವರ್ಷ ಆಯ್ತು. ಕೋವಿಡ್‌ಗೆ ಮೊದಲು ಪ್ರತಿನಿತ್ಯ 1 ಕೋಟಿ ಜನರು ಸಂಚರಿಸುತ್ತಿದ್ದರು. ಆದರೆ ಕೊರೋನಾ ಕಾರಣ ಈಗ 60 ಲಕ್ಷ ಜನ ಮಾತ್ರ ಸಂಚಾರ ಮಾಡುತ್ತಿದ್ದಾರೆ. ಬರುವ ಆದಾಯ ಇಂಧನ ಹಾಗೂ ವೇತನ 19.6 ಸಾವಿರ ಕೋಟಿ ಕೊರತೆಯಾಗುತ್ತಿದೆ. ಈವರೆಗೆ ಸಿಬ್ಬಂದಿಗೆ ಸಂಬಳ ಕಡಿತ ಮಾಡಿಲ್ಲ. ಉಪ ಚುನಾವಣೆಗಳು ನಡೆಯುತ್ತಿವೆ. ಚುನಾವಣಾ ನೀತಿ‌ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಅಡ್ಡಿ ಬಂದ ಕಾರಣ, ಯಾವುದೇ ಯೋಜನೆ ಘೋಷಿಸುವಂತಿಲ್ಲ. ಅದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ‌‌ ಪಡೆಯುವುದು ಅನಿವಾರ್ಯ. ಚುನಾವಣಾ ಆಯೋಗ ಅನುಮತಿ ನೀಡಿದರೆ ಸಂಬಳ ಹೆಚ್ಚಳ ಮಾಡುತ್ತೇವೆ. ಈ ಬಗ್ಗೆ ಹಣಕಾಸು ಇಲಾಖೆ ಜೊತೆ‌ ಮಾತನಾಡಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ಮುಷ್ಕರ ಮಾಡಬೇಡಿ ಎಂದು ಸಾರಿಗೆ ನೌಕರರು ಮತ್ತು ಮುಖಂಡರಿಗೆ ಮನವಿ ಮಾಡುತ್ತೇನೆ ಎಂದರು.
ನಾಲ್ಕು ನಿಗಮಗಳಿಂದ ಪ್ರತಿವರ್ಷ 3200 ಕೋಟಿ ನಷ್ಟವಾಗುತ್ತಿದೆ. ಸಿಬ್ಬಂದಿ ಸಂಬಳ ಹೆಚ್ಚಳ ಮಾಡಿದರೆ ಹಣಕಾಸಿನ ಹೊರೆಯಾಗಲಿದೆ. ಆದರೂ ಸಿಬ್ಬಂದಿಗಳ ಬೇಡಿಕೆ ಈಡೇರಿಸಲು ತೀರ್ಮಾನ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡದಿದ್ದರೆ ಸಾರಿಗೆ ನೌಕರರು ಪ್ರತಿಭಟನೆ ಮಾಡಿದರೆ ಕಷ್ಟವಾಗುತ್ತದೆ. ಬಡವರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಕಳೆದ ಬಾರಿ ನಾಲ್ಕು ದಿನ ಮುಷ್ಕರ ನಡೆದಿದೆ. ನಾಲ್ಕು ದಿನದಲ್ಲೇ ಒಟ್ಟು 7 ಕೋಟಿ ನಷ್ಟವಾಗಿದೆ. ಕೋರ್ಟ್ ಕೂಡ ನಮಗೆ ನೋಟಿಸ್ ನೀಡಿದೆ. ಸರ್ಕಾರವೂ ನಿಮ್ಮ‌ ಪರ ನಿಲ್ಲಲಿದೆ. ಆದರೆ ನೀವು ನಿಗಮಗಳಿಗೆ ಶಕ್ತಿ ನೀಡಬೇಕು. ಏಪ್ರಿಲ್ 7ರಂದು ನಡೆಸಲು ಹೊರಟಿರುವ ಮುಷ್ಕರ ಮುಂದೂಡಿ ಎಂದು ಸಾರಿಗೆ ನೌಕರರಿಗೆ ಸಚಿವ ಲಕ್ಷ್ಮಣ ಸವದಿ‌ ಮನವಿ ಮಾಡಿದರು.
6ನೇ ವೇತನ ಆಯೋಗದ ಸಮನಾಂತರ ಸಂಬಳದ ಬೇಡಿಕೆ ಇದೆ. ನಾವು ಸಿಬ್ಬಂದಿಗೆ ಹೆಚ್ಚುವರಿ ಸವಲತ್ತುಗಳನ್ನು ಕೊಡುತ್ತಿದ್ದೇವೆ. ಓಟಿ ಕೊಡುತ್ತಿದ್ದೇವೆ, ಕಂಡಕ್ಟರ್‌ಗೆ ಶೇ. 2 ಇನ್ಸೆಂಟಿವ್ ಇದೆ. ಸಮನಾಂತರ ಸಂಬಳ ನೀಡುವುದಾದರೆ ಹೆಚ್ಚುವರಿ ಸವಲತ್ತುಗಳ ಬಗ್ಗೆಯೂ ಚರ್ಚೆಯಾಗಬೇಕು. ಹೀಗಾಗಿ ಸಂಬಳ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ.  ಆರನೇ ವೇತನ ಆಯೋಗಕ್ಕೆ ಸಮಾನ ಸಂಬಳ ನೀಡಿದರೆ, ಹೆಚ್ಚುವರಿ ಸವಲತ್ತುಗಳನ್ನು ನಿಲ್ಲಿಸಬೇಕಾಗುತ್ತದೆ. ಸರ್ಕಾರ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಂಡಂತಾಗುತ್ತದೆ ಎಂದು ಹೇಳಿದರು.
ತಾಳಿ ಕಟ್ಟಿಸಿಕೊಳ್ಳಲು ಒಪ್ಪದ ಬಾಲಕಿಯ ಕತ್ತನ್ನೇ ಸೀಳಿ ಭೀಕರವಾಗಿ ಕೊಂದ ಪಾಪಿ ಯುವಕ!

ಪದವೀಧರರಿಗೆ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗ- ₹60 ಸಾವಿರದವರೆಗೆ ಸಂಬಳ

ತುಳಿತಕ್ಕೊಳಗಾದವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ತಿಲ್ವಾ ಎಂದು ತಮ್ಮದೇ ಪಕ್ಷವನ್ನು ತಿವಿದ ಮುನಿಯಪ್ಪ

ಗಂಡನ ಮನೆಯಲ್ಲಿ ಹಿಂಸೆ- ಹೊಂದಿಕೊಂಡು ಹೋಗು ಎನ್ನುವ ತಾಯಿ… ಪ್ಲೀಸ್​ ನನಗೆ ದಾರಿ ತೋರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 16 =
Remember me
