ತುಮಕೂರು:ಕಾಂಗ್ರೆಸ್​ ಪಕ್ಷದ ವಿರುದ್ಧ ಹೋದಲ್ಲಿ, ಬಂದಲ್ಲಿ ಅಸಮಾಧಾನ ಹೊರಹಾಕುತ್ತಿದ್ದ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಅವರು, ಕೊನೆಗೂ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಸದ್ಯ ಕೆ.ಪಿ.ಸಿ.ಸಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು.
ಇಂದು ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್​ ಪಕ್ಷದ ವಿರುದ್ಧ ಅವರು ಅಸಮಾಧಾನ ಹೊರ ಹಾಕಿದರು. ರಾಜೀನಾಮೆ ನಿರ್ಧಾರವನ್ನು ಅವರು ಇದೇ ವೇಳೆ ಅಧಿಕೃತವಾಗಿ ಪ್ರಕಟಿಸಿದರು. ಇತ್ತೀಚಿಗೆ ಕಾಂಗ್ರೆಸ್​ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕ್ತಲೇ ಇದ್ದರು. ಹೋದಲ್ಲಿ ಬಂದಲ್ಲಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಈಗ ಅಂತಿಮವಾಗಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ಲಕ್ಷ್ಮೀನಾರಾಯಣ ಅವರು ರವಾನಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
1999ರ ಚುನಾವಣೆಯಲ್ಲಿ ಬಿಜೆಪಿಯಿಂದ ತುರುವೇಕೆರೆಯಲ್ಲಿ ಸ್ಪರ್ಧಿಸಿ ಗೆದ್ದು ಇವರು ಶಾಸಕರಾಗಿದ್ದರು. 2012ರಲ್ಲಿ ಎಂಎಲ್ಸಿ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದರು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಈಗ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಪುನಃ ಕಮಲ ಹಿಡಿಯಲು ಮುಂದಾಗಿದ್ದಾರೆ. ಬಿಜೆಪಿ ತನಗೆ ಹಲವು ಸ್ಥಾನಮಾನಗಳನ್ನು ನೀಡಿ ರಾಜ್ಯ ಮಟ್ಟದಲ್ಲಿ ಗುರುತಿಸಿದೆ. ನನ್ನನ್ನು ಶಾಸಕ, ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಹೀಗಾಗಿ ನಾನು ಬಿ.ಜೆ.ಪಿಯ ಋಣ ತೀರಿಸುವೆ. ಬಿಜೆಪಿಯನ್ನು ಸುಭದ್ರವಾಗಿ ಸಂಘಟಿಸುವೆ ಎಂದಿದ್ದಾರೆ ಲಕ್ಷ್ಮೀನಾರಾಯಣ. (ದಿಗ್ವಿಜಯ ನ್ಯೂಸ್​)
ಕಾಂಗ್ರೆಸ್​ ಅಧ್ಯಕ್ಷ ಗಾದಿಯ ಮೇಲೆ ಸಂಸದ ಶಶಿ ತರೂರ್​ ಕಣ್ಣು? ಕುತೂಹಲ ಕೆರಳಿಸಿದ ಬರಹ…

ಹೆಚ್ಚುತ್ತಲೇ ಇದೆ ಗೂಗಲ್​ ಮ್ಯಾಪ್ ಅವಘಡ: ಕಾರು ಸಹಿತ ಪ್ರವಾಹದಲ್ಲಿ ಸಿಲುಕಿದ ​ಬೆಂಗಳೂರಿನ ಕುಟುಂಬ!


ಹೆಚ್ಚುತ್ತಲೇ ಇದೆ ಗೂಗಲ್​ ಮ್ಯಾಪ್ ಅವಘಡ: ಕಾರು ಸಹಿತ ಪ್ರವಾಹದಲ್ಲಿ ಸಿಲುಕಿದ ​ಬೆಂಗಳೂರಿನ ಕುಟುಂಬ!

Sign in to your account
Please enter an answer in digits:nineteen − 11 =
Remember me
