ತುಮಕೂರು:ಕನ್ನಡ ಕಲಿಸು ಎಂದು ಹೇಳಿ 13 ವರ್ಷದ ಬಾಲಕನೊಬ್ಬನನ್ನು ಲಾಡ್ಜ್‌ನಲ್ಲಿ ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ ತುಮಕೂರಿನ ಮದರಾಸಾ ಶಿಕ್ಷಕರನಿಗೆ ಪೋಕ್ಸೋ ವಿಶೇಷ ನ್ಯಾಯಾಲಯ 11 ವರ್ಷಗಳ ಶಿಕ್ಷೆ ವಿಧಿಸಿದೆ. ಜತೆಗೆ ಸಂತ್ರಸ್ತ ಬಾಲಕನಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಉತ್ತರ ಪ್ರದೇಶ ಮೂಲದ ಮಫ್ತಿ ಮುಷರಫ್‌ (42) ಎಂಬ ವಿಕೃತಕಾಮಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈತ ತುಮಕೂರಿನ ಅಮಲಾಪುರದ ಮದರಸಾದಲ್ಲಿ ಶಿಕ್ಷಕನಾಗಿದ್ದ.
ರೈಲ್ವೆ ಟಿಕೆಟ್‌ ಬುಕಿಂಗ್‌ ಮಾಡಬೇಕು. ಕನ್ನಡ ಅರ್ಥವಾಗುವುದಿಲ್ಲ, ಕನ್ನಡ ಹೇಳಿಕೊಡು ಎಂದು ಹೇಳಿದ್ದ ಈ ಕಾಮಿ, ನಂತರ ಬಾಲಕನನ್ನು ಕರೆದುಕೊಂಡು ಹೋಗಿದ್ದ. ನಗರದ ರೈಲ್ವೆ ನಿಲ್ದಾಣದ ಲಾಡ್ಜ್‌ನಲ್ಲಿ ಆತನನ್ನು ಇರಿಸಿದ್ದ. ಬೈಕ್‌ನಲ್ಲಿ ಪೆಟ್ರೋಲ್‌ ಖಾಲಿಯಾಗಿದ್ದು, ಹೋಗಲು ಆಗುವುದಿಲ್ಲ, ಸದ್ಯ ಲಾಡ್ಜ್‌ನಲ್ಲಿ ಉಳಿಯೋಣ ಎಂದು ಅವನನ್ನು ಉಳಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ. ಮರುದಿನ ಬಾಲಕನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಇದರ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದ.
ಇದರಿಂದ ಹೆದರಿದ್ದ ಬಾಲಕ ತನ್ನ ತಾಯಿಗೆ ವಿಷಯ ತಿಳಿಸಿದ್ದ. ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆರು ವರ್ಷಗಳ ವಿಚಾರಣೆ ಬಳಿಕ ಇದೀಗ ಕೋರ್ಟ್‌ ತೀರ್ಪು ನೀಡಿದೆ. ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್‌.ಕೃಷ್ಣಯ್ಯ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪಾಲಕರೇ ಎಚ್ಚರ: ಭಗತ್​ಸಿಂಗ್​ ಪಾತ್ರ ಪ್ರಾಕ್ಟೀಸ್​ ಮಾಡುವಾಗ ಪ್ರಾಣಕಳೆದುಕೊಂಡ ಬಾಲಕ!

ಯುವಕರೇ ಹುಷಾರ್​! ಫಸ್ಟ್​ ನೈಟೇ ಶಾಕ್ ಕೊಟ್ಟ ಸುಂದರಿ​- ಟೆರೇಸ್​ ಹಾರಿ ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
